LPG Booking Offer: Paytm ಮೂಲಕ LPG ಬುಕ್ ಮಾಡಿ 700 ರೂ.ಕ್ಯಾಶ್ ಬ್ಯಾಕ್ ಪಡೆಯಲು ಕೇವಲ ಮೂರೇ ದಿನ ಬಾಕಿ ಉಳಿದಿದೆ

LPG Booking Offer: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಣದುಬ್ಬರಕ್ಕೆ ಶ್ರೀಸಾಮಾನ್ಯ ಕಂಗೆಟ್ಟು ಹೋಗಿದ್ದಾನೆ. ಈ ವರ್ಷ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 125ರೂ. ಏರಿಕೆಯಾಗಿದೆ. ದೆಹಲಿಯಲ್ಲಿ 14.2 ಕೆ.ಜಿ ಸಿಲಿಂಡರ್ ಈ ವರ್ಷಾರಂಭಕ್ಕೆ ರೂ.694 ರೂ.ಗಳಿಗೆ ಸಿಗುತ್ತಿದ್ದು, ಇಂದು ಅದೇ ಸಿಲಿಂಡರ್ ಬೆಲೆ ರೂ.819 ಆಗಿದೆ.

ನವದೆಹಲಿ:  LPG Booking Offer - ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಣದುಬ್ಬರಕ್ಕೆ ಶ್ರೀಸಾಮಾನ್ಯ ಕಂಗೆಟ್ಟು ಹೋಗಿದ್ದಾನೆ. ಈ ವರ್ಷ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 125ರೂ. ಏರಿಕೆಯಾಗಿದೆ. ದೆಹಲಿಯಲ್ಲಿ 14.2 ಕೆ.ಜಿ ಸಿಲಿಂಡರ್ ಈ ವರ್ಷಾರಂಭಕ್ಕೆ ರೂ.694 ರೂ.ಗಳಿಗೆ ಸಿಗುತ್ತಿದ್ದು, ಇಂದು ಅದೇ ಸಿಲಿಂಡರ್ ಬೆಲೆ ರೂ.819 ಆಗಿದೆ. ಏತನ್ಮದ್ಯೆ ಡಿಜಿಟಲ್ ಪೇಮೆಂಟ್ ಆಪ್ ಬೇಸ್ಡ್ ಕಂಪನಿಯಾಗಿರುವ Paytm ಒಂದು ವಿಶೇಷ ಕೊಡುಗೆಯೊಂದನ್ನು ನೀಡುತ್ತಿದೆ. ಈ ಆಫರ್ ಅಡಿ ಬಳಕೆದಾರರು ರೂ.819 ಬೆಲೆಯ LPG ಸಿಲಿಂಡರ್ ಅನ್ನು ಕೇವಲ ರೂ.119ಕ್ಕೆ ಪಡೆಯಬಹುದು. ಅಂದರೆ, ಈ ಆಫರ್ ಅಡಿ ನೀವು ಒಟ್ಟು 700 ರೂ ಉಳಿತಾಯ ಮಾಡಬಹುದು.

ಇದನ್ನೂ ಓದಿ-SBI, HDFC, ICICI ಖಾತೆದಾರರೇ ಎಚ್ಚರ! OTPಗೆ ಸಂಬಂಧಿಸಿದ ಈ ಮಾಹಿತಿ ತಪ್ಪದೇ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

1. ಏನಿದು Paytmನ ಆಫರ್: ಒಂದು ವೇಳೆ ನೀವೂ ಕೂಡ ಈ ಕೊಡುಗೆಯ ಲಾಭವನ್ನು ಪಡೆಯಲು ಬಯಸುತ್ತಿದ್ದರೆ, ಮೊದಲು ನಿಮ್ಮ ಬಳಿ Paytm ಆಪ್ ಇರಬೇಕು. Paytm ಆಪ್ ನಿಂದ ಒಂದು ವೇಳೆ ನೀವು ಮೊದಲ ಬಾರಿಗೆ ಸಿಲಿಂಡರ್ ಬುಕ್ ಮಾಡಿದರೆ, ಈ ಆಫರ್ ಅಡಿ ನೀವು 700 ಕ್ಯಾಶ್ ಬ್ಯಾಕ್ ಪಡೆಯಬಹುದು. ಒಂದೊಮ್ಮೆ ನೀವು ಆಪ್ ಮೂಲಕ ಹಣವನ್ನು ಪಾವತಿಸಿದರೆ, ಸ್ಕ್ರೀನ್ ಮೇಲೆ ನಿಮಗೊಂದು ಸ್ಕ್ರ್ಯಾಚ್ ಕಾರ್ಡ್ ಕಾಣಿಸಿಕೊಳ್ಳಲಿದೆ. ಈ ಸ್ಕ್ರ್ಯಾಚ್ ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡಿ ನೀವು ಕೊಡುಗೆಯನ್ನು ನೋಡಬಹುದು. ಒಂದು ವೇಳೆ ನೀವು ಸ್ಕ್ರ್ಯಾಚ್ ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡದೆ ಹೋದಲ್ಲಿ. ನಂತರ ನೀವು ಅದನ್ನು paytm ಆಪ್ ನ ಕ್ಯಾಶ್ ಬ್ಯಾಕ್ ಹಾಗೂ ಆಫರ್ಸ್ ಸೆಕ್ಷನ್ ಗೆ ಭೇಟಿ ನೀಡಿ ಪುನಃ ಸ್ಕ್ರ್ಯಾಚ್ ಮಾಡಬಹುದು.

