ಬೆಳ್ಳುಳ್ಳಿ ತಿಂದರೆ ಪ್ರಯೋಜನ ಮಾತ್ರ ವಲ್ಲ Side effects ಕೂಡಾ ಇದೆ

ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ (Cholesterol) ಅನ್ನು ಕಡಿಮೆ ಮಾಡುವುದರ ಜೊತೆಗೆ, ಸಾಮಾನ್ಯ ಶೀತ ಮತ್ತು ಜ್ವರದಂತಹ ಸಮಸ್ಯೆಗಳಿಗೆ ಬೆಳ್ಳುಳ್ಳಿ (garlic) ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಬೆಳ್ಳುಳ್ಳಿ ತಿಂದರೆ ಒಳ್ಳೆಯದು ಎಂಬ ಕಾರಣಕ್ಕೆ ಅತಿಯಾಗಿ ಸೇವಿಸಿದರೆ ಸಮಸ್ಯೆಯನ್ನು ಕೂಡಾ ಎದುರಿಸಬೇಕಾಗುತ್ತದೆ.   

ನವದೆಹಲಿ : ಆಹಾರದ ರುಚಿಯನ್ನು (TastyFood) ಹೆಚ್ಚಿಸುವ  ಬೆಳ್ಳುಳ್ಳಿಯನ್ನು ವಿಶ್ವಾದ್ಯಂತ ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಅನೇಕ ದೇಶಗಳಲ್ಲಿ, ಬೆಳ್ಳುಳ್ಳಿಯನ್ನು ನೂರಾರು ವರ್ಷಗಳಿಂದ ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಅದರಲ್ಲಿರುವ ಆಂಟಿ ಬಯೋಟಿಕ್ (Antibiotic)  ಗುಣಗಳಿಂದ ಬೆಳ್ಳುಳ್ಳಿಯನ್ನು ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ.  ಹಸಿ  ಮತ್ತು ಬೇಯಿಸಿದ ಬೆಳ್ಳುಳ್ಳಿ ಎರಡೂ ಆರೋಗ್ಯಕ್ಕೆ ಪ್ರಯೋಜನಕಾರಿ. ಹಾಗಂತ ಅತಿಯಾಗಿ ಸೇವಿಸೀದರೆ ಆರೋಗ್ಯದ (Health) ಮೇಲೆ ಕೆಟ್ಟ ಪರಿಣಾಮ ಬೀರಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಬೆಳ್ಳುಳ್ಳಿಯಲ್ಲಿ ಆಲಿಸಿನ್ ಎಂಬ ಪದಾರ್ಥ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಹೆಚ್ಚಿನ ಪ್ರಮಾಣದ ಆಲಿಸಿನ್ ದೇಹವನ್ನು ತಲುಪಿದರೆ, ಲಿವರ್ ಸಮಸ್ಯೆ ಕಂಡು ಬರುತ್ತದೆ.  ಕ್ರಮೇಣ ಯಕೃತ್ತು ಕಾರ್ಯನಿರ್ವಹಿಸುವುದನ್ನೆ ನಿಲ್ಲಿಸಿಬಿಡಬಹುದು.   

2 /6

ಅಮೆರಿಕದ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಲೇಖನವೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಎದೆಯುರಿ, ಹೊಟ್ಟೆ ಉರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ, ವಾಂತಿಯಂಥಹ ಸಮಸ್ಯೆಗಳು ಕೂಡಾ ಕಂಡು ಬರಬಹುದು.   ಇದಲ್ಲದೆ, ಹಾರ್ವರ್ಡ್ ವೈದ್ಯಕೀಯ ಶಾಲೆಯ ವರದಿಯ ಪ್ರಕಾರ,  ಬೆಳ್ಳುಳ್ಳಿಯಲ್ಲಿರುವ  ಕೆಲ ಅಂಶಗಳಿಂದ GERD ಕಾಯಿಲೆಗೆ ಕಾರಣವಾಗಬಹುದು.

3 /6

ಹೆಚ್ಚು ಬೆಳ್ಳುಳ್ಳಿ ತಿನ್ನುವುದರಿಂದ ಚರ್ಮದ ತುರಿಕೆ  ಉಂಟಾಗಬಹುದು. ಬೆಳ್ಳುಳ್ಳಿಯಲ್ಲಿರುವ ಅಲಿನೇಸ್ ಅಂಶವು ಈ ಸಮಸ್ಯೆಗೆ ಕಾರಣವಾಗಿದೆ. ಈ ಕಾರಣಕ್ಕಾಗಿಯೇ ಬೆಳ್ಳುಳ್ಳಿ  ಸಿಪ್ಪೆ ತೆಗೆಯುವಾಗ ಅಥವಾ ಕತ್ತರಿಸುವಾಗ ಕೆಲವರು  ಗ್ಲೌಸ್ ಹಾಕುತ್ತಾರೆ. 

4 /6

 ರಕ್ತ ಹೆಪ್ಪುಗಟ್ಟುವಿಕೆ  ಸಮಸ್ಯೆ ಇರುವವರಿಗೆ ವಾರ್ಫಾರಿನ್, ಆಸ್ಪಿರಿನ್  ಔಷಧಿಗಳನ್ನು ನೀಡಲಾಗುತ್ತದೆ. ಅಂತಹ ಜನರು ಬೆಳ್ಳುಳ್ಳಿಯನ್ನು ಸೇವಿಸಬಾರದು.  ಏಕೆಂದರೆ ಬೆಳ್ಳುಳ್ಳಿ ನೈಸರ್ಗಿಕವಾಗಿ ರಕ್ತವನ್ನು ತೆಳುವಾಗಿಸುತ್ತದೆ. ಹಾಗಾಗಿ, ಬೆಳ್ಳುಳ್ಳಿ ಔಷಧ ಎರಡರ ಪರಿಣಾಮದಿಂದಾಗಿ ಅತಿಯಾದ ರಕ್ತಸ್ರಾವವಾಗುವ ಅಪಾಯವಿರುತ್ತದೆ.   

5 /6

 ಗರ್ಭಿಣಿಯರು ಅಥವಾ ಮಗುವಿಗೆ ಹಾಲುಣಿಸುವ ಮಹಿಳೆಯರು ಕೂಡ ಬೆಳ್ಳುಳ್ಳಿ ತಿನ್ನಬಾರದು.  ಇದರಿಂದಾಗಿ ಅವಧಿಗೆ ಮುನ್ನ ಮಗು ಜನಿಸುವ ಅಪಾಯವಿರುತ್ತದೆ. ಸ್ತನ್ಯಪಾನ ಮಾಡುವ ಮಹಿಳೆಯರು ಹೆಚ್ಚು ಬೆಳ್ಳುಳ್ಳಿ ತಿನ್ನಬಾರದು, ಇದು ಎದೆಹಾಲಿನ  ರುಚಿ ಬದಲಾಗಲು ಕಾರಣವಾಗುತ್ತದೆ.

6 /6

ವಯಸ್ಕರು ಪ್ರತಿದಿನ 4 ಗ್ರಾಂ ಅಂದರೆ 2 ಅಥವಾ 3 ಬೆಳ್ಳುಳ್ಳಿಯ ಎಸಳುಗಳನ್ನು ನಿತ್ಯ ಸೇವಿಸಬಹುದು. ಇದಕ್ಕಿಂತ ಹೆಚ್ಚು ತಿನ್ನುವುದು ಅನೇಕ ರೋಗಗಳಿಗೆ ಕಾರಣವಾಗಬಹುದು.