Ind vs SL:ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾ ಪ್ರಕಟ; ಬಲಿಷ್ಠ ಆಟಗಾರನಿಗೆ ಸಿಗದ ಅವಕಾಶ

Ind vs SL: ಫೆಬ್ರವರಿ 24 ರಂದು ಭಾರತ ಮತ್ತು ಶ್ರೀಲಂಕಾ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ. ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಟಾರ್ ಆಟಗಾರನಿಗೆ ಸ್ಥಾನ ಸಿಕ್ಕಿಲ್ಲ.

Written by - Yashaswini V | Last Updated : Feb 23, 2022, 07:49 AM IST
  • ಬಿಸಿಸಿಐ ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಿದೆ
  • ಆದರೆ ಬಲಿಷ್ಠ ಬ್ಯಾಟ್ಸ್‌ಮನ್‌ಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ
  • ಈ ಬ್ಯಾಟ್ಸ್‌ಮನ್ ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸುತ್ತಾನೆ
Ind vs SL:ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾ ಪ್ರಕಟ; ಬಲಿಷ್ಠ ಆಟಗಾರನಿಗೆ ಸಿಗದ ಅವಕಾಶ  title=
Ind vs SL: The first T20 match on 24 February, Rohit Sharma could not save the career of this player

Ind vs SL: ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ (Rohit Sharma) ನಾಯಕನಾದ ದಿನದಿಂದಲೂ ಅವರು ಆಟಗಾರರಿಗೆ ಅವಕಾಶಗಳನ್ನು ನೀಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಬಿಸಿಸಿಐ (BCCI) ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾವನ್ನು (Team India) ಪ್ರಕಟಿಸಿದೆ, ಆದರೆ ಬಲಿಷ್ಠ ಬ್ಯಾಟ್ಸ್‌ಮನ್‌ಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಬ್ಯಾಟ್ಸ್‌ಮನ್ ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸುತ್ತಾನೆ. ಈ ಆಟಗಾರ ರೋಹಿತ್ ಶರ್ಮಾ ಅವರ ಆತ್ಮೀಯ ಗೆಳೆಯ. ಆದರೂ, ರೋಹಿತ್ ಶರ್ಮಾ ಈ ಆಟಗಾರನ ವೃತ್ತಿಜೀವನವನ್ನು ಉಳಿಸಲು ಸಾಧ್ಯವಾಗಲಿಲ್ಲ. 

ಈ ಆಟಗಾರನ ವೃತ್ತಿಜೀವನ ಅಪಾಯದಲ್ಲಿದೆ :
ಶ್ರೀಲಂಕಾ ಸರಣಿಗಾಗಿ, ಧಕಡ್ ಆರಂಭಿಕ ಆಟಗಾರ ಶಿಖರ್ ಧವನ್ (Shikhar Dhawan) ಟಿ20 ಮತ್ತು ಟೆಸ್ಟ್ ತಂಡಗಳಲ್ಲಿ ಸ್ಥಾನ ಪಡೆದಿಲ್ಲ. ಶಿಖರ್ ಟೀಂ ಇಂಡಿಯಾ ಓಪನಿಂಗ್ ವೇಳೆ ಹಲವು ಪಂದ್ಯಗಳನ್ನು ಗೆದ್ದಿದ್ದಾರೆ. ಆದರೂ ಆಯ್ಕೆಗಾರರು ಅವರನ್ನು ಕೈಬಿಟ್ಟಿದ್ದಿದ್ದಾರೆ. ಟಿ20 ವಿಶ್ವಕಪ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲೂ ಶಿಖರ್ ಧವನ್ ಸ್ಥಾನ ಪಡೆದಿರಲಿಲ್ಲ. ಅದೇ ಸಮಯದಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ಅವಕಾಶ ಸಿಕ್ಕಿತು, ಆದರೆ ಈ ಆಟಗಾರನಿಗೆ ಕೇವಲ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತು ಮತ್ತು ಅದರಲ್ಲಿ ಯಾವುದೇ ಪವಾಡವನ್ನು ತೋರಿಸಲು ಸಾಧ್ಯವಾಗಲಿಲ್ಲ. ಇದೀಗ ಅವರನ್ನು ಶ್ರೀಲಂಕಾ ಸರಣಿಯಿಂದಲೂ ಆಯ್ಕೆಗಾರರು ಕೈಬಿಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಿಖರ್ ಧವನ್ ವೃತ್ತಿಜೀವನಕ್ಕೆ ಪವರ್ ಬ್ರೇಕ್ ಬಿದ್ದಂತಾಗಿದೆ. 

ರೋಹಿತ್ ಜೊತೆ ಆರಂಭಿಕ ಜೋಡಿ ಆಗಿ ಹಲವು ದಾಖಲೆ: 
2013 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿಗೆ, ವರ್ಚಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ರೋಹಿತ್ ಶರ್ಮಾ (Rohit Sharma) ಮತ್ತು ಶಿಖರ್ ಧವನ್ ಅವರನ್ನು ಆರಂಭಿಕ ಜೋಡಿ ಆಗಿ ಆಯ್ಕೆ ಮಾಡಿದರು. ಅಂದಿನಿಂದ ಇವರಿಬ್ಬರೂ ಭಾರತದ ಬ್ಯಾಟಿಂಗ್‌ನ ಅಡಿಪಾಯವಾದರು. ಇವರಿಬ್ಬರು ಅಗ್ರ ಕ್ರಮಾಂಕದಲ್ಲಿ ಸಾಕಷ್ಟು ರನ್ ಗಳಿಸಿದ್ದರು. ರೋಹಿತ್ ಶರ್ಮಾ ಅವರೊಂದಿಗೆ ಶಿಖರ್ ಧವನ್ ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ರನ್ ಗಳಿಸಿದರು. ಅವರ ಬ್ಯಾಟಿಂಗ್ ನೋಡಿದ ನಂತರ ದೊಡ್ಡ ಬೌಲರ್‌ಗಳು ಹಲ್ಲು ಕಚ್ಚುತ್ತಾರೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ, ಕೆಎಲ್ ರಾಹುಲ್ ಜೊತೆ ರೋಹಿತ್ ಶರ್ಮಾ ಜೋಡಿ ರೂಪುಗೊಂಡಿದೆ. ಅಂತಹ ಪರಿಸ್ಥಿತಿಯಲ್ಲಿ, ಆಯ್ಕೆಗಾರರು ಶಿಖರ್ ಧವನ್ ಅವರನ್ನು ಅಂಚಿನಲ್ಲಿ ತಳ್ಳಲು ಪ್ರಾರಂಭಿಸಿದರು. ಇದೀಗ ಶಿಖರ್ ಧವನ್ ತಂಡಕ್ಕೆ ಮರಳುವುದು ಅಸಾಧ್ಯ ಎನಿಸುತ್ತಿದೆ. 

