ದೀಪಾವಳಿ ಅಮಾವಾಸ್ಯೆಯಂದು ಈ ವಸ್ತುಗಳು ಕಣ್ಣಿಗೆ ಬಿದ್ದರೆ ಶುಭ

 ಯಾವುದೇ ವ್ಯಕ್ತಿಯ ಮನೆಗೆ ಪ್ರವೇಶಿಸುವ ಮೊದಲು ಲಕ್ಷ್ಮೀ ದೇವಿ ಕೆಲವು ಸೂಚನೆಗಳನ್ನು ನೀಡುತ್ತಾಳೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. 

ಬೆಂಗಳೂರು : ಯಾವುದೇ ಮನೆಗೆ ಪ್ರವೇಶಿಸುವ ಮುನ್ನ ಲಕ್ಷ್ಮೀ ದೇವಿ ಹಲವು ರೀತಿಯಲ್ಲಿ ಸೂಚನೆಗಳನ್ನು ನೀಡುತ್ತಾಳೆ. ದೀಪಾವಳಿಯಂದು ಲಕ್ಷ್ಮೀ ದೇವಿಯ ಆರಾಧನೆಗೆ ವಿಶೇಷ ಮಹತ್ವವಿದೆ. ಈ ದಿನದಂದು ಲಕ್ಷ್ಮೀ -ಗಣೇಶನ ಪೂಜೆಯನ್ನು  ವಿಧಿ ವಿಧಾನಗಳಿಂದ  ನೆರವೇರಿಸಲಾಗುತ್ತದೆ. ಈ ದಿನದಂದು  ಲಕ್ಷ್ಮೀ ಭೂಮಿಗೆ ಬಂದು ಭಕ್ತರ ನಡುವೆ ವಾಸಿಸುತ್ತಾಳೆ ಎಂದು ಹೇಳಲಾಗುತ್ತದೆ. ಇನ್ನು ಭಕ್ತರ ಭಕ್ತಿಗೆ ಮೆಚ್ಚಿ ಅವರ ಮನೆಗಳಲ್ಲಿ ನೆಲೆಸುತ್ತಾಳೆ. ಯಾವುದೇ ವ್ಯಕ್ತಿಯ ಮನೆಗೆ ಪ್ರವೇಶಿಸುವ ಮೊದಲು ಲಕ್ಷ್ಮೀ ದೇವಿ ಕೆಲವು ಸೂಚನೆಗಳನ್ನು ನೀಡುತ್ತಾಳೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಮುಂಜಾನೆ ಮನೆಯಿಂದ ಹೊರಗೆ ಬಂದಾಗ ಯಾರಾದರೂ ಗುಡಿಸುತ್ತಿರುವುದನ್ನು ಕಂಡರೆ ಅದು ಲಕ್ಷ್ಮೀ ನೀಡುವ ಶುಭ ಸಂಕೇತ ಎಂದು ಹೇಳಲಾಗುತ್ತದೆ.  ಲಕ್ಷ್ಮೀ ದೇವಿಯು ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳನ್ನು ನಿವಾರಿಸುತ್ತಾಳೆ. 

2 /5

ದೀಪಾವಳಿ ಅಮಾವಾಸ್ಯೆಯಂದು, ಅಥವಾ ಎರಡು ದಿನಗಳ ನಂತರ ಬೆಳಿಗ್ಗೆ  ಶಂಖದ ಶಬ್ದ ಕೇಳಿದರೆ,  ನಿಮ್ಮ ಮನೆಗೆ ಲಕ್ಷ್ಮೀ ಪ್ರವೇಶಿಸಲಿದ್ದಾಳೆ ಎಂದು ಅರ್ಥಮಾಡಿಕೊಳ್ಳಿ. ಶಂಖವನ್ನು ಲಕ್ಷ್ಮೀ  ದೇವಿಯ ಸಹೋದರ ಎಂದು ಪರಿಗಣಿಸಲಾಗುತ್ತದೆ. ಮುಂಜಾನೆ ಅದರ ಧ್ವನಿಯನ್ನು ಕೇಳುವುದು ಮಂಗಳಕರವಾಗಿದೆ. 

3 /5

ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಲಕ್ಷ್ಮೀ  ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಬೆಳಿಗ್ಗೆ ತುಳಸಿ ಗಿಡದ ಬಳಿ ಹಲ್ಲಿಯನ್ನು ನೋಡಿದರೆ, ನೀವು ಶೀಘ್ರದಲ್ಲೇ ಶ್ರೀಮಂತರಾಗುತ್ತೀರಿ ಎಂದು ಅರ್ಥಮಾಡಿಕೊಳ್ಳಿ. 

4 /5

ಜ್ಯೋತಿಷ್ಯದಲ್ಲಿ, ಮನೆಯಲ್ಲಿ ಕಪ್ಪು ಇರುವೆಗಳು ಬಂದರೆ ಶುಭ ಎಂದು ಹೇಳಲಾಗುತ್ತದೆ.  ದೀಪಾವಳಿಯ ದಿನದಂದು ಅಥವಾ ದೀಪಾವಳಿಯ ನಂತರ, ಕಪ್ಪು ಇರುವೆಗಳ ಸಮೂಹವು ಮನೆಯಲ್ಲಿ ಏನನ್ನಾದರೂ ತಿನ್ನುವುದನ್ನು ಕಂಡರೆ ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕಪ್ಪು ಇರುವೆಗಳ ಆಗಮನವು ಇದ್ದಕ್ಕಿದ್ದಂತೆ ಎಲ್ಲಿಂದಲೋ  ಧನ್ ಆಗಮನ ವಾಗುವುದನ್ನು ಸೂಚಿಸುತ್ತದೆ.

5 /5

ಮನೆಯಿಂದ ಹೊರಗೆ ಹೋಗುವಾಗ ನಾಯಿಯ ಬಾಯಿಯಲ್ಲಿ ಆಹಾರ ಕಂಡರೆ ನೀವು ಹಣ ಗಳಿಸುತ್ತೀರಿ ಎಂದರ್ಥ. ಆದರೆ ನಾಯಿಯು ತನ್ನ ಬಾಯಿಯಲ್ಲಿ ಸಸ್ಯಾಹಾರಿ ವಸ್ತುಗಳನ್ನು ಕೊಂಡೊಯ್ಯುವುದನ್ನು ಕಂಡರೆ ಮಾತ್ರ ಶುಭ ಎಂದು ಹೇಳಲಾಗುತ್ತದೆ.