ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಉಸ್ತುವಾರಿ ಪಿ.ಮುರಳಿಧರ್ ರಾವ್ ಅವರು ತಮ್ಮನ್ನು ಉದ್ದೇಶಿಸಿ ಹಿಂದಿಯಲ್ಲಿ ಮಾಡಿರುವ ಟ್ವೀಟ್ ಗೆ ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿ ಸರ್. ಹಿಂದಿ ಅರ್ಥವಾಗುವುದಿಲ್ಲ ಎಂದು ಕನ್ನಡದಲ್ಲೇ ಉತ್ತರಿಸಿ ಕನ್ನಡಾಭಿಮಾನ ಮೆರೆದಿದ್ದಾರೆ.
.@Siddaramaiah जी डर गए क्या?
कड़ी मशक्कत के बाद आपने चामुंडेश्वरी सीट चुनी फिर अब वहां भी हार सामने देखकर दूसरी जगह तलाश कर रहे हैं, मैं आपका संशय खत्म करने के लिए स्पष्ट कर दूं न सिर्फ आपकी दोनों सीट बल्कि पूरा कर्नाटका कांग्रेस मुक्त बनने जा रहा है।— P Muralidhar Rao (@PMuralidharRao) April 21, 2018
ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿ ಸರ್. ಹಿಂದಿ ಅರ್ಥವಾಗುವುದಿಲ್ಲ https://t.co/i9rbgLyFJU
— Siddaramaiah (@siddaramaiah) April 21, 2018
ಪಿ.ಮುರಳಿಧರ್ ರಾವ್ ಅವರು ಹಿಂದಿಯಲ್ಲಿ ತಮ್ಮ ಟ್ವೀಟ್ ನಲ್ಲಿ ಸಿದ್ದರಾಮಯ್ಯನವರೇ ಹೆದರಿಬಿಟ್ಟಿರಾ?, ಬಹಳ ಕಷ್ಟಪಟ್ಟು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವನ್ನು ಆಯ್ದುಕೊಂಡಿದ್ದಿರಿ, ಈಗ ಅಲ್ಲಿಯೂ ಸೋಲುವ ಸೂಚನೆಗಳು ಕಂಡಾಗ ಬೇರೆ ಕ್ಷೇತ್ರ ಹುಡುಕುತ್ತಿದ್ದೀರಿ. ನಾನು ನಿಮ್ಮ ಸಂದೇಹವನ್ನು ನಿವಾರಿಸುತ್ತೇನೆ. ನಿಮ್ಮ ಎರಡು ಕ್ಷೇತ್ರಗಳು ಮಾತ್ರವಲ್ಲ, ಇಡೀ ಕರ್ನಾಟಕವೇ ಕಾಂಗ್ರೆಸ್ ಮುಕ್ತ ಮಾಡಲು ಹೊರಟಿದೆ’ ಎಂದು ಟ್ವೀಟ್ ಮಾಡಿದ್ದರು.ಈ ಟ್ವೀಟ್ ಗೆ ತಕ್ಷಣ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಕನ್ನಡದಲ್ಲಿಯೇ ಪ್ರತಿಕ್ರಿಯೆ ನೀಡುತ್ತಾ "ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿ ಸರ್. ಹಿಂದಿ ಅರ್ಥವಾಗುವುದಿಲ್ಲ" ಎನ್ನುವ ಮೂಲಕ ಬಿಜೆಪಿ ನಾಯಕನಿಗೆ ಅಚ್ಚರಿಗೊಳಿಸಿದ್ದಾರೆ.
ಆ ಮೂಲಕ ತಮಗೆ ಕನ್ನಡದ ಮೇಲಿನ ಅಭಿಮಾನ ತೋರಿಸಿರುವುದಲ್ಲದೆ, ಹಿಂದಿಯ ಹೇರಿಕೆಯನ್ನು ಸಾಂಕೇತಿಕವಾಗಿ ಪ್ರತಿಭಟಿಸಿದ್ದಾರೆ.