New Year 2024 : ಹೊಸ ವರ್ಷಾಚರಣೆಗೆ ಪ್ಲಾನ್‌ ಮಾಡ್ತೀದಿರಾ..? ಕಡಿಮೆ ಬಜೆಟ್‌ನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ

New year 2024 plans : ಹೊಸ ವರ್ಷವನ್ನು ಪ್ರಪಂಚದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನವನ್ನು ವಿಶೇಷವಾಗಿಸಲು ಜನರು ಅನೇಕ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಕೆಲವರು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮನೆಯಲ್ಲಿ ಆಚರಿಸಿದರೆ, ಕೆಲವರು ಟ್ರಿಪ್‌ ಪ್ಲಾನ್‌ ಮಾಡುತ್ತಾರೆ.

2024 New year plans : 2024 ವರ್ಷವನ್ನು ಸ್ವಾಗತಿಸಲು ಕೇವಲ ಕೆಲವೇ ದಿನಗಳಷ್ಟೇ ಬಾಕಿ ಇವೆ. ಹೀಗಿರುವಾಗ ಹೊಸ ವರ್ಷವನ್ನು ಆಚರಿಸಲು ನೀವು ದೂರದ ಪ್ರಯಾಣದ ಬಗ್ಗೆ ಯೋಜಿಸುತ್ತಿದ್ದರೆ, ನಾವು ನಿಮಗಾಗಿ ಕೆಲವು ಅತ್ಯುತ್ತಮ ಸ್ಥಳಗಳ ಬಗ್ಗೆ ತಿಳಿಸುತ್ತವೆ. ಅಲ್ಲಿ ನೀವು ಕಡಿಮೆ ಹಣದಲ್ಲಿಯೂ ಸಹ ಸಾಕಷ್ಟು ಎಂಜಾಯ್‌ ಮಾಡಬಹುದು.

1 /5

ಮನಾಲಿ, ಹಿಮಾಚಲ ಪ್ರದೇಶ: ಮನಾಲಿಯು ಹಿಮಾಲಯದ ಮಡಿಲಲ್ಲಿ ನೆಲೆಸಿರುವ ಸುಂದರವಾದ ಗಿರಿಧಾಮ. ನಿಮ್ಮ ಮನಸ್ಸಿಗೆ ಈ ಸ್ಥಳ ಪ್ರಶಾಂತವನ್ನು ನೀಡುತ್ತದೆ. ಹೊಸ ವರ್ಷದ ಮುನ್ನಾದಿನದಂದು, ಮನಾಲಿಯು ವರ್ಣರಂಜಿತ ದೀಪಗಳು, ಪಾರ್ಟಿಗಳು ಮತ್ತು ಹಬ್ಬದ ವಾತಾವರಣದೊಂದಿಗೆ ಸಖತ್‌ ಎಂಜಾಯ್‌ ಮಾಡಬಹುದು.  

2 /5

ನೈನಿತಾಲ್, ಉತ್ತರಾಖಂಡ: ನೈನಿತಾಲ್ ಸುಂದರವಾದ ಸರೋವರಗಳು, ಹಚ್ಚ ಹಸಿರಿನ ಮತ್ತು ಅದ್ಭುತ ನೋಟಗಳಿಗೆ ಹೆಸರುವಾಸಿಯಾದ ಗಿರಿಧಾಮ. ಇದೇ ಕಾರಣಕ್ಕೆ ನೈನಿತಾಲ್ ಅನ್ನು 'ಭಾರತದ ಸರೋವರ ಜಿಲ್ಲೆ' ಎಂದೂ ಕರೆಯುತ್ತಾರೆ. ಇಲ್ಲಿ ಹೊಸ ವರ್ಷದ ದಿನದಂದು ನೈನಿ ಸರೋವರದಲ್ಲಿ ದೋಣಿ ವಿಹಾರ, ಭವ್ಯ ಭೋಜನ ಮತ್ತು ಪಟಾಕಿ ಪ್ರದರ್ಶನ ನೋಡಬಹುದು.  

3 /5

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ, ಉತ್ತರಾಖಂಡ: ಹೊಸ ವರ್ಷದ ಮುನ್ನಾದಿನದಂದು ವಿಶಿಷ್ಟವಾದ ಮತ್ತು ರೋಮಾಂಚಕಾರಿ ಅನುಭವಕ್ಕಾಗಿ, ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನವಾದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ. ಪ್ರಕೃತಿಯ ಮಡಿಲಿನಲ್ಲಿ, ಜಂಗಲ್ ಸಫಾರಿ ಮಾಡುತ್ತ ಹೊಸ ವರ್ಷ ಸ್ವಾಗತಿಸಿ.   

4 /5

ರಿಷಿಕೇಶ, ಉತ್ತರಾಖಂಡ: ಹೊಸ ವರ್ಷದ ಮೊದಲ ದಿನವನ್ನು ಆಧ್ಯಾತ್ಮಿಕವಾಗಿ ಸ್ವಾಗತಿಸಲು ಋಷಿಕೇಶವು ಉತ್ತಮ ಸ್ಥಳವಾಗಿದೆ. ಇಲ್ಲಿ ಯೋಗ ಧ್ಯಾನ ಮತ್ತು ಸ್ಪಾ ಚಿಕಿತ್ಸೆಗಳೊಂದಿಗೆ, ಹೊಸ ದಿನ ಪ್ರಾರಂಭಿಸಿ.  

5 /5

ಕಸೋಲ್, ಹಿಮಾಚಲ ಪ್ರದೇಶ: ಕಸೋಲ್ ಹಿಮಾಚಲ ಪ್ರದೇಶದ ಸುಂದರ ಗಿರಿಧಾಮ. ಇಲ್ಲಿ ಹೊಸ ವರ್ಷದ ದಿನದಂದು ಅನೇಕ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಕಡಿಮೆ ಬಜೆಟ್‌ನಲ್ಲಿಯೂ ನೀವು ಇಲ್ಲಿ ಉತ್ತಮ ಸಮಯವನ್ನು ಕಳೆಯಬಹುದು.