Rupay Card ಬಳಸಿ ಖರೀದಿ ನಡೆಸಿ, ಈ ಬಾರಿಯ ದೀಪಾವಳಿಗೆ ಸಿಗುತ್ತಿವೆ ಈ ಕೊಡುಗೆಗಳು

Rupay ಕಾರ್ಡ್ ಅನ್ನು ಉತ್ತೇಜಿಸಲು ಸರ್ಕಾರವು ಬ್ಯಾಂಕುಗಳಿಗೆ ಸೂಚನೆಗಳನ್ನು ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಸ್ತುತ ರುಪೇ ಕಾರ್ಡ್‌ಗಳನ್ನು ಹೊಂದಿರುವ ಜನರಿಗೆ Rupay ಕೂಡ ಹಲವು ಕೊಡುಗೆಗಳನ್ನು ನೀಡುತ್ತಿದೆ.

  • Nov 11, 2020, 19:28 PM IST

ನವದೆಹಲಿ: Rupay ಕಾರ್ಡ್ ಅನ್ನು ಉತ್ತೇಜಿಸಲು ಸರ್ಕಾರವು ಬ್ಯಾಂಕುಗಳಿಗೆ ಸೂಚನೆಗಳನ್ನು ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಸ್ತುತ ರುಪೇ ಕಾರ್ಡ್‌ಗಳನ್ನು ಹೊಂದಿರುವ ಜನರಿಗೆ Rupay ಕೂಡ ಹಲವು ಕೊಡುಗೆಗಳನ್ನು ನೀಡುತ್ತಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹೊರಡಿಸಿರುವ ಈ ಕಾರ್ಡ್‌ನ ಬಳಕೆಯನ್ನು ಉತ್ತೇಜಿಸಲು ಮತ್ತು ಎನ್‌ಪಿಸಿಐ ಅನ್ನು ದೊಡ್ಡ ಬ್ರಾಂಡ್ ಆಗಿ ಸ್ಥಾಪಿಸಲು ಸಿದ್ಧತೆಗಳು ಪ್ರಾರಂಭವಾಗಿವೆ.

ಇದನ್ನು ಓದಿ- IRCTC-SBI ರೂಪೆ ಕಾರ್ಡ್ ಮೂಲಕ ಶಾಪಿಂಗ್ ಮಾಡಿ ಆಕರ್ಷಕ ಕೊಡುಗೆಗಳನ್ನು ಪಡೆಯಿರಿ

VISA ಮತ್ತು MASTERCARDಗಳ ಪ್ರಾಬಲ್ಯಕ್ಕೆ ಅಂತ್ಯಹಾಡಲು ರೂಪಾಯಿ ಕಾರ್ಡ್ ಅನ್ನು ಭಾರತೀಯ ಉತ್ಪನ್ನವಾಗಿ ಪ್ರಚಾರ ಮಾಡಲಾಗುತ್ತಿದೆ. ರಿಸರ್ವ್ ಬ್ಯಾಂಕ್ ಮತ್ತು ಐಬಿಎ ಯ ಉಪಕ್ರಮದಿಂದ ರೂಪುಗೊಂಡ ಎನ್‌ಪಿಸಿಐ, ದೇಶದಲ್ಲಿ ಚಿಲ್ಲರೆ ಪಾವತಿ ಮತ್ತು ವಸಾಹತು ವ್ಯವಸ್ಥೆಯ ಉನ್ನತ ಸಂಸ್ಥೆಯಾಗಿದೆ. RUPAY ಕಾರ್ಡ್ ಮೇಲೆ ಈ ಕೊಡುಗೆಗಳನ್ನು ನೀಡಲಾಗಿದೆ

 

 

 

 

1 /5

ಒಂದು ವೇಳೆ ಮನೆ ಸ್ವಚ್ಛಗೊಳಿಸುವಿಕೆ ನಿಮ್ಮಿಂದಾಗದ ಮಾತು ಎಂದಾದಲ್ಲಿ ನೀವು ಈ ಕೆಲಸವನ್ನು ಬೇರೊಬ್ಬರಿಂದ ಮಾಡಿಸಬಹುದು ಹಾಗೂ ರುಪೇ ಕಾರ್ಡ್ ಬಳಸಿ ಹಣ ಪಾವತಿಸಿ ಸ್ವಲ್ಪ ಹಣವನ್ನು ಕೂಡ ಉಳಿಸಬಹುದು.

2 /5

ಈ ಕಾರ್ಡ್ ಅನ್ನು ಬಳಸಿ ನೀವು ಅಪೋಲೋ ಫಾರ್ಮಸಿ ಸ್ಟೋರ್ ಗಳಲ್ಲಿ ಶೇ.15 ರಿಯಾಯಿತಿ ಕೂಡ ಪಡೆಯಬಹುದು. ಇದಕ್ಕಾಗಿ ನೀವು ಕೆಮಿಸ್ಟ್ ಗೆ ರೂಪೇ ಕೋಡ್ ಮಾತ್ರ ತೋರಿಸಬೇಕು.

3 /5

#RuPayFestiveCarnival ಸ್ಕೀಮ್ ನ ಲಾಭವನ್ನು ಪಡೆದು ಈ ಹಬ್ಬದ ಋತುವಿನಲ್ಲಿ ನೀವು ಅಮೆಜಾನ್ ನಲ್ಲಿ ರೂಪೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ಖರೀದಿ ಮಾಡಬಹುದು. ರೂ.1000 ವರೆಗಿನ ಕನಿಷ್ಠ ಖರೀದಿಯ ಮೇಲೆ ನೀವು ಶೇ.10 ಅಥವಾ ಅತ್ಯಧಿಕ ಅಂದರೆ ರೂ.250ರವರೆಗೆ ಉಳಿತಾಯ ಮಾಡಬಹುದು

4 /5

ಒಂದು ವೇಳೆ ನೀವು ದಿನಸಿ ಸಾಮಾನುಗಳನ್ನು ಖರೀದಿಸಿದರೆ, ನೀವು ನಿಮ್ಮ ಬಿಲ್ ನಲ್ಲಿ ಉಳಿತಾಯ ಮಾಡಬಹುದು. ರಿಲಯನ್ಸ್ ಸ್ಟೋರ್ ನಲ್ಲಿ ನೀವು ಒಂದು ವೇಳೆ 2000 ಅಥವಾ ಅದಕ್ಕಿಂತ ಹೆಚ್ಚಿನ ದಿನಸಿ ಸಾಮಾನುಗಳನ್ನು ರೂಪೇ ಕಾರ್ಡ್ ಬಳಸಿ ಖರೀದಿಸಿದರೆ, ಶೇ.5 ರಷ್ಟು ರಿಯಾಯಿತಿ ಪಡೆಯಬಹುದು.

5 /5

ಈ ಹಬ್ಬದ ಋತುವನ್ನು ನೀವು RuPay Festive Carnival ನಿಂದ ಸೂಪರ್ ಹಿಟ್ ವನ್ನಾಗಿಸಬಹುದು. ನೀವು ನಿಮ್ಮ ರೂಪೇ ಕಾರ್ಡ್ ಬಳಸಿ 6 ತಿಂಗಳ ಅವಧಿಗೆ ZEE5 ಚಂದಾದಾರಿಕೆಯ ಮೊತ್ತದಲ್ಲಿ ಶೇ.20 ರಷ್ಟು ರಿಯಾಯಿತಿ ಪಡೆಯಬಹುದು.