ಅಮೆಜಾನ್ ಸಮ್ಮರ್ ಸೇಲ್: ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಭರ್ಜರಿ ರಿಯಾಯಿತಿ

                            

ಅಮೆಜಾನ್ ಸಮ್ಮರ್ ಸೇಲ್ 2022 ಅತ್ಯುತ್ತಮ ಸ್ಮಾರ್ಟ್‌ಫೋನ್ ಕೊಡುಗೆಗಳು: ದೇಶದ ಅತ್ಯಂತ ಜನಪ್ರಿಯ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಅಮೇಜಾನ್ ಮೇ 4 ರಿಂದ ಅಮೆಜಾನ್ ಸಮ್ಮರ್ ಸೇಲ್ ಅನ್ನು ಪ್ರಾರಂಭಿಸಲಿದೆ.  ಅಂದಹಾಗೆ, ಈ ಮಾರಾಟದ ಮೂಲಕ ನೀವು ಎಲ್ಲಾ ರೀತಿಯ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು, ಆದರೆ ಇಂದು ನಾವು ಈ ಮಾರಾಟದಲ್ಲಿ ಒಳಗೊಂಡಿರುವ ಕೆಲವು ಉತ್ತಮ ಸ್ಮಾರ್ಟ್‌ಫೋನ್ ಡೀಲ್‌ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಶಿಯೋಮಿ 11 ಲೈಟ್ ಏನ್ಇ 5ಜಿ: ಶಿಯೋಮಿಯ ಈ ಅತ್ಯಂತ ಸ್ಲಿಮ್ ಮತ್ತು ಹಗುರವಾದ ಸ್ಮಾರ್ಟ್‌ಫೋನ್ ಅನ್ನು ರೂ. 33,999 ಬದಲಿಗೆ ರೂ. 23,999 ಗೆ ಮಾರಾಟ ಮಾಡಲಾಗುತ್ತಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಿಯಾಗಿ ಇದನ್ನು ಖರೀದಿಸುವ ಮೂಲಕ, ನೀವು ರೂ. 15,400 ವರೆಗೆ ಉಳಿಸಬಹುದು ಮತ್ತು ಡೀಲ್‌ನಲ್ಲಿ ಒಳಗೊಂಡಿರುವ ಬ್ಯಾಂಕ್ ಕೊಡುಗೆಗಳ ಲಾಭವನ್ನು ಪಡೆಯುವ ಮೂಲಕ ಈ ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

2 /5

ಐಕ್ಯೂ ಝೆಡ್ 44ಡಬ್ಲ್ಯೂ: ಇತ್ತೀಚೆಗೆ ಬಿಡುಗಡೆಯಾದ ಈ ಸ್ಮಾರ್ಟ್‌ಫೋನ್ ಅನ್ನು ರೂ. 15,499 ಕ್ಕೆ ಮಾರಾಟ ಮಾಡಲಾಗುತ್ತಿದ್ದು ಇದರ ಮೂಲ ಬೆಲೆ ರೂ. 20,999 ಆಗಿದೆ ಮತ್ತು ನಿಮಗೆ ಇದರಲ್ಲಿ ಒಂದು ಸಾವಿರ ರೂಪಾಯಿಗಳ ಕೂಪನ್ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಈ ಡೀಲ್‌ನಲ್ಲಿ ನಿಮಗೆ ಬ್ಯಾಂಕ್ ಆಫರ್ ಮತ್ತು ಎಕ್ಸ್‌ಚೇಂಜ್ ಆಫರ್ ನೀಡಲಾಗುತ್ತಿದೆ.

3 /5

ಸ್ಯಾಮ್ಸ್ಯಾಂಗ್ ಗ್ಯಾಲಕ್ಸಿ ಎಸ್20 ಎಫ್ಇ 5ಜಿ : ಮಾರುಕಟ್ಟೆಯಲ್ಲಿ ರೂ. 74,999 ಬೆಲೆಗೆ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್ ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ  ರೂ. 34,999 ಕ್ಕೆ ಮಾರಾಟವಾಗುತ್ತಿದೆ. ಎಲ್ಲಾ ಕೊಡುಗೆಗಳ ಲಾಭ ಪಡೆಯುವ ಮೂಲಕ ಈ ಫೋನ್ ಅನ್ನು ರೂ. 19,599 ಗೆ ಖರೀದಿಸಬಹುದು.

4 /5

ರೆಡ್ಮಿ ನೋಟ್ 11 ಪ್ರೊ+ 5ಜಿ: ರೆಡ್ಮಿಯ  ಈ 5G ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ ರೂ 24,999 ಬದಲಿಗೆ ರೂ. 19,999 ಕ್ಕೆ ಮಾರಾಟ ಮಾಡಲಾಗುತ್ತಿದೆ. ನೀವು ಬ್ಯಾಂಕ್ ಆಫರ್‌ಗಳೊಂದಿಗೆ ರೂ. 2,000 ಮತ್ತು ವಿನಿಮಯ ಕೊಡುಗೆಗಳೊಂದಿಗೆ ರೂ. 11,400 ವರೆಗೆ ಉಳಿಸಬಹುದು.

5 /5

ಐಫೋನ್ 13: ನೀವು  ಆಪಲ್ನ ಇತ್ತೀಚಿನ ಸ್ಮಾರ್ಟ್‌ಫೋನ್,  ಐಫೋನ್13 ಅನ್ನು ಈ ಸೇಲ್‌ನಿಂದ 13,000 ರೂಪಾಯಿಗಳ ರಿಯಾಯಿತಿಯ ನಂತರ 79,900 ರೂಪಾಯಿಗಳ ಬದಲಿಗೆ 66,900 ರೂಪಾಯಿಗಳಿಗೆ ಖರೀದಿಸಬಹುದು. ಅಲ್ಲದೆ, ಈ ಡೀಲ್‌ನಲ್ಲಿ, ಎಕ್ಸ್‌ಚೇಂಜ್ ಆಫರ್ ಮೂಲಕ 11,400 ರೂ.ವರೆಗೆ ಉಳಿತಾಯ ಮಾಡಬಹುದು ಅಂದರೆ ನೀವು 55,500 ರೂ.ಗೆ ಐಫೋನ್  13 ಅನ್ನು ಖರೀದಿಸಬಹುದು.