ಈ ಪರಿಹಾರ ಕ್ರಮಗಳನ್ನು ಅನುಸರಿಸಿದರೆ ಶೀಘ್ರದಲ್ಲೇ ಕಂಕಣ ಬಲ ಕೂಡಿ ಬರುತ್ತೆ..!

Astrology tips for Marriage delay : ಅನೇಕ ಜನರು ಕಂಕಣ ಬಲ ಕೂಡಿ ಬರುತ್ತಿಲ್ಲ ಎನ್ನುವ ಟೆನ್ಷನ್‌ನಲ್ಲಿರುತ್ತಾರೆ. ಕೆಲವರಿಗೆ ಗ್ರಹದೋಷದ ಪ್ರಭಾವದಿಂದ ಮದುವೆ ತಡವಾಗುತ್ತದೆ. ಇದರಿಂದ ಅನೇಕ ಯುವಕರು ಮತ್ತು ಅವರ ಮನೆಯರು ಚಿಂತೆಗೀಡಾಗುತ್ತಿದ್ದಾರೆ. ಬನ್ನಿ ಇದಕ್ಕೊಂದು ಪರಿಹಾರ ಕಂಡುಕೊಳ್ಳುವ.. 

1 /5

ಕೆಲವರಿಗೆ ರಾಹುದೋಷವಿರುತ್ತದೆ. ಜ್ಯೋತಿಷಿಗಳನ್ನು ಸಂಪರ್ಕಿಸಿ ಸರಿಯಾದ ಪ್ರಾರ್ಥನೆ, ದಾನ, ಪೂಜೆಗಳನ್ನು ಮಾಡಿದರೆ ಮದುವೆ ಕೂಡಲೆ ಆಗುತ್ತದೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು.  

2 /5

ಬೆಳಗ್ಗೆ ಸ್ನಾನ ಮಾಡುವಾಗ ಅರಿಶಿನವನ್ನು ಬಕೆಟ್‌ಗೆ ಹಾಕಿ ಜಳಕ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.   

3 /5

ಮನೆಯಲ್ಲಿ ಸತ್ತ ಪೂರ್ವಜರಿಗೆ ಶ್ರಾದ್ಧಕರ್ಮಗಳನ್ನು ಮಾಡಬೇಕು. ಅಂದು ಬಡವರಿಗೆ ಯಾವುದೇ ದಾನ ಮಾಡಬೇಕು. ಸತ್ತವರು ಇಷ್ಟಪಡುವ ಆಹಾರವನ್ನು ಬಡವರಿಗೆ ನೀಡಿ. ಮದುವೆ ಇಷ್ಟಾರ್ಥ ಸಿದ್ಧಿಸುತ್ತದೆ.  

4 /5

ಬಡವರ ಮದುವೆ ಕಾರ್ಯಗಳಿಗೆ ಆದಷ್ಟು, ಸಾಧ್ಯವಾದಷ್ಟು ಸಹಾಯ ಮಾಡಿ. ಇದರಿಂದ ನಿಮಗೆ ಬೇಗ ಮದುವೆ ಆಗುತ್ತೆ ಅಂತಾರೆ ಹಿರಿಯರು.  

5 /5

ಮಂಗಳವಾರ ಮತ್ತು ಶುಕ್ರವಾರದಂದು ನಿಂಬೆಹಣ್ಣಿನಲ್ಲಿ ದೀಪಗಳನ್ನು ಹಚ್ಚಬೇಕು. ಈ ರೀತಿಯ ದೀಪಾರಾಧನೆ ಮಾಡಿದರೆ ದೇವಿಯ ಅನುಗ್ರಹವಾಗುತ್ತದೆ ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