Aquarium: ಮನೆಯಲ್ಲಿ ಅಕ್ವೇರಿಯಂ ಇಡುವಾಗ ಈ ನಿಯಮಗಳನ್ನು ಅನುಸರಿಸಿ.... ಇಲ್ದಿದ್ರೆ!

Fengshui Tips: ಮನೆಯಲ್ಲಿನ ಸುಖ-ಸಮೃದ್ಧಿಗಾಗಿ ಜನರು ವಾಸ್ತು ಶಾಸ್ತ್ರದ ನೆರವನ್ನು ಪಡೆಯುತ್ತಾರೆ. ಆದರೆ, ವಾಸ್ತುವಿನಂತೆಯೇ ಫೆಂಗ್ ಶೂಯಿ ಕೂಡ ತುಂಬಾ ಪರಿಣಾಮಕಾರಿಯಾಗಿದೆ. 

Fengshui Tips: ಮನೆಯಲ್ಲಿನ ಸುಖ-ಸಮೃದ್ಧಿಗಾಗಿ ಜನರು ವಾಸ್ತು ಶಾಸ್ತ್ರದ ನೆರವನ್ನು ಪಡೆಯುತ್ತಾರೆ. ಆದರೆ, ವಾಸ್ತುವಿನಂತೆಯೇ ಫೆಂಗ್ ಶೂಯಿ ಕೂಡ ತುಂಬಾ ಪರಿಣಾಮಕಾರಿಯಾಗಿದೆ. ಫೆಂಗ್ ಶೂಯಿ ಪ್ರಕಾರ ಮನೆಯಲ್ಲಿ ವಸ್ತುಗಳನ್ನು ಇಡುವುದರಿಂದ ಮನೆಯಲ್ಲಿ ಬರುವ ಅನಾಹುತಗಳು ದೂರವಾಗುತ್ತವೆ. ಫೆಂಗ್ ಶೂಯಿಯಲ್ಲಿ ಮೀನಿನ ಅಕ್ವೇರಿಯಂಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದನ್ನು ಸರಿಯಾದ ನಿಯಮಗಳೊಂದಿಗೆ ಇರಿಸಿದರೆ, ಅದು ಮನೆಯಲ್ಲಿ ಸುಖ ಮತ್ತು ಸಮೃದ್ಧಿಯನ್ನು ತರುತ್ತದೆ ಹಾಗೂ ಮನೆಯಲ್ಲಿ ಹಣಕಾಸಿನ ಮುಗ್ಗಟ್ಟನ್ನು ತೊಡೆದುಹಾಕುತ್ತದೆ.

 

ಇದನ್ನೂ ಓದಿ-Vastu Tips: ನಿಮ್ಮ ಮನೆಯಲ್ಲಿಯೂ ಇಂತಹ ಶೋಪೀಸ್‌ಗಳಿದ್ದರೆ ತಕ್ಷಣ ಹೊರಹಾಕಿ

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಮನೆಯಲ್ಲಿ ಮೀನಿನ ಅಕ್ವೇರಿಯಂ ಇದ್ದರೆ ಅಥವಾ ನೀವು ಅದನ್ನು ಖರೀದಿಸಲು ಹೋದರೆ, ಅದನ್ನು ಇರಿಸುವ ದಿಕ್ಕಿನ ಜ್ಞಾನವನ್ನು ಹೊಂದಿರುವುದು ತುಂಬಾ ಮುಖ್ಯ. ಮನೆಯ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಮೀನಿನ ಅಕ್ವೇರಿಯಂ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಧನಾತ್ಮಕ ಶಕ್ತಿಯು ಮನೆಯನ್ನು ಪ್ರವೇಶಿಸುತ್ತದೆ.

2 /5

2. ಮೀನಿನ ಅಕ್ವೇರಿಯಂನಲ್ಲಿರುವ ನೀರನ್ನು ಕಾಲಕಾಲಕ್ಕೆ ಬದಲಾಯಿಸಬೇಕು. ಒಮ್ಮೆ ಹಾಕಿದ ನೀರನ್ನು ದೀರ್ಘಕಾಲದವರೆಗೆ ಬಳಸಬಾರದು, ಏಕೆಂದರೆ ಹಾಗೆ ಮಾಡದಿರುವುದರಿಂದ ನೀರಿನಲ್ಲಿ ಇರುವ ನಕಾರಾತ್ಮಕ ಶಕ್ತಿ ಮನೆಯಿಂದ ಹೊರಗೆ ಹೋಗುವುದಿಲ್ಲ.

3 /5

3. ನೀವು ಮನೆಯಲ್ಲಿ ಮೀನಿನ ಅಕ್ವೇರಿಯಂ ಅನ್ನು ಇಟ್ಟುಕೊಂಡಿದ್ದರೆ, ನಿಸ್ಸಂಶಯವಾಗಿ ಮೀನುಗಳು ಸಾಯುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಸತ್ತ ಮೀನುಗಳನ್ನು ತಕ್ಷಣವೇ ತೆಗೆದುಹಾಕಬೇಕು. ಸತ್ತ ಮೀನುಗಳನ್ನು ಅಕ್ವೇರಿಯಂನಲ್ಲಿ ದೀರ್ಘಕಾಲ ಇಡುವುದು ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಇದಲ್ಲದೆ ಸತ್ತ ಮಾನುಗಳ ಬಣ್ಣದ ಮೀನುಗಳನ್ನು ಅಕ್ವೇರಿಯಂನಲ್ಲಿ ಹಾಕಬೇಕು. ಫೆಂಗ್ ಶೂಯಿಯಲ್ಲಿ ಬಣ್ಣಗಳು ಮತ್ತು ಸಂಖ್ಯೆಗಳ ಸಂಯೋಜನೆಯನ್ನು ಹೊಂದಿರುವುದು ತುಂಬಾ ಮುಖ್ಯ ಎನ್ನಲಾಗಿದೆ.

4 /5

4. ಮನೆಯಲ್ಲಿ ಇರಿಸಲಾಗಿರುವ ಮೀನಿನ ಅಕ್ವೇರಿಯಂನಲ್ಲಿ ಎಷ್ಟು ಮೀನುಗಳನ್ನು ಇಡಲಾಗಿದೆ ಎಂಬುದನ್ನು ಸಹ ಗಮನಿಸಬೇಕು. ಫೆಂಗ್ ಶೂಯಿಯಲ್ಲಿ ಮೀನಿನ ಸಂಖ್ಯೆ ಮತ್ತು ಬಣ್ಣಕ್ಕೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಕ್ವೇರಿಯಂನಲ್ಲಿ ಕನಿಷ್ಠ 9 ಮೀನುಗಳು ಇರಬೇಕು. ಇವುಗಳಲ್ಲಿ ಎಂಟು ಕೆಂಪು ಬಣ್ಣದ್ದಾಗಿರಬೇಕು ಮತ್ತು ಒಂದು ಗೋಲ್ಡನ್ ಅಥವಾ ಕಪ್ಪು ಬಣ್ಣದ್ದಾಗಿರಬೇಕು. ಫೆಂಗ್ ಶೂಯಿಯಲ್ಲಿ ಕಪ್ಪು ಬಣ್ಣದ ಮೀನುಗಳನ್ನು ರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

5 /5

5. ಅನೇಕ ಜನರು ಮೀನಿನ ಅಕ್ವೇರಿಯಂ ಅನ್ನು ಇಡಲು ತುಂಬಾ ಇಷ್ಟಪಡುತ್ತಾರೆ. ಆದರೆ, ಮನೆಯಲ್ಲಿ ಜಾಗವಿಲ್ಲದೇ ಇದ್ದಾಗ ಸಿಕ್ಕ ಜಾಗದಲ್ಲಿ ಅದನ್ನು ಇಟ್ಟುಕೊಳ್ಳುತ್ತಾನೆ. ಮೀನಿನ ಅಕ್ವೇರಿಯಂ ಅನ್ನು ಎಂದಿಗೂ ಅಡುಗೆಮನೆಯಲ್ಲಿ ಇಡಬಾರದು. ಅಲ್ಲಿ ಅಗ್ನಿಯ ಅಂಶ ನೆಲೆಸಿರುತ್ತದೆ. ಅಕ್ವೇರಿಯಂ ಅನ್ನು ಅಡುಗೆಮನೆಯಲ್ಲಿ ಇಡುವುದರಿಂದ ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗುತ್ತದೆ.