ಶೂ ಮತ್ತು ಚಪ್ಪಲಿಗಳಿಗೆ ಸಂಬಂಧಿಸಿದ 5 ವಾಸ್ತು ದೋಷಗಳ ಬಗ್ಗೆ ನಾವಿಲ್ಲಿ ತಿಳಿಸಲಿದ್ದೇವೆ.
ಬೆಂಗಳೂರು : ಅನೇಕ ಬಾರಿ ನಾವು ತಿಳಿಯದೆ ಕೆಲವೊಂದು ಕೆಲಸಗಳನ್ನು ಮಾಡಿ ಬಿಡುತ್ತೇವೆ.ಇದರಿಂದಾಗಿ ವಾಸ್ತು ದೋಷಗಳು ಮನೆಯನ್ನು ಪ್ರವೇಶಿಸುತ್ತವೆ.ಒಂದರ ಹಿಂದೆ ಒಂದರಂತೆ ಸಮಸ್ಯೆಗಳು ಬಾಧಿಸಲು ಶುರು ಮಾಡುತ್ತದೆ.ಶೂ ಮತ್ತು ಚಪ್ಪಲಿಗಳಿಗೆ ಸಂಬಂಧಿಸಿದ 5 ವಾಸ್ತು ದೋಷಗಳ ಬಗ್ಗೆ ನಾವಿಲ್ಲಿ ತಿಳಿಸಲಿದ್ದೇವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಪಾದರಕ್ಷೆ,ಚಪ್ಪಲಿ ಇಡಲು ಕೆಲವು ನಿಯಮಗಳನ್ನು ಹೇಳಲಾಗಿದೆ.ಈ ನಿಯಮಗಳನ್ನು ಪಾಲಿಸಿದರೆ ಜೀವನದಲ್ಲಿ ಎದುರಾಗಬಹುದಾದ ಅನೇಕ ಸಮಸ್ಯೆಗಳು ದೂರವಾಗುವುದು.
ಶೂ ಮತ್ತು ಚಪ್ಪಲಿಗಳನ್ನು ಎಂದಿಗೂ ತಲೆಕೆಳಗಾಗಿ ಇಡಬಾರದು.ಚಪ್ಪಲಿಗಳನ್ನು ಮನೆಯ ಮುಂದೆ ತಲೆ ಕೆಳಗಾಗಿ ಬಿಡುವುದರಿಂದ ಮನೆಯೊಳಗೆ ನೆಗಟೀವ್ ಎನರ್ಜಿ ನುಗ್ಗಿ ಮಾನಸಿಕ ನೆಮ್ಮದಿ ಹಾಳಾಗಿ ರೋಗಗಳ ಸುಳಿಗೆ ಸಿಲುಕಿಸುತ್ತದೆ.
ಅಡುಗೆಮನೆ ತಾಯಿ ಅನ್ನಪೂರ್ಣೆಯ ವಾಸಸ್ಥಾನ. ಅಲ್ಲಿ ಪಾದರಕ್ಷೆ ಮತ್ತು ಚಪ್ಪಲಿ ಧರಿಸಿಕೊಂಡು ಹೋಗಬಾರದು.ಇದು ತಾಯಿ ಅನ್ನಪೂರ್ಣೆಗೆ ತೋರುವ ಅಗೌರವ.
ಮಲಗುವ ಕೋಣೆಯಲ್ಲಿ ಶೂ ಮತ್ತು ಚಪ್ಪಲಿಗಳನ್ನು ಇಡಬೇಡಿ. ಇದು ಪತಿ-ಪತ್ನಿಯರ ನಡುವಿನ ಸಂಬಂಧ ಹಳಸಲು ಕಾರಣವಾಗುತ್ತದೆ.
ಬೂಟುಗಳು ಮತ್ತು ಚಪ್ಪಲಿಗಳನ್ನು ಎಂದಿಗೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಬಿಡಬಾರದು.ಈ ಎರಡೂ ದಿಕ್ಕು ಬಹಳ ಮಂಗಳಕರ.ಈ ದಿಕ್ಕುಗಳಲ್ಲಿ ಬೂಟುಗಳು ಮತ್ತು ಚಪ್ಪಲಿಗಳನ್ನು ಬಿಟ್ಟರೆ ಲಕ್ಷ್ಮೀದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
ಮನೆ ಪ್ರವೇಶಿಸುವಾಗ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಶೂ ಮತ್ತು ಚಪ್ಪಲಿಗಳನ್ನು ಬಿಟ್ಟರೆ ಉತ್ತಮ.ಇವೆರಡನ್ನೂ ಯಮನ ದಿಕ್ಕುಗಳೆಂದು ಕರೆಯಲಾಗುತ್ತದೆ.ಇಲ್ಲಿ ಚಪ್ಪಲಿ ಬಿಟ್ಟರೆ ಯಾವ ಸಮಸ್ಯೆಯೂ ಇಲ್ಲ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.