ಸಿಂಗಲ್‌ ಬಾಯ್ಸ್‌ಗೆ ಕ್ರಿಸ್ಮಸ್ ಬಂಪರ್ ಆಫರ್..! ಈಕೆಯ ಈ ಬೇಡಿಕೆ ಈಡೇರಿಸಿದ್ರೆ, ನೀವಾಗ್ತಿರ ಬಾಯ್‌ಫ್ರೆಂಡ್..

Girlfriend Package : ಬಾಯ್ಸ್‌ ನಿಮ್ಗೊಂದು ಬಂಪರ್ ಆಫರ್ ಇಲ್ಲಿದೆ.. ನೀವು ಇದನ್ನು ನಂಬದಿರಬಹುದು ಆದರೆ ಇದು ಸತ್ಯ.. ಈ ಮೇಲಿನ ಫೊಟೋದಲ್ಲಿರುವ ಸುಂದರಿ ಸಿಂಗಲ್‌ ಬಾಯ್ಸ್‌ಗೆ ಕ್ರಿಸ್ಮಸ್‌ ಉಡುಗೂರೆ ನೀಡಲು ಬಯಸಿದ್ದು.. ಈಕೆಯ ಕೆಲವೊಂದಿಷ್ಟು ಬೇಡಿಕೆ ಈಡೇರಿಸಿದ್ರೆ ನಿಮ್ಮ ಜೊತೆ ಗರ್ಲ್‌ಫ್ರೆಂಡ್‌ ಆಗಿ ಇರ್ತಾಳಂತೆ.. ಹಾಗಿದ್ರೆ ಈ ಗ್ಲಾಮರ್‌ ಗೊಂಬೆಯ ಡಿಮ್ಯಾಂಡ್‌ ಏನು..? ಬನ್ನಿ ನೋಡೋಣ.. 

1 /7

ಹಬ್ಬ ಸೀಸನ್‌ನಲ್ಲಿ ಕಾರು, ಬೈಕ್‌, ಗೋಲ್ಡ್‌ ಸೇರಿದಂತೆ ಅನೇಕ ವಸ್ತುಗಳ ಮೇಲೆ ರಿಯಾಯಿತಿ ಕೊಡುಗೆಗಳು ಮತ್ತು ಇತರ ಗಿಫ್ಟ್‌ ಆಫರ್‌ಗಳನ್ನು ನೀಡಲಾಗುತ್ತದೆ. ಗ್ರಾಹಕರನ್ನು ಆಕರ್ಷಿಸಲು ಕಂಪನಿಗಳು ಈ ವಿಧಾನವನ್ನು ಅನುಸರಿಸುತ್ತವೆ ಅಂತ ಎಲ್ಲರಿಗೂ ಗೊತ್ತು.   

2 /7

ಕಂಪನಿಗಳ ಜೊತೆ ಇತ್ತೀಚಿಗೆ ಕೆಲವೊಂದಿಷ್ಟು ಜನರು ಸಹ ತಮ್ಮನ್ನು ತಾವು ಮಾರಾಟಕ್ಕೆ ಇಲ್ಲವೇ ಬಾಡಿಗೆಗೆ ಘೋಷಿಸುತ್ತಾರೆ.. ಗಂಟೆಗಳ ಕಾಲ ಗೆಳತಿಯಾಗಿರುವುದು, ಇಲ್ಲವೇ ಹೆಂಡತಿಯಂತೆ ನಡೆದುಕೊಳ್ಳುವುದು.. ಹೀಗೆ ಹಲವಾರು ಆಫರ್‌ ನೀಡ್ತಾರೆ.. ಇದೇನು ಈಗ ಹೊಸದಲ್ಲಿ ಬಿಡಿ..   

3 /7

ದಿ ಸನ್ ವರದಿಯ ಪ್ರಕಾರ, ಅಮೆರಿಕದ ಮಿಯಾಮಿ ನಿವಾಸಿ ಜೆಸ್ಸೆನಿಯಾ ರೆಬೆಕ್ಕಾ ಎಂಬ ಹುಡುಗಿ ಸಾಮಾಜಿಕ ಮಾಧ್ಯಮದಲ್ಲಿ ಕಾನೂನುಬದ್ಧವಾಗಿ ಬೆಲೆ ಕಾರ್ಡ್ ಹಾಕುವ ಮೂಲಕ "ಗೆಳತಿ ಪ್ಯಾಕೇಜ್" ಘೋಷಿಸಿದ್ದಾಳೆ. ಹಬ್ಬದ ಸಮಯದಲ್ಲಿ ಒಂಟಿ ಯುವಕರಿಗೆ ಗೆಳತಿಯರಾಗುವ ಮೂಲಕ ಹೆಚ್ಚಿನ ಹಣಕ್ಕೆ ಅನುಗುಣವಾಗಿ ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದಾಳೆ.   

