ರೆಡ್ಮಿ ಕಂಪನಿಯು ಶೀಘ್ರದಲ್ಲೇ 200-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುವ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಿದೆ. ಇದಕ್ಕೆ ರೆಡ್ಮಿ ಕೆ50ಎಸ್ ಪ್ರೊ ಎಂದು ಹೆಸರಿಸಲಾಗಿದೆ. ಆಗಸ್ಟ್ ಮೊದಲ ವಾರದಲ್ಲಿ ರೆಡ್ಮಿಯ ಈ ಸ್ಮಾರ್ಟ್ಫೋನ್ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ಬೆಲೆ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ...
Xiaomi ದೇಶೀಯ ಚೀನಾ ಮಾರುಕಟ್ಟೆಯಲ್ಲಿ Redmi K50s ಮತ್ತು Redmi K50s ಪ್ರೊ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಈ ಸಾಧನಗಳನ್ನು ಜಾಗತಿಕ ಮಾರುಕಟ್ಟೆಗಾಗಿ Xiaomi 12T ಮತ್ತು Xiaomi 12T Pro ಎಂದು ಮರುಬ್ಯಾಡ್ಜ್ ಮಾಡುವ ನಿರೀಕ್ಷೆಯಿದೆ. ರೆಡ್ಮಿ ಕೆ50ಎಸ್ ಪ್ರೊ ಈಗಾಗಲೇ TENAA ಮತ್ತು CMIIT ಪ್ರಮಾಣೀಕರಣ ವೆಬ್ಸೈಟ್ಗಳಲ್ಲಿ ಕಾಣಿಸಿಕೊಂಡಿದೆ ಮತ್ತು ಹಲವಾರು ಪ್ರಮುಖ ವಿಶೇಷಣಗಳನ್ನು ಬಹಿರಂಗಪಡಿಸಿದೆ.
ರೆಡ್ಮಿ ಕೆ50ಎಸ್ ಪ್ರೊ ವಿಶೇಷತೆಗಳು:
ಲೀಕ್ ಆಗಿರುವ ಮಾಹಿತಿಗಳ ಪ್ರಕಾರ, ರೆಡ್ಮಿ ಕೆ50ಎಸ್ ಪ್ರೊ, 6.67-ಇಂಚಿನ OLED ಡಿಸ್ಪ್ಲೇ ಪ್ಯಾನೆಲ್ನೊಂದಿಗೆ ಬರಲಿದೆ. ಅದು 120Hz ರಿಫ್ರೆಶ್ ದರ ಮತ್ತು HDR10+ ಅನ್ನು ಬೆಂಬಲಿಸುತ್ತದೆ. ಸಾಧನವು ಸ್ನಾಪ್ಡ್ರಾಗನ್ 8+ Gen 1 ಚಿಪ್ಸೆಟ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- 32 ಇಂಚಿನ ಸ್ಮಾರ್ಟ್ ಟಿವಿಯನ್ನು 15,000ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ
ರೆಡ್ಮಿ ಕೆ50ಎಸ್ ಪ್ರೊ ಬ್ಯಾಟರಿ:
ರೆಡ್ಮಿ ಕೆ50ಎಸ್ ಪ್ರೊ 8GB/12GB RAM ಮತ್ತು 128GB/256GB ಸ್ಟೋರೇಜ್ನೊಂದಿಗೆ ಲಭ್ಯವಾಗಲಿದೆ. ಕಂಪನಿಯು ಇದನ್ನು ಎರಡು ಕಾನ್ಫಿಗರೇಶನ್ಗಳಲ್ಲಿ ನೀಡುತ್ತದೆಯೇ ಅಥವಾ ಮೂರರಲ್ಲಿ ನೀಡುತ್ತದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಬ್ಯಾಟರಿಗೆ ಸಂಬಂಧಿಸಿದಂತೆ, ಇದು 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಮಾಹಿತಿ ಬಹಿರಂಗಗೊಂಡಿದೆ.
ರೆಡ್ಮಿ ಕೆ50ಎಸ್ ಪ್ರೊ ಕ್ಯಾಮೆರಾ:
ರೆಡ್ಮಿ ಕೆ50ಎಸ್ ಪ್ರೊ ಮೊಟೊರೊಲಾ ಎಡ್ಜ್ X30 ಪ್ರೊ ಅನ್ನು ಹೊರತುಪಡಿಸಿ 200-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರುವ ಮೊದಲ ಸ್ಮಾರ್ಟ್ಫೋನ್ ಇದಾಗಿದೆ. ರೆಡ್ಮಿ ಕೆ50ಎಸ್ ಪ್ರೊ ನಲ್ಲಿನ ಇತರ ಸಂವೇದಕಗಳು 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಮುಂಭಾಗದಲ್ಲಿ 20 ಎಂಪಿ ಸೆಲ್ಫಿ ಕ್ಯಾಮರಾವನ್ನು ಹೊಂದಿರುವ ನಿರೀಕ್ಷೆ ಇದೆ.
ಇದನ್ನೂ ಓದಿ- ಮೊಬೈಲ್ನಿಂದ ಮೆದುಳಿಗೆ ಬರಬಹುದು ಮಾರಣಾಂತಿಕ ಕಾಯಿಲೆ: ಈ ವಿಷಯ ನೆನಪಿಟ್ಟುಕೊಳ್ಳಿ
ರೆಡ್ಮಿ ಕೆ50ಎಸ್ ಪ್ರೊ ಡ್ಯುಯಲ್ ಸ್ಪೀಕರ್ ಸೆಟಪ್, ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಆಂಡ್ರಾಯ್ಡ್ 12-ಆಧಾರಿತ MIUI 13 ಆಪರೇಟಿಂಗ್ ಸಿಸ್ಟಮ್ನೊಂದಿಗೆ ಚೊಚ್ಚಲ ಪ್ರವೇಶವಾಗಲಿದೆ. ಸಾಧನದ ಬಿಡುಗಡೆ ದಿನಾಂಕ ಮತ್ತು ಬೆಲೆಗೆ ಸಂಬಂಧಿಸಿದ ವಿವರಗಳನ್ನು ಇನ್ನೂ ಸ್ಪಷ್ಟಪಡಿಸಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.