ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಅಗ್ಗದ ಟ್ಯಾಬ್ ಗಳಿವು

ಟ್ಯಾಬ್ಲೆಟ್‌ನ ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಿಂತ ದೊಡ್ಡದಾಗಿರುತ್ತದೆ. ಅಲ್ಲದೆ, ಅವು ಲ್ಯಾಪ್‌ಟಾಪ್‌ಗಳಿಗಿಂತ ಹೆಚ್ಚು ಪೋರ್ಟಬಲ್ ಆಗಿರುತ್ತವೆ. ಇದಲ್ಲದೆ, ಅವುಗಳು ಜೇಬಿಗೂ ಹೊರೆಯಾಗುವುದಿಲ್ಲ. 

ನವದೆಹಲಿ : ಕರೋನಾದಿಂದಾಗಿ ದೇಶದ ಎಲ್ಲಾ ಶಾಲೆಗಳು ಮುಚ್ಚಲ್ಪಟ್ಟಿವೆ. ಎಲ್ಲಾ ಕಡೆ ಆನ್‌ಲೈನ್ ತರಗತಿಗಳು ನಡೆಯುತ್ತಿವೆ.  ಪೋಷಕರು ಮತ್ತು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳನ್ನು ಸುಲಭಗೊಳಿಸುವ ಆಯ್ಕೆಗಳನ್ನು ಹುಡುಕುತ್ತಿರುತ್ತಾರೆ. ಈ ಪರಿಸ್ಥಿತಿಯಲ್ಲಿ ಕೈಗೆಟುಕುವ ಟ್ಯಾಬ್ ಗಳು ಪರಿಣಾಮಕಾರಿ ಆಯ್ಕೆಯಾಗಿದೆ. ಟ್ಯಾಬ್ಲೆಟ್‌ನ ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಿಂತ ದೊಡ್ಡದಾಗಿರುತ್ತದೆ. ಅಲ್ಲದೆ, ಅವು ಲ್ಯಾಪ್‌ಟಾಪ್‌ಗಳಿಗಿಂತ ಹೆಚ್ಚು ಪೋರ್ಟಬಲ್ ಆಗಿರುತ್ತವೆ. ಇದಲ್ಲದೆ, ಅವುಗಳು ಜೇಬಿಗೂ ಹೊರೆಯಾಗುವುದಿಲ್ಲ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎ 7 ಲೈಟ್ ಟ್ಯಾಬ್ಲೆಟ್ 8.7 ಇಂಚುಗಳಷ್ಟು ಗಾತ್ರದ್ದಾಗಿರುತ್ತದೆ. ಇದು ಟಿಎಫ್‌ಟಿ ಡಿಸ್ಪ್ಲೇಯನ್ನು ಹೊಂದಿದೆ. ಇದು  5100mAh ಬ್ಯಾಟರಿಯನ್ನು ಹೊಂದಿದೆ. ಇನ್ನು  8 ಮೆಗಾಪಿಕ್ಸೆಲ್‌ಗಳ ಕ್ಯಾಮೆರಾ ವನ್ನು ಒಳಗೊಂಡಿರುತ್ತದೆ .  ಇದರ ಬೆಲೆ 14,999 ರೂ.  

2 /5

iBall iTab MovieZ tablet ರಿಯಾಯಿತಿ ದರದಲ್ಲಿ ಲಭ್ಯವಿದೆ. ಇದರ ಬೆಲೆ 12,960 ರೂ. ಇದರ ಸ್ಕ್ರೀನ್ ಅಳತೆ  10.1 ಇಂಚುಗಳದ್ದಾಗಿರುತ್ತದೆ. ಇದು  7000mAh ಬ್ಯಾಟರಿಯನ್ನು ಹೊಂದಿದೆ.   

3 /5

Lenovo Tab4 8 tablet 11,490 ರೂ.ಗೆ ಲಭ್ಯವಿರುತ್ತದೆ. ಇದು 8 ಇಂಚುಗಳ ಸ್ಕ್ರೀನ್ ಹೊಂದಿದ್ದು, 4850mAh  ಬ್ಯಾಟರಿಯನ್ನು ಒಳಗೊಂಡಿದೆ. ಇದರ ಪ್ರೈಮರಿ ಕ್ಯಾಮೆರಾ 5 ಮೆಗಾಪಿಕ್ಸೆಲ್‌ಗಳಾಗಿದ್ದು,  2 ಮೆಗಾಪಿಕ್ಸೆಲ್‌ ನ ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿದೆ.  

4 /5

Panasonic Tab 8 HD tablet 10,499 ರೂ. ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಕೂಡಾ 8 ಇಂಚುಗಳ ಪರದೆಯನ್ನು ಹೊಂದಿದೆ.  3 ಜಿಬಿ RAM  ಮತ್ತು32 ಜಿಬಿ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದರ ಬ್ಯಾಟರಿ 5100mAh ಆಗಿದೆ.

5 /5

Lenovo Tab M10 FHD Plus tabletನ  ಸ್ಕ್ರೀನ್ 10.3 ಇಂಚುಗಳಷ್ಟಿದೆ . ಈ ಟ್ಯಾಬ್ಲೆಟ್ ರಿಯಾಯಿತಿ  ದರದೊಂದಿಗೆ  21,999 ರೂ.ಗೆ ಲಭ್ಯವಿದೆ. ಇದರ ಬ್ಯಾಟರಿ ಸಾಮರ್ಥ್ಯ 5000mAh ಆಗಿದೆ.