Term Life Insurance ತೆಗೆದುಕೊಳ್ಳುವ ಮುನ್ನ ಈ ಐದು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ

Term Life Insurance: ಜೀವನದ ಅನಿಶ್ಚಿತತೆಯ ದೃಷ್ಟಿಯಿಂದ, ಟರ್ಮ್ ಇನ್ಶೂರೆನ್ಸ್ ಇಂದು ಪ್ರತಿಯೊಬ್ಬರಿಗೂ ಬಹಳ ಮುಖ್ಯವಾಗಿದೆ. ಮನೆ ಖರೀದಿ, ಮಕ್ಕಳ ಶಿಕ್ಷಣ ಮತ್ತು ಮಕ್ಕಳ ಮದುವೆಯಂತಹ ಎಲ್ಲಾ ಜವಾಬ್ದಾರಿಗಳನ್ನು ಟರ್ಮ್ ಪ್ಲಾನ್‌ನೊಂದಿಗೆ ಪೂರೈಸಬಹುದು.

ನವದೆಹಲಿ : Term Life Insurance: ಜೀವನದ ಅನಿಶ್ಚಿತತೆಯ ದೃಷ್ಟಿಯಿಂದ, ಟರ್ಮ್ ಇನ್ಶೂರೆನ್ಸ್ ಇಂದು ಪ್ರತಿಯೊಬ್ಬರಿಗೂ ಬಹಳ ಮುಖ್ಯವಾಗಿದೆ. ಮನೆ ಖರೀದಿ, ಮಕ್ಕಳ ಶಿಕ್ಷಣ ಮತ್ತು ಮಕ್ಕಳ ಮದುವೆಯಂತಹ ಎಲ್ಲಾ ಜವಾಬ್ದಾರಿಗಳನ್ನು ಟರ್ಮ್ ಪ್ಲಾನ್‌ನೊಂದಿಗೆ ಪೂರೈಸಬಹುದು. ಇದರ ಹೊರತಾಗಿ, ಕುಟುಂಬದಲ್ಲಿ ಒಬ್ಬನೇ ಒಬ್ಬ  ಸಂಪಾದಿಸುವ ಸದಸ್ಯನಿದ್ದು, ಅವನಿಗೆ ಏನಾದರೂ ಹೆಚ್ಚು ಕಡಿಮೆಯಾದರೆ, ಆ ಸಂದರ್ಭದಲ್ಲಿ Term Life Insurance ಅವಲಂಬಿತರಿಗೆ ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಸಹಾಯ ಮಾಡುತ್ತದೆ. ಕಡಿಮೆ ಪ್ರೀಮಿಯಂನಲ್ಲಿ ಗರಿಷ್ಠ ಜೀವ ವಿಮಾ ರಕ್ಷಣೆಯನ್ನು ಪಡೆಯಬಹುದು. ಆದರೂ , ಟರ್ಮ್ ಇನ್ಶೂರೆನ್ಸ್ ತೆಗೆದುಕೊಳ್ಳುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು  ಬಹಳ ಮುಖ್ಯವಾಗಿರುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

ಅನೇಕ ಬಾರಿ ಜನರು ಹಣವನ್ನು ಉಳಿಸಲು ಮತ್ತು ಕಡಿಮೆ ಪ್ರೀಮಿಯಂ ಪಾವತಿಸುವ ಸಲುವಾಗಿ, ಅಲ್ಪಾವಧಿಯ ವಿಮೆಯನ್ನು ತೆಗೆದುಕೊಳ್ಳುತ್ತಾರೆ. ಅಂಥಹ ಪಾಲಿಸಿಯಿಂದ ಪಾಲಿಸಿದಾರರಿಗೆ ಸಿಗುವ ಲಾಭ ಕಡಿಮೆ ಆಗುವ ನಷ್ಟ ಹೆಚ್ಚು. ವಯಸ್ಸಾದಂತೆ, ನಿಮಗೆ ಹೆಚ್ಚಿನ ಟರ್ಮ್ ಇನ್ಶೂರೆನ್ಸ್ ಅಗತ್ಯವಿರುತ್ತದೆ. ಆದ್ದರಿಂದ, ಟರ್ಮ್ ಇನ್ಶೂರೆನ್ಸ್ ಅವಧಿಯನ್ನು ಗರಿಷ್ಠವಾಗಿ ಇಡಬೇಕು.

