Jio-Airtelಗೆ ಬಿಗ್‌ ಶಾಕ್: 1,198 ರೂ.ಗೆ ಅನ್‌ಲಿಮಿಡೆಟ್‌ ಡೇಟಾ & ಕರೆಯ 365 ದಿನಗಳ BSNL ಪ್ಲಾನ್!

Best BSNL Recharge Plans: BSNL 1,198 ರೂ.ನ ಯೋಜನೆಯಲ್ಲಿ ನೀವು 12 ತಿಂಗಳ ಅಂದರೆ 365 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ. ಇದರೊಂದಿಗೆ ಡೇಟಾ & SMSನ ಪ್ರಯೋಜನವೂ ಲಭ್ಯವಿದ್ದು, ನಿಮ್ಮ ಮಾಸಿಕ ವೆಚ್ಚ ಕೇವಲ 100 ರೂ. ಆಗುತ್ತದೆ. 

Best BSNL Recharge Plans for Unlimited Calls & Data: ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ (BSNL) ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ 2 ಅತಿ ಕಡಿಮೆ ಬೆಲೆಯ ರೀಚಾರ್ಜ್ ಪ್ಲ್ಯಾನ್‌ಗಳನ್ನು  ಪ್ರಾರಂಭಿಸಿದೆ. BSNL ತನ್ನ ಬಳಕೆದಾರರಿಗೆ ಕೈಗೆಟಕುವ ಬೆಲೆಯಲ್ಲಿ ಅನೇಕ ಉತ್ತಮ ಯೋಜನೆಗಳನ್ನು ನೀಡುತ್ತದೆ. ಪ್ರಸ್ತುತ ಈಗ ಕಂಪನಿಯು 439 ರೂ. ಮತ್ತು 1,198 ರೂ.ನ 2 ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಈ ಎರಡೂ BSNL ಪ್ರಿಪೇಯ್ಡ್ ಯೋಜನೆಗಳಲ್ಲಿ ಗ್ರಾಹಕರು ಯಾವ ರೀತಿಯ ಪ್ರಯೋಜನಗಳನ್ನು ಪಡೆಯುತ್ತಾರೆ? ಈ ಯೋಜನೆಗಳು ಎಷ್ಟು ದಿನಗಳ ವ್ಯಾಲಿಡಿಟಿಯನ್ನು ನೀಡುತ್ತವೆ ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ... 

2 /5

ಈ ಯೋಜನೆಯಲ್ಲಿ ನೀವು 12 ತಿಂಗಳ ಅಂದರೆ 365 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ. ಇದರೊಂದಿಗೆ ಡೇಟಾ ಮತ್ತು SMSನ ಪ್ರಯೋಜನವೂ ಲಭ್ಯವಿದ್ದು, ನಿಮ್ಮ ಮಾಸಿಕ ವೆಚ್ಚ ಕೇವಲ 100 ರೂ. ಆಗುತ್ತದೆ. BSNL ಈ ಯೋಜನೆಯ ಬೆಲೆ 1,198 ರೂ. ಆಗಿದ್ದು, ಇದರಲ್ಲಿ ನೀವು ವರ್ಷವಿಡೀ 365 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ. ಇದರೊಂದಿಗೆ ತಿಂಗಳಿಗೆ 300 ನಿಮಿಷಗಳ ವಾಯ್ಸ್ ಕರೆ, ತಿಂಗಳಿಗೆ 3GB ಡೇಟಾ ಮತ್ತು 30 SMS ಲಭ್ಯವಿದೆ.

3 /5

ತಮ್ಮ ಸಂಖ್ಯೆಯನ್ನು ಸಕ್ರಿಯವಾಗಿ ಇರಿಸಿಕೊಳ್ಳಲು & ಅದೇ ಸಮಯದಲ್ಲಿ ಸೀಮಿತ ಕರೆ ಮತ್ತು ಡೇಟಾ ಬಳಸಲು ಬಯಸುವವರಿಗೆ ಈ ಯೋಜನೆ ಉತ್ತಮವಾಗಿದೆ. 12 ತಿಂಗಳಿಗೆ ನಿಮಗೆ ಒಟ್ಟು 1,198 ರೂ. ಖರ್ಚಾಗುತ್ತದೆ. ಅಂದರೆ ನಿಮ್ಮ ಖರ್ಚು ತಿಂಗಳಿಗೆ ಕೇವಲ 100 ರೂ. ಆಗುತ್ತದೆ. ಈ ಮೂಲಕ ನೀವು ಅತ್ಯುತ್ತಮ ಸೇವೆಯನ್ನು ಪಡೆಯಬಹುದು.

4 /5

ಬಿಎಸ್‌ಎನ್‌ಎಲ್‌ನ (BSNL) 439 ರೂ.ಗಳ ಈ ಯೋಜನೆಯಲ್ಲಿ ನಿಮಗೆ ಅನಿಯಮಿತ ವಾಯ್ಸ್ ಕರೆ & ಒಟ್ಟು 300 SMS ನೀಡಲಾಗುವುದು. ನೀವು 90 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ. ಈ ಯೋಜನೆಯಲ್ಲಿ ನೀವು ಯಾವುದೇ ಡೇಟಾ ಸೌಲಭ್ಯವನ್ನು ಒದಗಿಸುತ್ತಿಲ್ಲ. ಅಂದರೆ ನೀವು ದೀರ್ಘಾವಧಿಯ ವ್ಯಾಲಿಡಿಟಿಯೊಂದಿಗೆ ಕರೆ ಮಾಡಲು ಬಯಸಿದರೆ ಈ ಯೋಜನೆಯನ್ನು ಇಷ್ಟಪಡಬಹುದು.

5 /5

ಮೇಲಿನ ಈ ಯೋಜನೆ ನಿಮಗೆ ಕೇವಲ ಕರೆ ಸೌಲಭ್ಯ ಮಾತ್ರ ಬೇಕಿದ್ದರೆ ಅತ್ಯುತ್ತಮ ಆಯ್ಕೆಯಾಗಿದೆ. BSNLನ ಅಧಿಕೃತ ಸೈಟ್‌ನಲ್ಲಿ ರೀಚಾರ್ಜ್‌ಗಾಗಿ ಈ ಎರಡೂ ಯೋಜನೆಗಳು ಲಭ್ಯವಿದೆ. ಈ ಯೋಜನೆಗಳಲ್ಲಿ ಯಾವುದಾದರೂ ನಿಮ್ಮ ಸಂಖ್ಯೆಯನ್ನು ರೀಚಾರ್ಜ್ ಮಾಡಲು ಬಯಸಿದರೆ ನೀವು BSNL ಅಧಿಕೃತ ಸೈಟ್ ಅಥವಾ ಕಂಪನಿಯ ಮೊಬೈಲ್ ಅಪ್ಲಿಕೇಶನ್ ಬಳಸಬಹುದು.