ಈ ತಳಿಯ ನಾಯಿಗಳನ್ನು ಸಾಕಿದ್ರೆ ನಿಮ್ಮ ಮನೆಗೆ Z+ ಸೆಕ್ಯೂರಿಟಿ ಇದ್ದಂತೆ..! ಮಕ್ಕಳಿಗೂ ರಕ್ಷಣೆ ನೀಡುತ್ತವೆ..

Dog breeds for home : ಇತ್ತೀಚಿಗೆ ಜನರು ತಮ್ಮ ಹಾಗು ತಮ್ಮ ಕುಟುಂಬದ ರಕ್ಷಣೆಗಾಗಿ ಹಲವು ತಳಿಯ ನಾಯಿಗಳನ್ನು ಹೆಚ್ಚಿನ ದುಡ್ಡು ಕೊಟ್ಟು ಖರೀದಿಸಿ ಮನೆಗೆ ತರುತ್ತಿದ್ದಾರೆ.. ನೀವು ನಾಯಿಗಳನ್ನು ಸಾಕಲು ಬಯಸಿದರೆ, ರಕ್ಷಣೆಗಾಗಿ ಕೆಲವು ಪ್ರಸಿದ್ಧ ನಾಯಿ ತಳಿಗಳ ಹೆಸರುಗಳು ಇಲ್ಲಿವೆ.. 

1 /11

ಮನುಷ್ಯರು ಮತ್ತು ನಾಯಿಗಳ ನಡುವಿನ ಪ್ರೀತಿಯ ಬಾಂಧವ್ಯ ಸಾವಿರಾರು ವರ್ಷಗಳಿಂದಲೂ ಇದೆ. ನಾಯಿಗಳನ್ನು ಮನುಷ್ಯನ ಅತ್ಯುತ್ತಮ ಸ್ನೇಹಿತ ಎನ್ನಲಾಗುತ್ತದೆ. ನಾವು ಸಾಕುವ ನಾಯಿಗಳು ನಿಷ್ಠೆ, ವಾತ್ಸಲ್ಯ ಮತ್ತು ನಮ್ಮ ವಾಸಸ್ಥಾವನ್ನು ರಕ್ಷಿಸುತ್ತದೆ..   

2 /11

ನಾಯಿಗಳ ನಿಷ್ಠೆ ಮತ್ತು ಬುದ್ಧಿವಂತಿಕೆಯನ್ನು ತೋರುವ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವುದನ್ನು ನಾವು ನೋಡಿದ್ದೇವೆ. ಕಳ್ಳರನ್ನು ಓಡಿಸುವ ನಾಯಿಗಳು, ಮನೆಯೊಳಗೆ ನುಗ್ಗಲು ಯತ್ನಿಸುವ ಹಾವುಗಳನ್ನು ಕಚ್ಚುವುದು, ಹಾವನ್ನು ಕೊಂದು ಪ್ರಾಣ ಬಿಡುವುದನ್ನು ಕೇಳಿದ್ದೇವೆ.  

3 /11

ಹಾಗಾಗಿ ನಿಮ್ಮ ಮನೆ ಅಥವಾ ಇತರ ಯಾವುದೇ ಆಸ್ತಿಯನ್ನು ರಕ್ಷಿಸಲು ನೀವು ನಾಯಿಗಳನ್ನು ಸಾಕಲು ಬಯಸಿದರೆ, ರಕ್ಷಣೆಗಾಗಿ ಕೆಲವು ಪ್ರಸಿದ್ಧ ನಾಯಿ ತಳಿಗಳಿವೆ. ಜರ್ಮನ್ ಶೆಫರ್ಡ್‌ನಿಂದ ಬಾಕ್ಸರ್‌ವರೆಗೆ ಈ ತಳಿಯ ಶ್ವಾನಗಳನ್ನು ನೀವು ಖರೀದಿಸಬಹುದು.   

4 /11

ಜರ್ಮನ್ ಶೆಫರ್ಡ್ ನಾಯಿಗಳು ತಮ್ಮ ನಿಷ್ಠೆ, ತಮ್ಮ ಮಾಲೀಕರ ಸುರಕ್ಷತೆ ಮತ್ತು ಬುದ್ಧಿವಂತಿಕೆಗೆ ಹೆಸರುವಾಸಿಯಾಗಿವೆ. ಕಾವಲು ನಾಯಿಗಳಾಗಿದ್ದರೂ, ಮಕ್ಕಳೊಂದಿಗೆ ಚೆನ್ನಾಗಿರುತ್ತಾರೆ.  

