ನವದೆಹಲಿ : PM Ayushman Bharat Scheme: ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಮಹತ್ವಾಕಾಂಕ್ಷೆಯ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಪ್ರಮುಖ ಬದಲಾವಣೆಗಳನ್ನು ತರಲು ಹೊರಟಿದೆ. ಇದಕ್ಕಾಗಿ ಎಲ್ಲಾ ಸಿದತೆಗಳನ್ನು ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ, ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಲ್ಲಿ (Ayushman Bharat Scheme) ವಿವಿಧ ಚಿಕಿತ್ಸೆಯ ದರಗಳನ್ನು ನಿಗದಿಪಡಿಸಲಾಗಿದೆ. ಈ ದರದಲ್ಲಿ ಯಾವುದೇ ಬದಲಾವಣೆಯಿಲ್ಲದ ಕಾರಣ, ಖಾಸಗಿ ವಲಯದ ಆಸ್ಪತ್ರೆಗಳು ಈ ಯೋಜನೆಯಲ್ಲಿ ಭಾಗವಹಿಸುವುದಿಲ್ಲ. ಈ ಕಾರಣದಿಂದಾಗಿ, ಸರ್ಕಾರವು ಚಿಕಿತ್ಸೆಯ ದರಗಳನ್ನು ಬದಲಿಸಲು ಹೊರಟಿದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ, ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 5 ಲಕ್ಷ ರೂಪಾಯಿಗಳ ಉಚಿತ ಆರೋಗ್ಯ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ.
ಹೆಚ್ಚುತ್ತಿದೆ ಖಾಸಗಿ ಆಸ್ಪತ್ರೆಗಳ ಭಾಗವಹಿಸುವಿಕೆ :
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು (NHA) ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Scheme) ದರಗಳನ್ನು ನಿರ್ಧರಿಸುತ್ತದೆ. NHA ಶೀಘ್ರದಲ್ಲೇ ಚಿಕಿತ್ಸೆಯ ದರಗಳನ್ನು ಬದಲಾಯಿಸಬಹುದು. ಇದು ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ. ಇನ್ನು ಕ್ಲೈಂ ಸೆಟಲ್ಮೆಂಟ್ ಅನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು, ಮಾಡೆಲ್ ಒಂದನ್ನು ಸರ್ಕಾರ ಸಿದ್ದಪಡಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಇಲ್ಲಿವರೆಗೆ 2 ಕೋಟಿ ಜನರಿಗೆ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ : Home Loan ಮೇಲೆ ಈ ಬ್ಯಾಂಕ್ ನೀಡುತ್ತಿದೆ ಭಾರೀ ಆಫರ್ , ಈ ಎಲ್ಲಾ ಶುಲ್ಕವೂ ಇರುವುದಿಲ್ಲ
ಚಿಕಿತ್ಸೆಯ ದರಗಳು ಸಮಂಜಸವಾಗಿರುತ್ತವೆ:
ಚಿಕಿತ್ಸೆಯ ದರಗಳು ಕೈಗೆಟುಕುವಂತಿರದ ಕಾರಣ, ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್ ಭಾರತ್ ಯೋಜನೆಗೆ ಸೇರಲು ಬಯಸುವುದಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ ಸಂಬಂಧಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತ್ತೊಂದೆಡೆ, ಸರ್ಕಾರಿ ಆಸ್ಪತ್ರೆಗಳಿಗೂ (Government hospital) ಕೆಲವು ಚಿಕಿತ್ಸೆಗಳು ನಿಗದಿತ ದರಗಳಿಗಿಂತ ಹೆಚ್ಚಾಗಿರುತ್ತದೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ, ಉಳಿದ ಚಿಕಿತ್ಸೆಗಳು ಉಚಿತವಾಗಿರುತ್ತದೆ. ಹಾಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ಸಮಸ್ಯೆಯಾಗುವುದಿಲ್ಲ. ಪ್ರಸ್ತುತ, ಆಯುಷ್ಮಾನ್ ಭಾರತ್ ಯೋಜನೆಗೆ ಸಂಬಂಧಿಸಿದ 23,000 ಆಸ್ಪತ್ರೆಗಳಲ್ಲಿ ಖಾಸಗಿ ವಲಯದ ಪಾಲು ಶೇ. 40 ರ ಸಮೀಪದಲ್ಲಿದೆ.
ಸರ್ಕಾರಿ-ಖಾಸಗಿ ಆಸ್ಪತ್ರೆಗಳ ದರಗಳಲ್ಲಿ ಭಾರೀ ವ್ಯತ್ಯಾಸ :
ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳ ದರಗಳಲ್ಲಿ (Private Hospital) ಭಾರೀ ವ್ಯತ್ಯಾಸವಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಚಿಕಿತ್ಸಾ ದರಗಳನ್ನು ಸ್ಟ್ಯಾಂಡಡೈಸೇಶನ್ ಮಾಡುವ ಬಗ್ಗೆ ವಿಚಾರ ನಡೆಯುತ್ತಿದೆ. ಸರ್ಕಾರದ ಈ ಕ್ರಮವು ಆಯುಷ್ಮಾನ್ ಭಾರತ್ ನಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಖಾಸಗಿ ವಲಯದ ಭಾಗವಹಿಸುವಿಕೆ ಹೆಚ್ಚಾದರೆ ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ. ಗರಿಷ್ಠ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು.
ಇದನ್ನೂ ಓದಿ : IT Return : 2021-22ರ ಆರ್ಥಿಕ ವರ್ಷದ ITR ಸಲ್ಲಿಸುವಾಗ ಈ ಅಂಶಗಳು ನೆನಪಿರಲಿ|
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