ಇಂದಿನಿಂದ ‘ಭಾರತ ದರ್ಶನ’ ವಿಶೇಷ ಪ್ರವಾಸಿ ರೈಲು ಆರಂಭ: ಇಲ್ಲಿದೆ ವಿವರ

‘ಭಾರತ ದರ್ಶನ’ ವಿಶೇಷ ಪ್ರವಾಸಿ ರೈಲು ದೇಶದ ಎಲ್ಲ ಪ್ರಮುಖ ಪ್ರವಾಸಿ ಸ್ಥಳಗಳನ್ನು ಒಳಗೊಂಡಿರುವ ಅತ್ಯಂತ ಉತ್ತಮ ಪ್ರವಾಸಿ ಪ್ಯಾಕೇಜ್ ಆಗಿದೆ.

ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ(Indian Railway Catering and Tourism Corporation )ವು ಭಾನುವಾರದಿಂದ (ಆಗಸ್ಟ್ 29) ‘ಭಾರತ ದರ್ಶನ’ ವಿಶೇಷ ಪ್ರವಾಸಿ ರೈಲನ್ನು ಆರಂಭಿಸಲಿದೆ. ‘ಭಾರತ ದರ್ಶನ’ ವಿಶೇಷ ಪ್ರವಾಸಿ ರೈಲು ದೇಶದ ಎಲ್ಲ ಪ್ರಮುಖ ಪ್ರವಾಸಿ ಸ್ಥಳಗಳನ್ನು ಒಳಗೊಂಡಿರುವ ಅತ್ಯಂತ ಉತ್ತಮ ಪ್ರವಾಸಿ ಪ್ಯಾಕೇಜ್ ಆಗಿದೆ.

‘ವಿಶ್ವದ ಅತಿ ಎತ್ತರದ ಪ್ರತಿಮೆ', 'ಅತ್ಯಂತ ಪವಿತ್ರ ಯಾತ್ರಾ ಕೇಂದ್ರ', 'ಅತ್ಯಂತ ಅದ್ಭುತವಾದ ಅರಮನೆ', 'ಸ್ಪ್ಲೆಂಡರ್ಸ್ ಆಫ್ ಇಂಡಿಯಾ’ ಸೇರಿದಂತೆ ಭಾರತದ ಅನೇಕ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಬಹುದು. #12D/11N ರೈಲು ಪ್ರವಾಸ ಪ್ಯಾಕೇಜ್ ಅನ್ನು ಇಲ್ಲಿ ಬುಕ್ ಮಾಡಿ https://bit.ly/3iM6SPW  ಮತ್ತು ದೇಶದ ಪ್ರಮುಖ ಸ್ಥಳಗಳನ್ನು ವೀಕ್ಷಿಸಿ! ಅಂತಾ ಐಆರ್‌ಸಿಟಿಸಿ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

‘ಭಾರತ ದರ್ಶನ’ ವಿಶೇಷ ಪ್ರವಾಸಿ ರೈಲಿನ ಬುಕ್ಕಿಂಗ್ ಆನ್‌ಲೈನ್‌ನಲ್ಲಿ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಐಆರ್‌ಸಿಟಿಸಿ ಪ್ರವಾಸಿ ಸೌಲಭ್ಯ ಕೇಂದ್ರ, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಕಚೇರಿಗಳ ಮೂಲಕವೂ ಬುಕಿಂಗ್ ಮಾಡಬಹುದು

2 /6

‘ಭಾರತ ದರ್ಶನ’ ವಿಶೇಷ ಪ್ರವಾಸಿ ರೈಲು ಹೈದರಾಬಾದ್ - ಅಹಮದಾಬಾದ್ - ಸಮುದ್ರದ ಮಧ್ಯೆ ಇರುವ ನಿಷ್ಕಲಂಕ ಮಹಾದೇವನ ಸನ್ನಿಧಿ - ಜೋಧಪುರ - ಜೈಪುರ - ಉದಯಪುರ - ಏಕತೆಯ ಪ್ರತಿಮೆಯ ಗಮ್ಯಸ್ಥಾನಗಳನ್ನು ಒಳಗೊಂಡಿದೆ.

3 /6

ಮಧುರೈ, ದಿಂಡಿಗಲ್, ತಿರುಚ್ಚಿರಾಪಳ್ಳಿ, ಕರೂರ್, ಈರೋಡ್, ಸೇಲಂ, ಜೋಲಾರ್‌ಪೆಟ್ಟೈ, ಕಟಪಾಡಿ, ಎಂಜಿಆರ್ ಚೆನ್ನೈ ಸೆಂಟ್ರಲ್, ನೆಲ್ಲೂರು ಮತ್ತು ವಿಜಯವಾಡ ಈ ವಿಶೇಷ ಪ್ರವಾಸಿ ರೈಲಿನ ಬೋರ್ಡಿಂಗ್ ಪಾಯಿಂಟ್‌ಗಳಾಗಿವೆ.

4 /6

IRCTCಯು ವಿಶೇಷ 11 ರಾತ್ರಿಗಳು/12 ದಿನಗಳ ಪ್ಯಾಕೇಜ್ ಅನ್ನು ನೀಡುತ್ತದೆ, ಇದು ವಯಸ್ಕರಿಗೆ 11,340 ರೂ. ವೆಚ್ಚವಾಗುತ್ತದೆ.

5 /6

ಐಆರ್‌ಸಿಟಿಸಿ ಪ್ರವಾಸಿಗರಿಗೆ ಲಸಿಕೆ ಪ್ರಮಾಣಪತ್ರ ಅಥವಾ ಆರ್‌ಟಿ-ಪಿಸಿಆರ್ ಋಣಾತ್ಮಕ ವರದಿಯನ್ನು (ಪ್ರಯಾಣದ ದಿನಾಂಕಕ್ಕಿಂತ 48 ಗಂಟೆಗಳ ಮೊದಲು) ಇಟ್ಟುಕೊಳ್ಳುವಂತೆ ನಿರ್ದೇಶಿಸಿದೆ. ಹೆಚ್ಚುವರಿಯಾಗಿ ಪ್ರವಾಸಿಗರಿಗೆ ಪ್ರಯಾಣ ವಿಮೆ ಮತ್ತು ನೈರ್ಮಲ್ಯ ಕಿಟ್‌ಗಳನ್ನು ಒದಗಿಸಲಾಗುವುದು.

6 /6

ರೈಲು ಪ್ರಯಾಣವು ಸ್ಲೀಪರ್ ಕ್ಲಾಸ್ ಆಗಿರುತ್ತದೆ. ಧರ್ಮಶಾಲೆಗಳಲ್ಲಿ ರಾತ್ರಿ ತಂಗುವುದು ಮತ್ತು ಫ್ರೆಶ್ ಅಪ್ ಆಗಲು ಸೌಲಭ್ಯ ಒದಗಿಸಲಾಗುತ್ತದೆ. ಬೆಳಗ್ಗೆ ಚಹಾ/ಕಾಫಿ, ಉಪಹಾರ, ಊಟ, ಭೋಜನ ಮತ್ತು ದಿನಕ್ಕೆ 1 ಲೀಟರ್ ಕುಡಿಯುವ ನೀರನ್ನು ಒದಗಿಸಲಾಗುತ್ತದೆ .