39ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ Sunny Leone ಕೆಲ ಮೋಹಕ ಭಾವಚಿತ್ರಗಳು

ಇಂದು ಮೇ 13, ಖ್ಯಾತ ಬಾಲಿವುಡ್ ನಟಿ ಸನ್ನಿ ಲಿಯೋನ್ ತನ್ನ 39 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾಳೆ.

May 13, 2020, 06:35 PM IST

ಇಂದು ಮೇ 13, ಖ್ಯಾತ ಬಾಲಿವುಡ್ ನಟಿ ಸನ್ನಿ ಲಿಯೋನ್ ತನ್ನ 39 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾಳೆ. 1981 ರಲ್ಲಿ ಜನಿಸಿದ ಸನ್ನಿ ಲಿಯೋನ್ ಇಂದು ಯಾವುದೇ ಪರಿಚಯದ ಅಗತ್ಯತೆ ಇಲ್ಲ. ತನ್ನ ವೃತ್ತಿಜೀವನವನ್ನು ಪೋರ್ನ್ ಸ್ಟಾರ್ ಆಗಿ ಆರಂಭಿಸಿದ್ದ ಸನ್ನಿ ಲಿಯೋನ್ ಇಂದು ಬಾಲಿವುಡ್‌ನಲ್ಲಿ ಯಶಸ್ವಿ ನಟಿ.

ಭಾರತದಲ್ಲಿ ಸನ್ನಿ ಲಿಯೋನ್ ತನ್ನ ಚಲನಚಿತ್ರಗಳು ಹಾಗೂ ಲುಕ್ಸ್ ಗಳ ಮೂಲಕ ಸತತ ಚರ್ಚೆಯಲ್ಲಿ ಇರುತ್ತಾಳೆ. ಆದರೆ. ಸನ್ನಿ ಲಿಯೋನ್ ಓರ್ವ ನಟಿಯಾಗುವುದರ ಜೊತೆಗೆ ಓರ್ವ ಸಕ್ಸೆಸ್ ಫುಲ್ ಬಿಸಿನೆಸ್ ವುಮೆನ್ ಕೂಡ ಆಗಿದ್ದಾಳೆ ಎಂಬುದು ತುಂಬಾ ಕಡಿಮೆ ಜನರಿಗೆ ತಿಳಿದಿದೆ.

ಸನ್ನಿ ಲಿಯೋನ್ ಓರ್ವ ನತಿಯಾಗುವುದರ ಜೊತೆಗೆ ಫಿಲಾಂತ್ರಾಫಿಸ್ಟ್ ಕೂಡ ಆಗಿದ್ದಾರೆ. 2011 ರಲ್ಲಿ ಸನ್ನಿ ಡೆನಿಯಲ್ ವೆಬರ್ ಜೊತೆಗೆ ವಿವಾಹವಾಗಿದ್ದಾರೆ. ಬಳಿಕ ನಿಶಾ ಹೆಸರಿನ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದಾರೆ. ಅಷ್ಟೇ ಅಲ್ಲ 2018 ರಲ್ಲಿ ಸನ್ನಿ ಲಿಯೋನ್ ಸರೋಗೆಸಿ ಮೂಲಕ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎನ್ನುತ್ತಾರೆ.

ಭಾರತಕ್ಕೆ ಬಂದ ಬಳಿಕ ಸನ್ನಿ ಯಾವಾಗಲೂ ತಮ್ಮ ಸಂಪೂರ್ಣ ಕುಟುಂಬದ ಭಾವಚಿತ್ರಗಳನ್ನು ಹಂಚಿಕೊಳ್ಳುತ್ತಾಳೆ. ಚಲನಚಿತ್ರಗಳಲ್ಲಿ ಸನ್ನಿ ಕರಿಯರ್ ಕುರಿತು ಹೇಳುವುದಾದರೆ, ಕಲರ್ಸ್ ವಾಹಿನಿಯಲ್ಲಿ ಮೂಡಿ ಬಂದ ರಿಯಾಲಿಟಿ ಶೋ 'ಬಿಗ್ ಬಾಸ್' ನಲ್ಲಿ ಸನ್ನಿ ಓರ್ವ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಳು. ಈ ವೇಳೆ ಖ್ಯಾತ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಸನ್ನಿ ಭೇಟಿಗಾಗಿ ಷೋ ