Happy New Year: 2023 ಹೊಸ ವರ್ಷಾಚರಣೆಯ ಬೆಸ್ಟ್ ಫೋಟೋಗಳು ವೈರಲ್: ನಿಮ್ಮ ಚಿತ್ರಗಳೂ ಇವೆಯೇ ಪರೀಕ್ಷಿಸಿ?

Happy New Year 2023 Photos: ಹೊಸ ವರ್ಷ 2023 ಪ್ರಾರಂಭವಾಗಿದೆ. ಜನವರಿ 1, ಮಧ್ಯರಾತ್ರಿ 12 ಗಂಟೆಗೆ ಪ್ರಪಂಚದಾದ್ಯಂತ ಜನರು ಹೊಸ ವರ್ಷವನ್ನು ಸಂಭ್ರಮದಿಂದ ಆಚರಣೆ ಮಾಡಿ ಬರಮಾಡಿಕೊಂಡಿದ್ದಾರೆ. ಚೀನಾ, ಅಮೆರಿಕದಿಂದ ಹಿಡಿದು ಪ್ರಪಂಚದಾದ್ಯಂತ ಜನರು ಅದ್ಧೂರಿಯಾಗಿ 2023 ರ ಹೊಸ ವರ್ಷವನ್ನು ಆಚರಿಸಿದ್ದಾರೆ. ರಾತ್ರಿ 12 ಗಂಟೆಯ ವೇಳೆಗೆ ಪಟಾಕಿ ಸಿಡಿಸುವ ಮೂಲಕ ಆಕಾಶದಲ್ಲಿ ದೀಪಾಲಂಕಾರ ಮಾಡಿ ರಮಣೀಯ ನೋಟದೊಂದು ಹೊಸ ವರ್ಷವನ್ನು ಸ್ವಾಗತಿಸಲಾಗಿದೆ. ಜನರು 2023 ರ ಹೊಸ ವರ್ಷದ ಶುಭಾಶಯಗಳನ್ನು ಪರಸ್ಪರ ಹಂಚಿಕೊಳ್ಳುವುದು ಮತ್ತು ಅದರ ಸಂತೋಷದಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿತ್ತು. ಹೊಸ ವರ್ಷ 2023 ರ ಆರಂಭದ ಸಂದರ್ಭದಲ್ಲಿ, ಪ್ರಪಂಚದಾದ್ಯಂತದ ಅನೇಕ ನಗರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಪಂಚದಾದ್ಯಂತ ಬಂದ ಹೊಸ ವರ್ಷ ಆಚರಣೆಯ ಚಿತ್ರಗಳನ್ನು ನೋಡೋಣ.

1 /6

ಹೊಸ ವರ್ಷ 2023 ಪ್ರಾರಂಭವಾದ ತಕ್ಷಣ, ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿ ಪಟಾಕಿಗಳನ್ನು ಬಾನೆತ್ತರದಲ್ಲಿ ಸಿಡಿಸಲಾಯಿತು. ಈ ಪಟಾಕಿಯ ದೃಶ್ಯವು ತುಂಬಾ ಸುಂದರವಾಗಿತ್ತು.

2 /6

2023 ರ ಹೊಸ ವರ್ಷವನ್ನು ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. 2023ರ ಹೊಸ ವರ್ಷದ ಸಂದರ್ಭದಲ್ಲಿ ಪಟಾಕಿ ಸಿಡಿಸಲಾಯಿತು. ಇಲ್ಲಿ ಕಟ್ಟಡಗಳನ್ನು ದೀಪಗಳಿಂದ ಅಲಂಕರಿಸಲಾಗಿತ್ತು.

3 /6

ಆಸ್ಟ್ರೇಲಿಯಾದ ಸಿಡ್ನಿ ನಗರದ ಒಪೆರಾ ಹೌಸ್ ಬಳಿ 2023 ರ ಹೊಸ ವರ್ಷವನ್ನು ಜನರು ಭರ್ಜರಿಯಾಗಿ ವೆಲ್ ಕಂ ಮಾಡಿದ್ದಾರೆ. ಇಲ್ಲಿ ಜನರು ಪಟಾಕಿಗಳ ಚಿತ್ರಗಳನ್ನು ತೆಗೆದುಕೊಳ್ಳುತ್ತಿರುವುದು ಕಂಡುಬಂದಿತು.

4 /6

ಹೊಸ ವರ್ಷ 2023 ಅನ್ನು ಯುರೋಪಿಯನ್ ದೇಶವಾದ ಫ್ರಾನ್ಸ್‌ನಲ್ಲಿಯೂ ಹುರುಪಿನಿಂದ ಆಚರಿಸಲಾಯಿತು. 2023 ರ ಹೊಸ ವರ್ಷದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪ್ಯಾರಿಸ್‌ನಲ್ಲಿ ಜಮಾಯಿಸಿದರು ಮತ್ತು ಪಾರ್ಟಿ ಮಾಡಿದರು. ಇಲ್ಲಿನ ಪಾರ್ಟಿಯಲ್ಲಿ ಜನರು ಸಂಗೀತಕ್ಕೆ ತಕ್ಕಂತೆ ಕುಣಿಯುತ್ತಿರುವುದು ಕಂಡು ಬಂತು.

5 /6

ಯುಎಸ್ಎಯ ನ್ಯೂಯಾರ್ಕ್‌ನಲ್ಲಿರುವ ಟೈಮ್ ಸ್ಕ್ವೇರ್‌ನಲ್ಲಿ ಜನರು 2023 ರ ಹೊಸ ವರ್ಷವನ್ನು ವಿಜೃಂಭಣೆಯಿಂದ ಆಚರಿಸಿದರು. ಹೊಸ ವರ್ಷ 2023 ರ ಸಂದರ್ಭದಲ್ಲಿ ಜನರು ಟೈಮ್ ಸ್ಕ್ವೇರ್‌ನಲ್ಲಿ ಜಮಾಯಿಸಿ ಸಂಭ್ರಮಿಸಿದರು.

6 /6

ಕೋವಿಡ್ ಬಿಕ್ಕಟ್ಟಿನ ನಡುವೆಯೂ ಚೀನಾದಲ್ಲಿ ಹೊಸ ವರ್ಷ 2023 ರ ಸಂಭ್ರಮವನ್ನು ಜೋರಾಗಿ ಆಚರಿಸಲಾಯಿತು. ಪಾರ್ಟಿಯ ಸಮಯದಲ್ಲಿ ಜನರು ತುಂಬಾ ಸಂತೋಷದಿಂದ ಕಾಣುತ್ತಿದ್ದರು ಮತ್ತು ಪರಸ್ಪರ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂದಿತು. ಹೊಸ ವರ್ಷ 2023 ಆರಂಭವಾಗುತ್ತಿದ್ದಂತೆ, ಆಕಾಶದಲ್ಲಿ ಹಾರುವ ಬಲೂನ್‌ಗಳನ್ನು ಬಿಟ್ಟು ಸಂತಸ ಸೂಚಿಸಿದರು.