Benefits of Ajwain : ರಾತ್ರಿ ಮಲಗುವ ಮುನ್ನ ತಿಂದರೆ ಒಮಕಾಳು ಆರೋಗ್ಯಕ್ಕಾಗಲಿದೆ ಪ್ರಯೋಜನ

ಇದು  ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಹೊಂದಿರುತ್ತದೆ. ದೇಹವನ್ನು ಅನೇಕ ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ.

ನವದೆಹಲಿ : ಒಮಕಾಳು ಒಂದು ಮಸಾಲೆಪದಾರ್ಥ. ಇದನ್ನು ಔಷಧವಾಗಿಯೂ ಬಳಸಲಾಗುತ್ತದೆ. ಇದರಲ್ಲಿ  ಸಣ್ಣ ಬೀಜಗಳಲ್ಲಿ ಆರೋಗ್ಯದ ನಿಧಿ ಅಡಗಿದೆ. ಇದನ್ನು ತಿಂಡಿಗಳಾದ ಬಿಸ್ಕತ್ತು, ಪೂರಿ, ಪರಾಠಗಳನ್ನು ತಯಾರಿಸುವಾಗ ಬಳಸಲಾಗುತ್ತದೆ.   ಹೊಟ್ಟೆನೋವಿನ ಸಂದರ್ಭದಲ್ಲಿ  ಅಜೀರ್ಣವಾದಾಗ, ಜನರು ಹೆಚ್ಚಾಗಿ ಬಿಸಿನೀರಿನೊಂದಿಗೆ ಸೇವಿಸುತ್ತಾರೆ. ಚಳಿಗಾಲದಲ್ಲಿ ಕೆಮ್ಮು, ನೆಗಡಿ, ಮೂಗು ಸೋರುವಿಕೆಯಂತಹ ಸಣ್ಣ ಸಮಸ್ಯೆಗಳನ್ನು ಸಹ ತೆಗೆದುಹಾಕುತ್ತದೆ. ಇದು ಹೆಪ್ಪುಗಟ್ಟಿದ ಕಫವನ್ನು ಹೊರಹಾಕುವಲ್ಲಿ ಪರಿಣಾಮಕಾರಿಯಾಗಿದೆ. ರಾತ್ರಿ ಮಲಗುವ ಮೊದಲು ಬೆಚ್ಚಗಿನ ನೀರಿನೊಂದಿಗೆ ಒಂದು ಚಮಚ ಒಮಕಾಳನ್ನು ಸೇವಿಸಿದರೆ, ಅದು ನಿಮ್ಮನ್ನು ಅನೇಕ ರೀತಿಯ ದೈಹಿಕ ಸಮಸ್ಯೆಗಳಿಂದ ರಕ್ಷಿಸುತ್ತದೆ.  
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಇದು  ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಹೊಂದಿರುತ್ತದೆ. ದೇಹವನ್ನು ಅನೇಕ ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ. ಬೇಸಿಗೆ ಕಾಲದಲ್ಲಿ ಇದನ್ನು ಮಿತವಾಗಿ ಸೇವಿಸಿ. ಚಳಿಗಾಲದಲ್ಲಿ ರಾತ್ರಿ ಮಲಗುವ ಮೊದಲು, ಅರ್ಧ ಅಥವಾ 1 ಚಮಚ ಒಮ ಕಾಳನ್ನು ತಿಂದು ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ಅನೇಕ ರೀತಿಯ ದೈಹಿಕ ಸಮಸ್ಯೆಗಳಿಂದ ರಕ್ಷಣೆ ನೀಡುತ್ತದೆ.   

2 /5

ಮಲಬದ್ಧತೆ ಸಮಸ್ಯೆ ಇದ್ದರೆ, ರಾತ್ರಿ ಮಲಗುವ ಮುನ್ನ ಬಿಸಿ ಹಾಲು ಅಥವಾ ಬಿಸಿನೀರು ಕುಡಿದರೆ ಹೆಚ್ಚು ಪ್ರಯೋಜನವಾಗುವುದಿಲ್ಲ. ಒಂದು ಲೋಟ ಬಿಸಿನೀರಿನೊಂದಿಗೆ ಓಮ ಕಾಳನ್ನು ತಿನ್ನಬೇಕು. ಬೆಳಿಗ್ಗೆ ಹೊಟ್ಟೆಯನ್ನು ಶುಚಿಯಾಗಿಸಲು ಇದು ಸಹಾಯ ಮಾಡುತ್ತದೆ. ಕೆಲವು ದಿನ ಹೀಗೆ ಮಾಡಿದರೆ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.  

3 /5

ರಾತ್ರಿ ಒಂದು ಲೋಟ ನೀರಿಗೆ ಒಂದು ಚಮಚ ಕೇರಂಬೀಜವನ್ನು ಹಾಕಿ ಚೆನ್ನಾಗಿ ಕುದಿಸಿ. ಅದು ಅರ್ಧದಷ್ಟು ಬಂದಾಗ, ಅದನ್ನು ಫಿಲ್ಟರ್ ಮಾಡಿ. ಮಲಗುವ ವೇಳೆಗೆ ಈ ನೀರನ್ನು ಕುಡಿಯಿರಿ. ಇದರಿಂದ ಅತಿಸಾರದ ಸಮಸ್ಯೆಯನ್ನು ನಿವಾರಿಸಬಹುದು.  

4 /5

ನಿದ್ರಾಹೀನತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ರಾತ್ರಿಯ ಊಟದ ನಂತರ, ಓಂ ಕಾಳನ್ನು ತಿಂದು ಬಿಸಿನೀರನ್ನು ಕುಡಿಯಿರಿ.  ಅಜ್ವೈನ್ ಯಾವುದೇ ಅಡ್ಡ ಪರಿಣಾಮ ಬೀರದ ಔಷಧವಾಗಿದೆ. ಇದನ್ನು ದಿನಕ್ಕೆ ಒಮ್ಮೆ ಮಾತ್ರ ಸೇವಿಸಿ, ಅದು ಕೂಡ ಅರ್ಧ ಅಥವಾ ಒಂದು ಚಮಚ.

5 /5

ಚಳಿಗಾಲ ಆರಂಭವಾದಂತೆ ಮೂಳೆಗಳ ಸಮಸ್ಯೆ ಹೆಚ್ಚಾದರೆ, ಕೀಲುಗಳಲ್ಲಿ ನೋವು ಇದ್ದರೆ ರಾತ್ರಿ ಆಹಾರ ಸೇವಿಸಿದ ಒಂದು ಗಂಟೆಯ ನಂತರ ಒಂದು ಚಮಚ ಕಾಳನ್ನು ಹೆಚ್ಚು ಜಗಿದು ತಿನ್ನಿ. ನಂತರ ಬಿಸಿ ನೀರು ಕುಡಿಯಿರಿ. ಹೀಗೆ ಮಾಡಿದರೆ ನೋವನ್ನು ಬಹಳ ಮಟ್ಟಿಗೆ ನಿವಾರಿಸಬಹುದು.