ಇನ್ನೈದು ದಿನಗಳಲ್ಲಿ ಈ ರಾಶಿಯವರ ಜೀವನದಲ್ಲಿ ಮಹಾ ಬದಲಾವಣೆ.!

 ಜನವರಿ 30, 2023 ರ ರಾತ್ರಿ 12.02 ನಿಮಿಷಕ್ಕೆ ಕುಂಭ ರಾಶಿಯಲ್ಲಿ  ಅಸ್ತವಾಗಲಿದ್ದಾನೆ. ಈ ಹಿನ್ನೆಲೆಯಲ್ಲಿ ಕೆಲವು ರಾಶಿಯವರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

ಬೆಂಗಳೂರು : ಒಂದು ಗ್ರಹವು ಸೂರ್ಯನ ಹತ್ತಿರ ಬಂದಾಗ ಆ ಗ್ರಹಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಈ ಸ್ಥಿತಿಯನ್ನು ಗ್ರಹಗಳ ಅಸ್ತ ಎಂದು ಕರೆಯುತ್ತೇವೆ.  ಜನವರಿ 30, 2023 ರ ರಾತ್ರಿ 12.02 ನಿಮಿಷಕ್ಕೆ ಕುಂಭ ರಾಶಿಯಲ್ಲಿ  ಅಸ್ತವಾಗಲಿದ್ದಾನೆ. ಎರಡೂ ಬದಿಗಳಿಂದ ಸೂರ್ಯನ 15 ಡಿಗ್ರಿಗಳಲ್ಲಿ ಶನಿ ಗ್ರಹ ನೆಲೆಗೊಂಡಾಗ, ಅದು ಅಸ್ತಮಿಸುತ್ತದೆ. ಈ ಪರಿಸ್ಥಿತಿಯಿಂದಾಗಿ, ಶನಿ ಗ್ರಹ ತನ್ನೆಲ್ಲಾ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಕೆಲವು ರಾಶಿಯವರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಈ ರಾಶಿಯ ಜನರು ಉದ್ಯೋಗದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸರಿಯಾದ ಫಲಿತಾಂಶ ಬರುವುದಿಲ್ಲ. ಇದರಿಂದ ಮನಸ್ಸು ನಿರಾಸೆಗೊಳ್ಳಬಹುದು. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಆಲೋಚನೆ ಇಟ್ಟುಕೊಂಡವರಿಗೆ ಸಮಸ್ಯೆ ಎದುರಾಗಬಹುದು. 

2 /5

ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ವೃತ್ತಿ ಜೀವನದ ಮೇಲೆ ಪರಿಣಾಮ ಬೀರಬಹುದು. ಆತ್ಮವಿಶ್ವಾಸ ಮತ್ತು ಪ್ರೇರಣೆಯ ಕೊರತೆ ಎದುರಾಗಬಹುದು. ನಿಮ್ಮ ಶ್ರಮಕ್ಕೆ ಸರಿಯಾದ ಫಲಿತಾಂಶ ಸಿಗದಿರುವ ಸಾಧ್ಯತೆಯೂ ಇದೆ. ಹೆತ್ತವರ ಆರೋಗ್ಯ ಹದಗೆಡಬಹುದು. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉದ್ಯೋಗ ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ಆತುರ ಬೇಡ. ಈ ಸಮಯ ಸೂಕ್ತವಾಗಿಲ್ಲ. 

3 /5

ಕೆಲವು ರೋಗಗಳು ಕಾಡಬಹುದು. ನೀವು ಸೇವಿಸುವ ಆಹಾರದತ್ತ ಗಮನವಿರಲಿ. ಆಪ್ತರೊಂದಿಗೆ ವಾದ ವಿವಾದ ಉಂಟಾಗಬಹುದು. ಮಾತಿನ ಮೇಲೆ ಸಂಯಮವನ್ನು ಇಟ್ಟುಕೊಳ್ಳಿ. ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಎದುರಾಗಬಹುದು. ಕೌಟುಂಬಿಕ ಭಿನ್ನಾಭಿಪ್ರಾಯದಿಂದಾಗಿ, ನಿಮ್ಮ ಕೆಲಸ-ವ್ಯವಹಾರದ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು. 

4 /5

ಶನಿಯು ಅಸ್ತಮಿಸಿದಾಗ ಜೀವನದಲ್ಲಿ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಮನೆಯಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಹೆಚ್ಚಾಗಬಹುದು. ಇದರಿಂದಾಗಿ ನಿಮ್ಮ ಕುಟುಂಬ ಜೀವನದಲ್ಲಿ ಸಮಸ್ಯೆ  ಪ್ರಾರಂಭವಾಗುತ್ತದೆ. ನಿಮ್ಮ ಮಾತುಗಳತ್ತ ಗಮನ ಕೊಡಿ. ಯಾರ ಮನಸ್ಸನ್ನೂ ನೋಯಿಸಬೇಡಿ. 

5 /5

ಒಡಹುಟ್ಟಿದವರೊಂದಿಗೆ ಆಸ್ತಿಗೆ ಸಂಬಂಧಿಸಿದಂತೆ ವಿವಾದ ಉಂಟಾಗಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ. ಪರಸ್ಪರ ಚರ್ಚೆಯ ಮೂಲಕ ವಿವಾದಗಳನ್ನು ಬಗೆಹರಿಸಿಕೊಳ್ಳಿ. ಸಂವಹನ ಕ್ಷೇತ್ರದಲ್ಲಿ ಕೆಲಸ ಮಾಡುವ ವಕೀಲರು, ಶಿಕ್ಷಕರು, ಸಲಹೆಗಾರರು, ವೈದ್ಯರು ಮತ್ತು ಪತ್ರಕರ್ತರು ಸಮಸ್ಯೆಗಳನ್ನು ಎದುರಿಸಬಹುದು.  ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)