ಆಗ ನನಗೆ 18 ವರ್ಷ, ಭುಜ ಒತ್ತಿ ಒಂಟಿಯಾಗಿ ಸಿಗು ಎನ್ನುತ್ತಿದ್ದರು..! ʼಸೂರ್ಯವಂಶʼ ನಟಿಯ ಶಾಕಿಂಗ್‌ ಹೇಳಿಕೆ

Isha Koppikar Casting Couch  : ನಟಿ ಇಶಾ ಕೊಪ್ಪಿಕರ್ ಬಹುಷಃ ಈ ಹೆಸರು ಹೇಳಿದರೆ ನಿಮಗೆ ಯಾರು ಈಕೆ ಅಂತ ಡೌಟ್‌ ಬರಬಹುದು.. ʼಸೂರ್ಯವಂಶʼ ಸಿನಿಮಾ ನೋಡಿದ್ದೀರಾ..? ಅದರಲ್ಲಿ ವಿಷ್ಣು ವರ್ಧನ್‌ ಅವರು ಪತ್ನಿ ಐಎಎಸ್‌ ಅಧಿಕಾರಿ ಪದ್ಮಾ ಗೊತ್ತಲ್ವಾ.. ಅವರೇ ನೋಡಿ ಇಶಾ.. ಸಧ್ಯ ಚಿತ್ರರಂಗಕ್ಕೆ ಬಂದ ಆರಂಭಿಕ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. 
 

1 /7

1999 ರಲ್ಲಿ ಬಿಡುಗಡೆಯಾದ ಸೂರ್ಯವಂಶ ಸಿನಿಮಾದ ಮೂಲಕ ಇಶಾ ಗೋಬಿಕರ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಈ ಇಂದಿಗೂ ಸಹ ಸಿನಿ ಪ್ರೇಕ್ಷಕರ ಮೆಚ್ಚಿನ ಚಿತ್ರಗಳಲ್ಲಿ ಒಂದು. ಓ ನನ್ನ ನಲ್ಲೆ ಮೂಲಕ ಕನ್ನಡಿಗರ ಮನ ಗೆದ್ದರು.   

2 /7

ಇಶಾ ತೆಲುಗು ಸಿನಿಮಾ     W/o V. Vara Prasad ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟರು. 2001 ಹ್ಞೂಂ ಅಂತೀಯಾ? ಊಹ್ಞೂಂ ಅಂತೀಯಾ? ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು.  

3 /7

ಸಾಕಷ್ಟು ಸಮಯದ ನಂತರ ಈಶಾ 2018ರಲ್ಲಿ, ಲೂಟಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್‌ ಮಾಡಿದರು. ವಿಶೇಷ ಅಂದ್ರೆ ಸೂರ್ಯವಂಶದಲ್ಲಿನ ಇವರ ನಟನೆಯ ವಿಡಿಯೋಗಳು ಇಂದಿಗೂ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ..  

4 /7

ನಟಿ ಇಶಾ ಕೊಪ್ಪಿಕರ್ ಚಿತ್ರರಂಗಕ್ಕೆ ಬಂದ ಆರಂಭಿಕ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಪಾತ್ರಧಾರಿಗಳನ್ನು ನಿರ್ಧರಿಸುವ ಶಕ್ತಿ ಬಹುತೇಕ ನಿರ್ದೇಶಖ ಮತ್ತು ನಟರಿಗೆ ಇರುತ್ತದೆ. ಆ ಸಮಯದಲ್ಲಿ ಅನೇಕ ನಟಿಯರು ಒತ್ತಡಕ್ಕೆ ಸಿಲುಕಿ ಚಿತ್ರರಂಗವನ್ನು ತೊರೆಯಲು ನಿರ್ಧರಿಸುತ್ತಾರೆ.   

5 /7

ನಾನು ಸೇರಿದಂತೆ ಕೆಲವರು ಛಲ ಬಿಡದೆ ಇಂಡಸ್ಟ್ರಿಯಲ್ಲಿ ಮುಂದುವರೆದಿದ್ದೇವೆ... ಒಬ್ಬ ಮ್ಯಾನೇಜರ್ ಮತ್ತು ನಟ ನನ್ನನ್ನು ಸಂಪರ್ಕಿಸಿದಾಗ ನನಗೆ 18 ವರ್ಷ. ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ನಟರ ಜತೆ ‘ಫ್ರೆಂಡ್ಲಿ’ ಆಗಿ ಇರಲು ಹೇಳಿದ್ದರು. ನಾನು ತುಂಬಾ ಸ್ನೇಹಜೀವಿ, ಆದರೆ ಅವರ ಪ್ರಕಾರ 'ಸ್ನೇಹ'  ಅಂದ್ರೆ ಬೇರೆ ಯಾಗಿತ್ತು ಎಂದಿದ್ದಾರೆ.   

6 /7

ಅಲ್ಲದೆ, ಇಶಾ ಕೊಪ್ಪಿಕರ್ ತಮ್ಮ 23ನೇ ವಯಸ್ಸಿನಲ್ಲಿ ನಡೆದ ಆಘಾತಕಾರಿ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ಸ್ಟಾರ್‌ ನಟರೊಬ್ಬರು ನನ್ನನ್ನು ಒಂಟಿಯಾಗಿ ಭೇಟಿಯಾಗುವಂತೆ ಆಹ್ವಾನಿಸಿದ್ದರು. ಡ್ರೈವರ್ ಅಥವಾ ಬೇರೆ ಯಾರೂ ಇರಬಾರದು ಅಂತ ಹೇಳಿದ್ದರು. ಯಾರೂ ಇಲ್ಲದೆ ಒಬ್ಬರೇ ನನ್ನನ್ನು ಭೇಟಿಯಾಗಲು ಬರಬೇಕು ಎಂದರು. ಆದರೆ ನಾನು ನಿರಾಕರಿಸಿದೆ ಎಂದು ಇಶಾ ಹೇಳಿಕೊಂಡಿದ್ದಾರೆ.   

7 /7

ನಟರು ಮತ್ತು ನಿರ್ದೇಶಕರ ಮ್ಯಾನೇಜರ್‌ಗಳೊಂದಿಗಿನ ಕೆಲವು ಕೆಟ್ಟ ಅನುಭವಗಳ ಬಗ್ಗೆ ಇಶಾ ಮಾತನಾಡಿದ್ದಾರೆ. "ವ್ಯವಸ್ಥಾಪಕರು ನನ್ನನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದರು. ನಾನು ನಟರೊಂದಿಗೆ ತುಂಬಾ 'ಸ್ನೇಹದಿಂದ' ಇರುವಂತೆ ಸೂಚಿಸುತ್ತಿದ್ದರು. ಅಲ್ಲದೆ, ಕೆಲವರು ಅನುಚಿತವಾಗಿ ನನ್ನ ಭುಜವನ್ನು ಒತ್ತಿ ಮುಟ್ಟುತ್ತಿದ್ದರು ಎಂದು ಶಾಕಿಂಗ್‌ ವಿಚಾರ ಬಿಚ್ಚಿಟ್ಟರು.