ಮದುವೆಗಾಗಿ ಟ್ವಿಂಕಲ್ ಅಕ್ಷಯ್ ಕುಮಾರ್‌ಗೆ ಹಾಕಿದ್ದ ಷರತ್ತೇನು? ಇಲ್ಲಿದೆ Love Story

ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಮಗನ ಹೆಸರು ಆರವ್ ಮತ್ತು ಮಗಳ ನಿತಾರಾ. ಇಬ್ಬರೂ ಹೆಚ್ಚಾಗಿ ಮಕ್ಕಳೊಂದಿಗೆ ಸಮಯ ಕಳೆಯುವುದನ್ನು ಕಾಣಬಹುದು.  

Yashaswini V | Jan 17, 2020, 01:38 PM IST

ನವದೆಹಲಿ: ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ (Akshay Kumar) ಮತ್ತು ಟ್ವಿಂಕಲ್ ಖನ್ನಾ (Twinkle Khanna) ಅವರು ಇಂದು ತಮ್ಮ 19 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ, ಈ ಜೋಡಿಯ ಕೆಲವು ವಿಶೇಷ ವಿಷಯಗಳನ್ನು ನಾವು ನಿಮಗೆ ಹೇಳಲಿದ್ದೇವೆ. ಟ್ವಿಂಕಲ್ ನೋಡಿದ ಕ್ಷಣವೇ ಅಕ್ಷಯ್ ಕುಮಾರ್ ಮನಸೋತಿದ್ದರು ಎಂಬುದು ನಿಮಗೆ ತಿಳಿದಿದೆಯೇ? ಅವರು ಮದುವೆಗೆ ಪ್ರಸ್ತಾಪಿಸಿದಾಗ ಟ್ವಿಂಕಲ್ ಒಂದು ಷರತ್ತು ವಿಧಿಸಿದ್ದರಂತೆ. ಬನ್ನಿ... ಈ ಜೋಡಿಯ Love Story ಬಗ್ಗೆ ತಿಳಿಯೋಣ...

1/6

ರಾಜೇಶ್ ಖನ್ನಾ ಅವರ ಲಡ್ಲಿಗೆ ಅಕ್ಷಯ್ ಪ್ರಪೋಸ್

ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಅವರ ಲಡ್ಲಿಗೆ ಅಕ್ಷಯ್ ಕುಮಾರ್ ಪ್ರಪೋಸ್ ಮಾಡಿದರು. ಇಬ್ಬರೂ ಜನವರಿ 17, 2001 ರಂದು ವಿವಾಹವಾದರು. ರಾಜೇಶ್ ಮತ್ತು ಡಿಂಪಲ್ ವರ್ಷಗಳ ಹಿಂದೆ ಬೇರ್ಪಟ್ಟಿದ್ದರು, ಆದರೆ ಇಬ್ಬರೂ ಮಗಳ ಮದುವೆಗೆ ಒಟ್ಟಿಗೆ ಬಂದರು. 

2/6

ಟೀನಾಳನ್ನು ನೋಡಿದ ತಕ್ಷಣವೇ ಹೃದಯ ಕೊಟ್ಟಿದ್ದ ಅಕ್ಷಯ್

ಫಿಲ್ಮ್‌ಫೇರ್ ನಿಯತಕಾಲಿಕದ ಚಿತ್ರೀಕರಣದ ವೇಳೆ ಇವರಿಬ್ಬರು ಮೊದಲ ಬಾರಿಗೆ ಭೇಟಿಯಾದರು.

3/6

'ಇಂಟರ್ನ್ಯಾಷನಲ್ ಖಿಲಾಡಿ' ಚಿತ್ರದ ಶೂಟಿಂಗ್‌ನಲ್ಲಿ ಆರಂಭವಾದ ಪ್ರೀತಿ

ಇದರ ನಂತರ, 'ಇಂಟರ್ನ್ಯಾಷನಲ್ ಖಿಲಾಡಿ' ಚಿತ್ರದ ಶೂಟಿಂಗ್‌ನಲ್ಲಿ ಇಬ್ಬರೂ ಭೇಟಿಯಾದರು, ಬಳಿಕ ಇಬ್ಬರು ಪರಸ್ಪರ ಪ್ರೀತಿಸಲು ಪ್ರಾರಂಭಿಸಿದರು.

