ನವದೆಹಲಿ:ಇತ್ತೀಚಿಗೆ ಉತ್ತರಪ್ರದೇಶದ ಬದಾನ್ ನಲ್ಲಿ ಧ್ವಂಸವಾಗಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಪುನರ್ ನಿರ್ಮಿಸಲಾತ್ತು.ಆದರೆ, ಸಾಮಾನ್ಯವಾಗಿ ನೀಲಿ ಬಣ್ಣದಲ್ಲಿರುತ್ತಿದ್ದ ಅಂಬೇಡ್ಕರ್ ಮೂರ್ತಿಗೆ ಕೇಸರಿ ಬಣ್ಣದ ಉಡುಪಿನಲ್ಲಿರುವಂತೆ ಮಾಡಲಾಗಿದೆ.
#WATCH Badaun: The damaged statue of BR Ambedkar which was rebuilt and painted saffron, re-painted blue by BSP Leader Himendra Gautam. pic.twitter.com/Tntf7shNAN
— ANI UP (@ANINewsUP) April 10, 2018
ಏಪ್ರಿಲ್ 7 ರಂದು ಬದಾನ್'ನ ಕುನ್ವರ್ಗಾನ್ ಪ್ರದೇಶದ ದುಗ್ರಯಾ ಗ್ರಾಮದಲ್ಲಿ ಕೆಲವು ದುಷ್ಕರ್ಮಿಗಳು ಅಂಬೇಡ್ಕರ್ ಪ್ರತಿಮೆಯನ್ನು ವಿರೂಪಗೊಳಿಸಿದ್ದರು. ಆದರೆ, ಈ ಘಟನೆಯನ್ನು ವಿರೋಧಿಸಿ ಹಲವು ದಲಿತ ಸಂಘಟನೆಗಳು ಪ್ರತಿಭಟಿಸಿದ ಪರಿಣಾಮ ಆಗ್ರಾದ ಜಿಲ್ಲಾಡಳಿತದಿಂದಮತ್ತೊಂದು ಪ್ರತಿಮೆಯನ್ನು ತಂದು ಸ್ಥಾಪಿಸಿದೆ. ಆದರೆ ಅದು ಕೇಸರಿಮಯವಾಗಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೇಸರಿ ಪಾವಿತ್ರ್ಯತೆಯ ಸಂಕೇತವೆಂದು ಹಲವು ಸಾರಿ ಹೇಳಿದ್ದರು ಈಗ ಅದರ ಪ್ರತಿಪಲವಾಗಿ ಮೂರ್ತಿ ಕೇಸರಿಮಯವಾಗಿತ್ತು .ಇದಾದ ನಂತರ ಸ್ಥಳೀಯ ಬಿಎಸ್ಪಿ ನಾಯಕ ಹಿಮೆಂದ್ರ ಗೌತಮ್ ಪುನಃ ಕೇಸರಿ ಇರುವ ಅಂಬೇಡ್ಕರ್ ಮೂರ್ತಿಗೆ ನೀಲಿ ಬಣ್ಣ ಬಳಿದಿದ್ದಾರೆ.