ನವದೆಹಲಿ: ಮಾರುಕಟ್ಟೆಯಲ್ಲಿ ದುಬಾರಿಯಾಗುತ್ತಿರುವ ಚಿನ್ನದ ಬೆಲೆಗಿಂತಲೂ ಕಡಿಮೆ ದರದಲ್ಲಿ ಚಿನ್ನವನ್ನು ಖರೀದಿಸಲು ನಿಮಗೆ ಮತ್ತೊಂದು ಸುವರ್ಣಾವಕಾಶ ಬಂದಿದೆ. ಸಾವರೆನ್ ಚಿನ್ನದ ಬಾಂಡ್ ಯೋಜನೆಯ 6 ನೇ ಸರಣಿಯನ್ನು ಸರ್ಕಾರ ಮತ್ತೊಮ್ಮೆ ಜಾರಿಗೆ ತರುತ್ತಿದೆ. ಆಗಸ್ಟ್ 31 ರಿಂದ ಗ್ರಾಹಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗಲಿದೆ. ಎಸ್ಜಿಬಿಯಲ್ಲಿ ನೀವು ಮಾರುಕಟ್ಟೆಗಿಂತಲೂ ಕೂಡ ಕಡಿಮೆ ಬೆಲೆಗೆ ಚಿನ್ನವನ್ನು ಖರೀದಿಸಬಹುದಾಗಿದೆ.
ಇದಕ್ಕೂ ಮೊದಲು ಆಗಸ್ಟ್ 3ರಂದು ತೆರೆದುಕೊಂಡಿದ್ದ ಈ ಸ್ಕೀಮ್ ನಲ್ಲಿ RBI ಆಫರ್ ಪ್ರೈಸ್ ಅನ್ನು ರೂ.5,334 ಪ್ರತಿ ಗ್ರಾಂ.ಗೆ ನಿಗದಿಪಡಿಸಿತ್ತು. ಈ ಕೊಡುಗೆ ಆಗಸ್ಟ್ 3 ರಿಂದ ಆಗಸ್ಟ್ 7ರವರೆಗೆ ನೀಡಲಾಗಿತ್ತು. ಇದಕ್ಕೂ ಮೊದಲು ಸಾವೆರಿನ್ ಗೋಲ್ಡ್ ಬಾಂಡ್ ನ ಕೊಡುಗೆ ಮೌಲ್ಯ ಪ್ರತಿ ಗ್ರಾಂ ಚಿನ್ನಕ್ಕೆ ರೂ.4,852ರಷ್ಟಾಗಿತ್ತು. ಜುಲೈ 6 ರಿಂದ ಜುಲೈ 10ರ ನಡುವೆ ಈ ಆಫರ್ ನೀಡಲಾಗಿತ್ತು. ಬಾಂಡ್ ಗಾಗಿ ಆನ್ಲೈನ್ ನಲ್ಲಿ ಹಣ ಪಾವತಿಸುವವರಿಗೆ ಪ್ರತಿ ಗ್ರಾಂ.ಗೆ ರೂ.50 ರಿಯಾಯಿತಿ ಸಿಗುತ್ತದೆ.
ಮನೆಯಲ್ಲಿ ಚಿನ್ನವನ್ನು ಖರೀದಿಸಿ ಇದುವ ಬದಲು ಒಂದು ವೇಳೆ ನೀವು ಸಾವರೆನ್ ಗೋಲ್ಡ್ ಬಾಂಡ್ ನಲ್ಲಿ ಹಣ ಹೂಡಿಕೆ ಮಾಡಿದರೆ, ನೀವು ಟ್ಯಾಕ್ಸ್ ಅನ್ನು ಕೂಡ ಉಳಿತಾಯ ಮಾಡಬಹುದು. ಸಾವೆರಿನ್ ಗೋಲ್ಡ್ ಬಾಂಡ್ ಸ್ಕೀಮ್ ನಲ್ಲಿ ಹೂಡಿಕೆ ಮಾಡುವ ವ್ಯಕ್ತಿ ಅಥವಾ ವ್ಯಾಪಾರಿ ಅತ್ಯಧಿಕ ರೂ.500 ಗ್ರಾಂ. ಚಿನ್ನ ಖರೀದಿಸಬಹುದು.
ಯಾವುದೇ ಓರ್ವ ವ್ಯಕ್ತಿ ಅಥವಾ HUF ಅಥವಾ ಓರ್ವ ವ್ಯಾಪಾರಿ ವರ್ಷವೊಂದರಲ್ಲಿ 4 ಕೆ.ಜಿ ಚಿನ್ನದ ಬಾಂಡ್ ಗಳನ್ನು ಖರೀದಿಸಬಹುದು. ಟ್ರಸ್ಟ್ ಅಥವಾ ಸಂಘಟನೆಗಾಗಿ 20 ಕೆ.ಜಿ ನಿಗದಿಪಡಿಸಲಾಗಿದೆ. ಈ ಯೋಜನೆಯ ಮ್ಯಾಚುರಿಟಿ ಅವಧಿ 8 ವರ್ಷಗಳದ್ದಾಗಿದೆ.
ಒಂದು ವೇಳೆ ನೀವು ನಿಮ್ಮ ಬಳಿ ಇರುವ ಚಿನ್ನದ ಬಾಂಡ್ ಅನ್ನು ಮಾರಾಟ ಮಾಡಲು ಬಯಸಿದರೆ, ನೀವು ಕನಿಷ್ಠ ಅಂದರೆ 5 ವರ್ಷಗಳವರೆಗೆ ಕಾಯಬೇಕು. ಚಿನ್ನದ ಬಾಂಡ್ ಗಳ ಮೇಲಿನ ಹೂಡಿಕೆಯ ಮೇಲೆ ಶೇ.2.5ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ.
ಸಾವೆರಿನ್ ಗೋಲ್ಡ್ ಬಾಂಡ್ ಅನ್ನು ನೀವು ನಿಮ್ಮ ಬ್ಯಾಂಕ್, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಆಯ್ದ ಪೋಸ್ಟ್ ಆಫೀಸ್, ನ್ಯಾಷನಲ್ ಸ್ಟಾಕ್ ಎಕ್ಸ್ಚೆಂಜ್ ಅಥವಾ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಗಳಲ್ಲಿ ಖರೀದಿಸಬಹುದಾಗಿದೆ.