ವಾಷಿಂಗ್ಟನ್ (ಯುಎಸ್): ವಾಷಿಂಗ್ಟನ್ ಡಿಸಿ ಯ 14 ನೇ ಮತ್ತು ಯು ಸ್ಟ್ರೀಟ್ ನಾರ್ತ್ವೆಸ್ಟ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ ಮತ್ತು ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಷಿಂಗ್ಟನ್ ಡಿಸಿಯ ಯು ಸ್ಟ್ರೀಟ್ ನಾರ್ತ್ವೆಸ್ಟ್ನಲ್ಲಿರುವ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಈ ಪ್ರದೇಶ ಶ್ವೇತಭವನದಿಂದ ಕೇವಲ 2 ಮೈಲಿಗಿಂತ ಕಡಿಮೆ ದೂರದಲ್ಲಿದೆ.
ಇದನ್ನೂ ಓದಿ:
ಯುನೈಟೆಡ್ ಸ್ಟೇಟ್ಸ್ನಲ್ಲಿ ಹೆಚ್ಚುತ್ತಿರುವ ಗುಂಡಿನ ದಾಳಿ ಘಟನೆಗಳ ಹಿನ್ನೆಲೆ ಮಕ್ಕಳು ಮತ್ತು ಕುಟುಂಬಗಳನ್ನು ರಕ್ಷಿಸುವ ಸಲುವಾಗಿ ಯುಎಸ್ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸುವ ಅಗತ್ಯವಿದೆ ಅಥವಾ ಅವುಗಳನ್ನು ಖರೀದಿಸುವ ವಯೋಮಿತಿಯನ್ನು 18 ರಿಂದ 21 ಕ್ಕೆ ಹೆಚ್ಚಿಸುವ ಅಗತ್ಯವಿದೆ ಎಂದು ಅಧ್ಯಕ್ಷ ಜೋ ಬೈಡನ್ ಕೆಲ ದಿನಗಳ ಹಿಂದೆ ಹೇಳಿದ್ದರು.
ಮೇ 24 ರಂದು, ಟೆಕ್ಸಾಸ್ನ ಉವಾಲ್ಡೆಯಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ಇದರಲ್ಲಿ 19 ಮಕ್ಕಳು ಸೇರಿದಂತೆ ಹಲವಾರು ಜನರು ಸಾವನ್ನಪ್ಪಿದ್ದರು. ಸಿಎನ್ಎನ್ ಪ್ರಕಾರ, ಫ್ಲೋರಿಡಾದ ಪಾರ್ಕ್ಲ್ಯಾಂಡ್ನಲ್ಲಿ 2018 ರಲ್ಲಿ ಮಾರ್ಜೋರಿ ಸ್ಟೋನ್ಮ್ಯಾನ್ ಡೌಗ್ಲಾಸ್ ಹೈಸ್ಕೂಲ್ ಗುಂಡಿನ ದಾಳಿಯ ನಂತರ ಇದು ಅತ್ಯಂತ ಭೀಕರ ದಾಳಿಯಾಗಿತ್ತು.
ಮೇ 31 ರಂದು, ನ್ಯೂ ಓರ್ಲಿಯನ್ಸ್ನಲ್ಲಿ ಪ್ರೌಢಶಾಲಾ ಪದವಿ ಸಮಾರಂಭದಲ್ಲಿ ಗುಂಡೇಟಿನಿಂದ ಒಬ್ಬ ವೃದ್ಧೆ ಸಾವನ್ನಪ್ಪಿದರು. ಇಬ್ಬರು ವ್ಯಕ್ತಿಗಳು ಗಾಯಗೊಂಡರು. ಜೂನ್ 1 ರಂದು, ಒಕ್ಲಹೋಮಾದ ತುಲ್ಸಾ ನಗರದ ಆಸ್ಪತ್ರೆ ಕ್ಯಾಂಪಸ್ನಲ್ಲಿ ನಡೆದ ಗುಂಡಿನ ಘಟನೆಯಲ್ಲಿ ಸುಮಾರು ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ CNN ವರದಿ ಮಾಡಿತ್ತು. ದಿನೆ ದಿನೇ ಅಮೆರಿಕದಲ್ಲಿ ಶೂಟೌಟ್ ಘಟನೆಗಳು ಹೆಚ್ಚಾಗುತ್ತಿದ್ದು, ಇದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ:
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.