ಯಾವ ಕೇಸ್ ಏನೂ ಆಗಿಲ್ಲ. ಏನು ಅವ್ಯವಹಾರವನ್ನೂ ಮಾಡಿಲ್ಲ. ಕೋರ್ಟ್ನಲ್ಲಿ ಕೇಸ್ ನಡೀತಿದ್ದು ಈಗ ಚರ್ಚೆ ಮಾಡೋದ್ರಲ್ಲ ಅರ್ಥವಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣದ ಬಗ್ಗೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಪ್ರತಿಕ್ರಿಯೆ ನೀಡಿದ ಪ್ರಜ್ವಲ್ ರೇವಣ್ಣ, ಯಾರೋ ಒಬ್ಬರು ನಾವು ಗೆದ್ದೆವು ಅಂತಾ ಸುಮ್ನೆ ಹೇಳೋದು ಬೇಡ ಎಂದಿದ್ದಾರೆ.