5 /11

ಡಾಬರ್‌ಮ್ಯಾನ್ ಎಂದು ಕರೆಯಲ್ಪಡುವ ಈ ತಳಿಯು ಶ್ವಾನಗಳು ತುಂಬಾ ಶಕ್ತಿಯುತ. ತಮ್ಮ ಮಾಲೀಕರಿಗೆ ಬಹಳ ನಿಷ್ಠವಾಗಿರುತ್ತವೆ. ಈ ತಳಿಯ ನಾಯಿಯನ್ನು ಅತ್ಯುತ್ತಮ ಕಾವಲು ನಾಯಿ ಎಂದು ಹೇಳಲಾಗುತ್ತದೆ.   

6 /11

ಬಾಕ್ಸರ್‌ಗಳು ನಿಷ್ಠಾವಂತ ಮತ್ತು ರಕ್ಷಣಾತ್ಮಕ ಶ್ವಾನ ತಳಿ. ಈ ತಳಿಯ ನಾಯಿಗಳು ಮಕ್ಕಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ. ತಮಾಷೆಯ ಸ್ವಭಾವವನ್ನು ಹೊಂದಿರುತ್ತವೆ. ಇವು ಕುಟುಂಬಗಳಿಗೆ ಸೂಕ್ತವಾದ ನಾಯಿಗಳು.  

7 /11

ರೊಟ್ವೀಲರ್ಗಳು ಆತ್ಮವಿಶ್ವಾಸ ಮತ್ತು ಭಯವಿಲ್ಲದ ನಾಯಿಗಳು. ಈ ರೀತಿಯ ನಾಯಿಗಳು ತಮ್ಮ ಮಾಲೀಕರನ್ನು ಬಹಳವಾಗಿ ರಕ್ಷಿಸುತ್ತವೆ, ಉತ್ತಮ ಒಡನಾಡಿಯಾಗಿ.  

8 /11

ಗ್ರೇಟ್ ಡೇನ್ ನೋಡಲು ದೊಡ್ಡದಾದರೂ, ತುಂಬಾ ಸೌಮ್ಯವಾಗಿರುತ್ತವೆ. ಸ್ವಭಾವತಃ ರಕ್ಷಣಾತ್ಮಕ ಬುದ್ದಿಯನ್ನು ಹೊಂದಿರುವ ಈ ತಳಿಯ ಶ್ವಾನಗಳು, ಮಕ್ಕಳೊಂದಿಗೆ ಉತ್ತಮವಾಗಿರುತ್ತವೆ..  

9 /11

ಬೆಲ್ಜಿಯನ್ ಮಾಲಿನೋಯಿಸ್ ತಳಿಯ ನಾಯಿ ತುಂಬಾ ಆಕ್ಟಿವ್‌. ಯಾವಾಗಲೂ ಜಾಗರೂಕವಾಗಿರುತ್ತವೆ. ಮಾಲೀಕರ ಕುಟುಂಬವನ್ನು ರಕ್ಷಿಸುವಲ್ಲಿ ಸದಾ ಮುಂದು.   

10 /11

ಬುಲ್ಮಾಸ್ಟಿಫ್ ತಳಿಯ ನಾಯಿಗಳು ತಮ್ಮ ಮಾಲೀಕರನ್ನು ಬಹಳ ಜಾಗೃತೆ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತವೆ. ಕಾವಲು ನಾಯಿಗಳಾಗಿದ್ದರೂ, ಶಾಂತ ಮತ್ತು ಸೌಮ್ಯ ಸ್ವಭಾವಕ್ಕೆ ಹೆಸರುವಾಸಿ.  

11 /11

ಅಕಿತಾ... ಇದು ಜಪಾನಿನ ನಾಯಿ ತಳಿ. ರಕ್ಷಣೆ, ಧೈರ್ಯ ಮತ್ತು ನಿಷ್ಠೆಗೆ ಹೆಸರುವಾಸಿಯಾಗಿವೆ. ತಮ್ಮನ್ನು ಪೋಷಿಸುವ ಕುಟುಂಬಕ್ಕೆ ಸರಾಗವಾಗಿ ಹೊಂದಿಕೊಳ್ಳುತ್ತವೆ.