2 /3

2. ಮಾರ್ಚ್ 31ರವರೆಗೆ ಮಾತ್ರ ಈ ಕೊಡುಗೆ: ಸಾಮಾನ್ಯವಾಗಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ಬಳಿಕ ನಿಮಗೆ 24 ಗಂಟೆಯೊಳಗೆ ಕ್ಯಾಶ್ ಬ್ಯಾಕ್ ಸ್ಕ್ರ್ಯಾಚ್ ಕಾರ್ಡ್ ಸಿಗುತ್ತದೆ. ಈ ಸ್ಕ್ರ್ಯಾಚ್ ಕಾರ್ಡ್ ಅನ್ನು 7 ದಿನಗಳ ಒಳಗೆ ಬಳಕೆ ಮಾಡಬೇಕು. ಇಲ್ಲಿ ಒಂದು ವೇಳೆ ನೀವು ಸ್ಕ್ರ್ಯಾಚ್ ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡಲು ಮರೆತರೆ, Cashback and Offers ಸೆಕ್ಷನ್ ಗೆ ಭೇಟಿ ನೀಡಿ ಅದನ್ನು ಪುನಃ ಬಳಕೆ ಮಾಡಬಹುದು. ಈ ಕೊಡುಗೆ ಮಾರ್ಚ್ 31,2021ರವರೆಗೆ ಮಾತ್ರ ಲಭ್ಯವಿರಲಿದೆ. ಅಂದರೆ, ಈ ಕೊಡುಗೆಯ ಲಾಭ ಪಡೆಯಲು ನಿಮ್ಮ ಬಳಿ ಕೇವಲ ಮೂರೇ ದಿನಗಳು ಬಾಕಿ ಉಳಿದಿವೆ.

3 /3

3. Pay ನಿಂದ LPG ಸಿಲಿಂಡರ್ ಬುಕ್ ಮಾಡುವುದು ಹೇಗೆ: - ಒಂದು ವೇಳೆ ನೀವೂ ಕೂಡ ಈ ಕೊಡುಗೆಯ ಲಾಭ ಪಡೆಯಲು ಬಯಸುತ್ತಿದ್ದರೆ, ನಿಮ್ಮ ಫೋನ್ ನಲ್ಲಿ Paytm App ಇರಬೇಕು. - ಬಳಿಕ ಮೊದಲು ನೀವು ನಿಮ್ಮ Paytm ಆಪ್ ತೆರೆಯಿರಿ. - ನಂತರ 'Recharge and Pay Bills' ಸೆಕ್ಷನ್ ಗೆ ಭೇಟಿ ನೀಡಿ. - ಅಲ್ಲಿ ನಿಮಗೆ 'Book a Cylinder'ಆಪ್ಶನ್ ಕಾಣಿಸಿಕೊಳ್ಳಲಿದೆ. - ಇಲ್ಲಿ ನೀವು ನಿಮ್ಮ LPG ಸಿಲಿಂಡರ್ ಪೂರೈಕದಾರ ಕಂಪನಿಯನ್ನು ಆಯ್ಕೆ ಮಾಡಿ. - ಇದರ ಬಳಿಕ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆ ಅಥವಾ LPG ID ನಮೂದಿಸಿ. - ಈಗ ನಿಮಗೆ ಪೇಮೆಂಟ್ ಮಾಡುವ ಆಪ್ಶನ್ ಕಾಣಿಸಿಕೊಳ್ಳಲಿದೆ. - ಹಣ ಪಾವತಿಸುವ ಮೊದಲು ಆಫರ್ ಗೆ ಭೇಟಿ ನೀಡಿ. ಅಲ್ಲಿ ನಿಮಗೆ - 'FIRSTLPG' ಪ್ರೊಮೊ ಕೋಡ್ ಕಾಣಿಸಿಕೊಳ್ಳಲಿದೆ ಅದನ್ನು ನಮೂದಿಸಿ ಹಣ ಪಾವತಿ ಮಾಡಿ.