4/6

ಟೀನಾ ಅಕ್ಷಯ್ ಕುಮಾರ್‌ಗೆ ಈ ಷರತ್ತು ಹಾಕಿದ್ದರಂತೆ

ಕರಣ್ ಜೋಹರ್ ಅವರ ಶೋ "ಕಾಫಿ ವಿಥ್ ಕರಣ್" ನಲ್ಲಿ, ಅಕ್ಷಯ್ ಕುಮಾರ್ ಅವರು ಮದುವೆಗೆ  ಪ್ರಪೋಸ್ ಮಾಡಿದಾದ ಟ್ವಿಂಕಲ್ ಅವರ 'ಮೇಲ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿತ್ತು. ಟ್ವಿಂಕಲ್ ಈ ಚಿತ್ರದ ಬಗ್ಗೆ ತುಂಬಾ ಉತ್ಸುಕರಾಗಿದ್ದರು. 'ಮೇಲ' ಚಿತ್ರ ಹಿಟ್ ಆದರೆ ನಾನು ನಿಮ್ಮನ್ನು ಮದುವೆಯಾಗುವುದಿಲ್ಲ. ಒಂದು ವೇಳೆ ಸಿನಿಮಾ ಫ್ಲಾಪ್ ಆದರೆ ಮದುವೆಯಾಗುತ್ತೇವೆ ಎಂದು ಷರತ್ತು ಹಾಕಿದ್ದರಂತೆ. ಟ್ವಿಂಕಲ್ ಅವರ 'ಮೇಲ' ಚಿತ್ರ ವಿಫಲವಾಯಿತು ಮತ್ತು ಇಬ್ಬರೂ ವಿವಾಹವಾದರು.

5/6

ಡಿಂಪಲ್ ಬಗ್ಗೆ ಮಾತನಾಡುತ್ತಾ ಈ ಬಗ್ಗೆ ಹಂಚಿಕೊಳ್ಳಲಾಗಿದೆ

ಅಕ್ಷಯ್ ಕುಮಾರ್ ಅವರ ಸಂದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು, ಅದರಲ್ಲಿ ಅವರು ಟೀನಾಳ ಕೈಹಿಡಿಯಲೆಂದು ಡಿಂಪಲ್ ಅವರ ಬಳಿ ಕೇಳಲು ಹೋದಾಗ ಡಿಂಪಲ್ ಅವರನ್ನು ಸಲಿಂಗಕಾಮಿ ಎಂದು ಪರಿಗಣಿಸಿದರು. ಅದು ಅವರ ಮಗಳ ಜೀವನವನ್ನು ಹಾಳು ಮಾಡುತ್ತದೆ ಎಂದು ಅವರು ಭಾವಿಸಿದ್ದರು. ಆದರೆ ಅಂತಿಮವಾಗಿ ಅಕ್ಷಯ್ ಕುಮಾರ್ ತಾವು ಟೀನಾರನ್ನು ನೋಡಿಕೊಲ್ಲುವುದಾಗಿ ಡಿಂಪಲ್ಗೆ ಮನವರಿಕೆ ಮಾಡಿಕೊಟ್ಟರು. ಬಳಿಕ ಇಬ್ಬರು ಮದುವೆಯಾದರು ಎಂದು ತಮ್ಮ ಪ್ರೇಮಕಥೆ ಮತ್ತು ಮದುವೆಯ ಹಿಂದಿನ ಘಟನೆ ಬಗ್ಗೆ ವಿವರಿಸಿದರು.

6/6

ಮದುವೆಯ ನಂತರ ನಟನೆಗೆ ಬೈ-ಬೈ ಹೇಳಿದ ಟ್ವಿಂಕಲ್

ಮದುವೆಯ ನಂತರ ಟ್ವಿಂಕಲ್ ನಟನೆಗೆ ಬೈ-ಬೈ ಹೇಳಿದರು. ಉತ್ತಮ ಬರಹಗಾರರೂ ಆಗಿರುವ ಅವರು ಇಂಟೀರಿಯರ್ ಡೆಕೊರೇಟರ್ ಆಗಿ ಹೆಸರು ಗಳಿಸುತ್ತಿದ್ದಾರೆ.

(ಫೋಟೊ ಕೃಪೆ: Instagram)