2 /5

Term Life Insurance ತೆಗೆದುಕೊಳ್ಳುವ ಮೊದಲು,  ಎಷ್ಟು ಕವರೇಜ್ ಬೇಕು ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಟರ್ಮ್ ವಿಮಾ ರಕ್ಷಣೆಯು ನಿಮ್ಮ ವಾರ್ಷಿಕ ಆದಾಯ ಮತ್ತು ಹೊಣೆಗಾರಿಕೆಗಳ 10-20 ಪಟ್ಟು ಹೆಚ್ಚು. ಸರಳ ಪದಗಳಲ್ಲಿ ಅರ್ಥಮಾಡಿಕೊಳ್ಳುವುದಾದರೆ,  ನಿಮ್ಮ ವಾರ್ಷಿಕ ಆದಾಯವು 5 ಲಕ್ಷ ರೂಪಾಯಿಗಳಾಗಿದ್ದು, 20 ಲಕ್ಷ ರೂಪಾಯಿ ಸಾಲವನ್ನು ಹೊಂದಿದ್ದರೆ, ನೀವು 1 ಕೋಟಿ ರೂಪಾಯಿಗಳ ವಿಮಾ ರಕ್ಷಣೆಗೆ ಅರ್ಜಿ ಸಲ್ಲಿಸಬಹುದು.

3 /5

ಬೇರೆ ಬೇರೆ ಕಂಪನಿಗಳ Term Life Insurance ಯೋಜನೆಗಳನ್ನು ಹೋಲಿಕೆ ಮಾಡಿ ನೋಡಬೇಕು. ಏಕೆಂದರೆ ಕೆಲವೊಮ್ಮೆ ಅಗ್ಗದ ಪ್ರೀಮಿಯಂನಲ್ಲಿ, ದುಬಾರಿ ಯೋಜನೆಗಳಲ್ಲಿ ಇಲ್ಲದ ಎಲ್ಲಾ ಸೌಲಭ್ಯಗಳು ಸಿಗುತ್ತವೆ. ಇದಲ್ಲದೆ, ವಿಮಾ ಕಂಪನಿಯ ಹಳೆಯ ಹಿಸ್ಟರಿ ಯನ್ನು ನೋಡಬೇಕು. ಇದು ಕಂಪನಿಯು ಎಷ್ಟು ದಿನಗಳವರೆಗೆ ಕ್ಲೈಮ್‌ಗಳನ್ನು ಹೊಂದಿಸಿದೆ ಎಂಬುದನ್ನು ತೋರಿಸುತ್ತದೆ.

4 /5

ಸಾಮಾನ್ಯವಾಗಿ, ಸ್ನೇಹಿತರು ಮತ್ತು ವಿಮಾ ಏಜೆಂಟ್‌ಗಳ ಸಲಹೆಯನ್ನು ಅವಲಂಬಿಸಿ ಜನರು Term insurance ಖರೀದಿಸುತ್ತಾರೆ. ಇಂದು ನೀವು ಇಂಟರ್ನೆಟ್ ರೂಪದಲ್ಲಿ ಮಾಹಿತಿಯನ್ನು ಪಡೆಯುವ ಉತ್ತಮ ಆಯ್ಕೆಯನ್ನು ಹೊಂದಿದ್ದೀರಿ. ವಿಮಾ ಯೋಜನೆಯನ್ನು ಖರೀದಿಸಲು ಇಂಟರ್ನೆಟ್ ಸಹಾಯವನ್ನು ತೆಗೆದುಕೊಳ್ಳಿ. ಆನ್‌ಲೈನ್‌ನಲ್ಲಿ ಪಾಲಿಸಿಯನ್ನು ತೆಗೆದುಕೊಳ್ಳಲು  ಕಡಿಮೆ ಪ್ರೀಮಿಯಂ ಪಾವತಿಸಬೇಕಾಗಬಹುದು.

5 /5

ಟರ್ಮ್ ಇನ್ಶೂರೆನ್ಸ್‌ನೊಂದಿಗೆ ವಿವಿಧ ರೀತಿಯ ರೈಡರ್‌ಗಳು ಸಹ ಲಭ್ಯವಿರುತ್ತದೆ. ಆದ್ದರಿಂದ, ಟರ್ಮ್ ಪಾಲಿಸಿಯನ್ನು ಖರೀದಿಸುವಾಗ, ಅನಗತ್ಯ ರೈಡರ್‌ಗಳನ್ನು ಖರೀದಿಸುವುದನ್ನು ತಪ್ಪಿಸಿ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ನಿಮ್ಮ ಕುಟುಂಬವನ್ನು ರಕ್ಷಿಸಲು ಟರ್ಮ್ ಇನ್ಶೂರೆನ್ಸ್ ಪಾಲಿಸಿಯನ್ನು ಆದಷ್ಟು ಬೇಗ ಖರೀದಿಸಿ.