4 /7

29 ವರ್ಷದ ಜೆಸ್ಸಿಕಾ ರೆಬೆಕಾ, ಸಿಂಗಲ್‌ ಹುಡುಗರಿಗೆ ʼಕ್ರಿಸ್ಮಸ್ ಗೆಳತಿ ಪ್ಯಾಕೇಜ್ʼ ಅನ್ನು ಘೋಷಿಸಿದ್ದಾಳೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಕೂಡ ಹಾಕಿದ್ದಾರೆ. ಅದರಂತೆ ಈ ಚೆಲುವೆ 1 ಗಂಟೆ ಗೆಳತಿಯಾಗಲು 150 ಡಾಲರ್ ಅಂದರೆ 12,701 ರೂಪಾಯಿ ಚಾರ್ಜ್ ಮಾಡಿದ್ದಾಳೆ.   

5 /7

ಮೂರು ಪ್ಯಾಕೆಜ್‌ ಸಿಲ್ವರ್‌, ಗೋಲ್ಡ್‌, ಪ್ಲಾಟಿನಮ್‌.. ರೆಬೆಕಾ ಜೊತೆ ಇರ್ಬೇಕು ಅಂದ್ರೆ, ಸಿಲ್ವರ್‌.. $250 (ರೂ. 21,000) ಮತ್ತು ಉಡುಗೊರೆಯನ್ನು ನೀಡಬೇಕು. ಗೋಲ್ಡ್‌ ಪ್ಯಾಕೇಜ್.. ಶುಲ್ಕ $450 (ಸುಮಾರು ರೂ. 38,000) ಗೆ ಹೆಚ್ಚಾಗುತ್ತದೆ. ಪ್ಲಾಟಿನಂ ಪ್ಯಾಕೇಜ್ ತೆಗೆದುಕೊಂಡರೆ $600 ಅಂದರೆ 50,000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.   

6 /7

ಈ ಯೋಜನೆಗಳಿಗೆ ಅನುಗುಣವಾಗಿ, ಗ್ರಾಹಕರೊಂದಿಗೆ ಅವರ ಮನೆಗೆ ಹೋಗಿ ಬೆಳ್ಳಿಯ ಪ್ಯಾಕೇಜ್ ಅಡಿಯಲ್ಲಿ ಊಟ ಮತ್ತು ಕ್ಯೂಟ್‌ ಆಗಿ ಮಾತುಕತೆ ನಡೆಸುತ್ತಾಳೆ. ಗೋಲ್ಡ್ ಪ್ಯಾಕೇಜ್ ಅಡಿಯಲ್ಲಿ, 3 ಗಂಟೆಗಳ ಸೇವೆಯನ್ನು ಒದಗಿಸುತ್ತಾಳೆ ಮತ್ತು ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾಳೆ. ನಿಮ್ಮ ಜೊತೆ ಗಂಟೆಗಳ ಕಾಲ ಮಾತುಕತೆ ನಡೆಸುತ್ತಾಳೆ..  

7 /7

ಪ್ಲಾಟಿನಂ ಪ್ಯಾಕೇಜ್ ಅಡಿಯಲ್ಲಿ, ರೆಬೆಕಾ 6 ಗಂಟೆಗಳ ಕಾಲ ಗ್ರಾಹಕರೊಂದಿಗೆ ಇರುತ್ತಾಳೆ, ಕ್ಯೂಟ್‌ ಮಾತುಗಳು, ನಿಮ್ಮ ಆಸೆ ಈಡೇರಿಸುತ್ತಾಳೆ.. ಹಣ ಹೆಚ್ಚಾದಂತೆ ವಿವಿಧ ರೀತಿಯ ಸೌಲಭ್ಯಗಳು ದೊರೆಯುತ್ತವೆ.. X ನಲ್ಲಿ ಈ ಸೇವೆಯ ಬಗ್ಗೆ ಓದಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.. ಕೆಲವರು ಬೈದರೆ, ಇನ್ನೂ ಕೆಲವರು ಸೂಪರ್‌ ಅಂತ ಹೊಗಳುತ್ತಿದ್ದಾರೆ..