ಅತಿಯಾದ ಉಪ್ಪು ಸೇವನೆಯಿಂದ ಎದುರಿಸಬೇಕಾಗುತ್ತದೆ ಈ ಸಮಸ್ಯೆಗಳನ್ನು

ಅತಿಯಾದ ಉಪ್ಪು ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹೆಚ್ಚು ಉಪ್ಪನ್ನು ತಿನ್ನುವುದು ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ.  ಸ್ಥೂಲಕಾಯತೆ ಮತ್ತು ಅಧಿಕ ಬಿಪಿ ಹೆಚ್ಚು ಉಪ್ಪನ್ನು ತಿನ್ನುವುದರಿಂದ ಉಂಟಾಗುವ ಕೆಲವು ಸಾಮಾನ್ಯ ಮತ್ತು ಪ್ರಮುಖ ಸಮಸ್ಯೆಗಳು.

ಬೆಂಗಳೂರು : ಉಪ್ಪಿನ ಸೇವನೆಯು ಆರೋಗ್ಯಕ್ಕೆ ಮುಖ್ಯವಾಗಿದೆ.  ಏಕೆಂದರೆ ಇದು ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳ ಸಮತೋಲನವನ್ನು ಕಾಪಾಡುತ್ತದೆ .ಆದರೆ ಅಡುಗೆ ಮಾಡುವಾಗ ಸರಿಯಾದ ಪ್ರಮಾಣದಲ್ಲಿಯೇ  ಉಪ್ಪನ್ನು ಸೇರಿಸಬೇಕು. ದೇಹದಲ್ಲಿನ ದ್ರವ ಸಮತೋಲನದಲ್ಲಿ ಉಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ದೈನಂದಿನ ಡೋಸೇಜ್ ನಲ್ಲಿ ನಿರ್ದಿಷ್ಟ ಪ್ರಮಾಣದ ಉಪ್ಪು ಅತ್ಯಗತ್ಯ. ಆದರೆ, ಅತಿಯಾದ ಉಪ್ಪು ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹೆಚ್ಚು ಉಪ್ಪನ್ನು ತಿನ್ನುವುದು ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ.  ಸ್ಥೂಲಕಾಯತೆ ಮತ್ತು ಅಧಿಕ ಬಿಪಿ ಹೆಚ್ಚು ಉಪ್ಪನ್ನು ತಿನ್ನುವುದರಿಂದ ಉಂಟಾಗುವ ಕೆಲವು ಸಾಮಾನ್ಯ ಮತ್ತು ಪ್ರಮುಖ ಸಮಸ್ಯೆಗಳು.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಅಧಿಕ ಪ್ರಮಾಣದ ಉಪ್ಪನ್ನು ಸೇವಿಸುವವರಲ್ಲಿ ಹೃದ್ರೋಗದ ಅಪಾಯವು ಹೆಚ್ಚಾಗಿರುತ್ತದೆ. ಇದರಿಂದ ಹೃದಯ ಸಂಬಂಧಿ ಹಲವು ಸಮಸ್ಯೆಗಳು ಎದುರಾಗಬಹುದು. 

2 /4

ಉಪ್ಪನ್ನು ಅತಿಯಾಗಿ ಸೇವಿಸುವುದರಿಂದ ಉಂಟಾಗುವ ಒಂದು ಅನಾನುಕೂಲವೆಂದರೆ ಅಧಿಕ ರಕ್ತದೊತ್ತಡ ಅಥವಾ ಅಧಿಕ ಬಿಪಿ.  ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ತಮ್ಮ ಆಹಾರದಲ್ಲಿ ಕಡಿಮೆ ಉಪ್ಪನ್ನು ಸೇರಿಸಲು ಸಲಹೆ ನೀಡಲಾಗುತ್ತದೆ.

3 /4

ಹೆಚ್ಚು ಉಪ್ಪನ್ನು ಸೇವಿಸುವುದರಿಂದ ದೇಹದಲ್ಲಿ ನಿರ್ಜಲೀಕರಣ ಅಥವಾ ನೀರಿನ ಕೊರತೆ ಉಂಟಾಗುತ್ತದೆ.  ಹೆಚ್ಚಿನ ಪ್ರಮಾಣದ ಉಪ್ಪು ಆಹಾರದೊಂದಿಗೆ ದೇಹವನ್ನು ತಲುಪಿದಾಗ, ಆಗಾಗ ಮೂತ್ರ ವಿಸರ್ಜನೆಯಾಗುತ್ತದೆ. ಈ ಕಾರಣದಿಂದಾಗಿ, ದೇಹದಲ್ಲಿ ನೀರಿನ ಕೊರತೆ ಮತ್ತು ನಿರ್ಜಲೀಕರಣ ಸಮಸ್ಯೆಗಳು ಎದುರಾಗುತ್ತವೆ.  

4 /4

ಅಧಿಕ ಪ್ರಮಾಣದ ಉಪ್ಪು ಕೂಡ ಬೊಜ್ಜು ಮತ್ತು ದೇಹದ ಊತಕ್ಕೆ ಕಾರಣವಾಗಬಹುದು. ಉಪ್ಪಿನಿಂದ ಸಿಗುವ ಸೋಡಿಯಂ ಪ್ರಮಾಣ ದೇಹದಲ್ಲಿ ಹೆಚ್ಚಾದಾಗ ದೇಹ ಊದಿಕೊಳ್ಳುತ್ತದೆ.