Photo Gallery: ರಾಜಕುಮಾರ ನಂತರ ಜೇಮ್ಸ್ ನನ್ನು ಅರಸಿ ಬಂದ ಪ್ರಿಯಾ ಆನಂದ್

  • Oct 22, 2020, 11:49 AM IST

ನಟಿ ಪ್ರಿಯಾ ಆನಂದ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ಒಂದಾಗಲಿದ್ದಾರೆ. ಸಂತೋಷ್ ಆನಂದ್ರಾಮ್ ನಿರ್ದೇಶನದ ರಾಜಕುಮಾರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದಕ್ಷಿಣ ಭಾರತೀಯ ಮತ್ತು ಬಾಲಿವುಡ್ ನಟಿ, ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಚೇತನ್ ಕುಮಾರ್ ನಿರ್ದೇಶನದ ಆಕ್ಷನ್ ಕಮರ್ಷಿಯಲ್ ಎಂಟರ್ಟೈನರ್ ಪ್ರಸ್ತುತ ರೋಲಿಂಗ್ ಆಗಿದೆ.

ಸ್ವಲ್ಪ ಸಮಯದಿಂದ ಜೇಮ್ಸ್ ಚಿತ್ರಕ್ಕಾಗಿ ನಾಯಕಿ ಹುಡುಕಾಟ ನಡೆಯುತ್ತಿತ್ತು, ಕೊನೆಗೆ ರಾಜಕುಮಾರ ಜೋಡಿಯನ್ನು ಮರಳಿ ತರಲು ತಂಡ ನಿರ್ಧರಿಸಿದೆ. ತನ್ನ ಮೊದಲ ಚಿತ್ರದಲ್ಲಿಯೇ ಕನ್ನಡ ಚಿತ್ರರಂಗದ ಪ್ರೇಕ್ಷಕರನ್ನು ಗೆದ್ದ ಪ್ರಿಯಾ, ಗಣೇಶ್ ಅವರೊಂದಿಗೆ ಆರೆಂಜ್ ನಲ್ಲಿ ಕೆಲಸ ಮಾಡಿದ್ದಾರೆ. ಇದು ಅವಳ ಮೂರನೆಯ  ಕನ್ನಡದ ಪ್ರಾಜೆಕ್ಟ್ ಆಗಿದೆ.

ಇನ್ನೊಂದೆಡೆಗೆ ಅವರು ಶಿವರಾಜ್ ಕುಮಾರ್ ಅವರ ಆರ್‌ಡಿಎಕ್ಸ್ ಚಿತ್ರಕ್ಕೂ ಕೂಡ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಅದು ಇನ್ನೂ ಶೂಟಿಂಗ್ ಪ್ರಾರಂಭವಾಗಬೇಕಾಗಿದೆ.ತಮಿಳು, ಮಲಯಾಳಂ, ಹಿಂದಿ, ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ ಬಹುಭಾಷಾ ನಟಿ ಕೊನೆಯ ಬಾರಿಗೆ ಧ್ರುವ ವಿಕ್ರಮ್ ಅವರ ಚೊಚ್ಚಲ ಚಿತ್ರ ಆದಿತ್ಯ ವರ್ಮದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಜೇಮ್ಸ್ ಅನ್ನು ಕಿಶೋರ್ ಪಾಥಿಕೊಂಡ ನಿರ್ಮಿಸುತ್ತಿದ್ದು, ಮೊದಲ ಬಾರಿಗೆ ಚರಣ್ ರಾಜ್ ಪುನೀತ್ ಅಭಿನಯದ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಈಗಾಗಲೇ ತನ್ನ ಶೀರ್ಷಿಕೆ, ಪೋಸ್ಟರ್ ಮತ್ತು ಟೀಸರ್ ಮೂಲಕ ವೀಕ್ಷಕರಲ್ಲಿ ಸಾಕಷ್ಟು ಆಸಕ್ತಿಯನ್ನು ಹುಟ್ಟುಹಾಕಿರುವ ಜೇಮ್ಸ್, ತೆಲುಗು ನಟ ಶ್ರೀಕಾಂತ್, ಅನು ಪ್ರಭಾಕರ್ ಮತ್ತು ಆದಿತ್ಯ ಮೆನನ್ ಸೇರಿದಂತೆ ಮುಂತಾದವರು ತಾರಾಗಣದಲ್ಲಿದ್ದಾರೆ.

Photo Courtsey: Priya Anand (facebook)

1 /11

2 /11

3 /11

4 /11

5 /11

6 /11

7 /11

8 /11

9 /11

10 /11

11 /11