ಇದನ್ನೂ ಓದಿ- Rohit Sharma: ರೋಹಿತ್ ಶರ್ಮಾ ಕ್ಯಾಪ್ಟನ್ ಆಗುತ್ತಿದ್ದಂತೆ ಖುಲಾಯಿಸಿತು ಈ 3 ಆಟಗಾರರ ಅದೃಷ್ಟ

 ಶಿಖರ್ ಧವನ್ ಅವರ ವೃತ್ತಿಜೀವನ:
ಶಿಖರ್ ಧವನ್ ಒಂದು ಕಾಲದಲ್ಲಿ ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದ ಪ್ರಬಲ ಆಧಾರಸ್ತಂಭವಾಗಿದ್ದರು, ಆದರೆ ಕಾಲಾನಂತರದಲ್ಲಿ ಕಥೆ ಬದಲಾಯಿತು. ಅವರು ಭಾರತಕ್ಕಾಗಿ ಎಲ್ಲಾ ಮೂರು ಮಾದರಿಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ಧವನ್ ಟೀಂ ಇಂಡಿಯಾ (Team India) ಪರ 34 ಟೆಸ್ಟ್ ಪಂದ್ಯಗಳಲ್ಲಿ 2315 ರನ್, 149 ಏಕದಿನ ಪಂದ್ಯಗಳಲ್ಲಿ 6284 ರನ್ ಮತ್ತು 68 ಟಿ20 ಪಂದ್ಯಗಳಲ್ಲಿ 1759 ರನ್ ಗಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಟೆಸ್ಟ್ ತಂಡದಿಂದ ಹೊರಗುಳಿದಿದ್ದರು. ಅವನ ಕೈ ಚಳಕ ಆಗಾಗ್ಗೆ ಗೋಚರಿಸುತ್ತಲೇ ಇತ್ತು. 

ಯುವಕರಿಗೆ ಅವಕಾಶ:
ಟೀಂ ಇಂಡಿಯಾದಲ್ಲಿ ಐಪಿಎಲ್ ಹಾಗೂ ದೇಶಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಆಟಗಾರರಿಗೆ ಅವಕಾಶ ಸಿಕ್ಕಿದೆ. ಬಹಳ ದಿನಗಳ ನಂತರ ಸಂಜು ಸ್ಯಾಮ್ಸನ್ ಟೀಂ ಇಂಡಿಯಾಗೆ ಮರಳಲು ಸಾಧ್ಯವಾಗಿದೆ. ಅದೇ ಹೊತ್ತಿಗೆ ರಿಷಬ್ ಪಂತ್ ಬ್ಯಾಕ್ ಅಪ್ ಆಗಿ ಕೆಎಸ್ ಭರತ್ ಗೆ ಅವಕಾಶ ಸಿಕ್ಕಿದೆ. ಭರತ್ ಐಪಿಎಲ್ ನಲ್ಲಿ ಹಲವು ರನ್ ಗಳಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಮರಳಿದ್ದಾರೆ. ಯುವ ಆಟಗಾರರ ಬಲದಿಂದ ಭಾರತ ತಂಡ ಶ್ರೀಲಂಕಾ ಸರಣಿಯನ್ನು ವಶಪಡಿಸಿಕೊಳ್ಳಬಹುದು ಎಂಬ ನಿರೀಕ್ಷೆ ಕೂಡ ಹೆಚ್ಚಿದೆ.

ಇದನ್ನೂ ಓದಿ-  Shaheen shah Afridi: 4,6,6,6 ಶಾಹೀನ್ ಶಾ ಆಫ್ರಿದಿ ಸ್ಫೋಟಕ ಬ್ಯಾಟಿಂಗ್.. ಇಲ್ಲಿದೆ ವಿಡಿಯೋ

ಶ್ರೀಲಂಕಾ ಸರಣಿಗೆ ಭಾರತೀಯ T20 ತಂಡ:
ರೋಹಿತ್ ಶರ್ಮಾ (ನಾಯಕ), ರಿತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ (ಉಪನಾಯಕ), ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್ (wk), ರವೀಂದ್ರ ಜಡೇಜಾ ಚಹಾಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್ ಮತ್ತು ಅವೇಶ್ ಖಾನ್.

ಭಾರತೀಯ ಟೆಸ್ಟ್ ತಂಡ:
ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭಮನ್ ಗಿಲ್, ರಿಷಭ್ ಪಂತ್, ಕೆಎಸ್ ಭರತ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ (ವೈಸ್ ಕ್ಯಾಪ್ಟನ್), ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಸೌರಭ್ ಕುಮಾರ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News