ಭಾರತದಲ್ಲಿ ಲಾಂಚ್ ಆಗಲಿದೆ ಥ್ರೀ ಟೈರ್ ಸ್ಕೂಟರ್!

  • Apr 11, 2018, 15:49 PM IST
1 /5

ಫ್ರಾನ್ಸ್'ನ ಅತಿದೊಡ್ಡ ಆಟೋಮೊಬೈಲ್ ಕಂಪನಿ ಪ್ಯುಗೇಟ್(Peugeot) ಅತಿ ಶೀಘ್ರದಲ್ಲಿಯೇ ಭಾರತದಲ್ಲಿ ಹೈಟೆಕ್ ಸ್ಕೂಟರ್ ಬಿಡುಗಡೆ ಮಾಡಲಿದೆ. ಈ ಹೈಟೆಕ್ ಸ್ಕೂಟರ್ ಬಹಳ ವಿಶಿಷ್ಟವಾಗಿದ್ದು, ಇದಕ್ಕೆ Peugeot Metropolis 400 ಎಂದು ಹೆಸರಿಡಲಾಗಿದೆ. ಈಗಾಗಲೇ ಈ ಸ್ಕೂಟರ್ ಅನ್ನು ವಿದೇಶಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಭಾರತದಲ್ಲಿ ಮಹೇಂದ್ರ ಸಹಭಾಗಿತ್ವದೊಂದಿಗೆ ಸದ್ಯದಲ್ಲೇ ಬಿಡುಗಡೆ ಮಾಡಲಿದೆ. 

2 /5

ಈ ಸ್ಕೂಟರ್ ಇತರ ಸ್ಕೂಟರ್'ಗಳಿಗಿಂತ ವಿಭಿನ್ನವಾಗಿದ್ದು, 3 ಚಕ್ರಗಳನ್ನು ಹೊಂದಿದೆ. ಎಲ್ಲಾ 3 ಚಕ್ರಗಳಲ್ಲಿಯೂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. 13.5 ಲೀಟರ್ ಇಂಧನ ಶೇಖರಣಾ ಸಾಮರ್ಥ್ಯ ಹೊಂದಿರುವ ಈ ಸ್ಕೂಟರ್ 400cc 4-ಸ್ಟ್ರೋಕ್ ಲಿಕ್ವಿಡ್ ಕೂಲ್ ಎಂಜಿನ್ ಹೊಂದಿದೆ. ಈ ಸ್ಕೂಟರ್ ಸ್ವಯಂಚಾಲಿತ ಗೇರ್ಗಳನ್ನು ಹೊಂದಿದ್ದು, ಯುರೋಪ್ನಲ್ಲಿ ಮಾರಾಟವಾದ 400ಸಿಸಿ ಟ್ರೈಸಿಕಲ್ ಸ್ಕೂಟರ್ ರೀತಿಯೇ 37 ಬಿಎಚ್ಪಿ ಪವರ್ ನೀಡುತ್ತದೆ.

3 /5

ಈ ಸ್ಕೂಟರ್'ನಲ್ಲಿ ಸೆಮಿ ಡಿಜಿಟಲ್ ಮೀಟರ್ ಅಳವಡಿಸಲಾಗಿದ್ದು, ಸ್ಕೂಟರಿನ ನಿರ್ವಹಣೆಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ. ಈ 3ಟೈರ್ ಸ್ಕೂಟರ್ ಸುಮಾರು 258 ಕೆ.ಜಿ. ತೂಕವಿದ್ದು, ಇದರ ಬೆಲೆ ಭಾರತದಲ್ಲಿ ಸುಮಾರು 2.5 ಲಕ್ಷ ರೂ. ಎನ್ನಲಾಗಿದೆ. ಆದರೆ, ಕಂಪೆನಿಯ ಪರವಾಗಿ ಇದರ ಬೆಲೆಯನ್ನು ಇನ್ನೂ ಪರಿಷ್ಕರಿಸಲಾಗಿಲ್ಲ. ಸ್ಕೂಟರ್ ಬಿಡುಗಡೆಯಾದ ಬಳಿಕ ನಿರ್ದಿಷ್ಟ ಬೆಲೆ ತಿಳಿಯಲಿದೆ. 

4 /5

ಸ್ಕೂಟರ್ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ, ಇದು ಅನಲಾಗ್ ಸ್ಪೀಡೋಮೀಟರ್ ಮತ್ತು ಟೆಕ್ಮಾಮೀಟರ್ ಜತೆ ಡಿಜಿಟಲ್ ಟ್ರಿಪ್ ಮೀಟರ್ ಸಹ ಇದೆ. ಈ ಮೀಟರ್ ಟೆಂಪರೇಟರ್, ಡಿಜಿಟಲ್ ಕ್ಲಾಕ್, ಡಿಜಿಟಲ್ ಪ್ಯುಯಲ್ ಗೇಜ್, ಕಡಿಮೆ ಇಂಧನ ಗೇಜ್, ಸರ್ವೀಸ್ ರಿಮೈಂಡರ್, ಕಡಿಮೆ ತೈಲ ಸೂಚಕ ಮತ್ತು ಬ್ಯಾಟರಿ ಸೂಚಕ ಮುಂತಾದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆಯಲ್ಲದೆ, ನಿರ್ವಹಣೆಗೆ ಉಚಿತ ಬ್ಯಾಟರಿಯನ್ನೂ ಒದಗಿಸಲಾಗಿದೆ. ಆಸನದ ಎತ್ತರ 780 ಮಿ.ಮೀ. ಇದ್ದು, ಕಪ್ಪು, ಬೂದು, ಬಿಳಿ ಮತ್ತು ಕೆಂಪು ಬಣ್ಣದಲ್ಲಿ ಸ್ಕೂಟರ್ ದೊರೆಯಲಿದೆ.

5 /5

ಈ 3 ಚಕ್ರದ ಸ್ಕೂಟರ್ ಎಬಿಎಸ್ ವೈಶಿಷ್ಟ್ಯವನ್ನು ಹೊಂದಿದೆ. ಇದರ ಜೊತೆಯಲ್ಲಿ, ಸ್ಮಾರ್ಟ್ಫೋನ್ ಚಾರ್ಜ್ ಮಾಡಲು USB ಪೋರ್ಟ್ ಸಹ ಇದೆ. 2018 ರ ಪಿಯುಗಿಯೊ ಮೆಟ್ರೋಪೊಲಿಸ್ ವಿಶ್ವದ ಪ್ರಥಮ ಸ್ಕೂಟರ್ ಆಗಿದ್ದು, ಇದರಲ್ಲಿ ಎಮರ್ಜೆನ್ಸಿ ಬ್ರೇಕ್ ಹಾಕಿದ ಸಂದರ್ಭದಲ್ಲಿ ಎಚ್ಚರಿಕೆ ಲ್ಲೈಟ್ಗಳನ್ನು ಆನ್ ಆಗುತ್ತವೆ. ಅಷ್ಟೇ ಅಲ್ಲದೆ, ಈ ಸ್ಕೂಟರ್ನಲ್ಲಿ ಸಿಟಿ ಮತ್ತು ಸ್ಪೋರ್ಟ್ ಎರಡೂ ಮೋಡ್ನಲ್ಲಿ ಚಲಾಯಿಸುವ ಆಯ್ಕೆ ನೀಡಲಾಗಿದೆ.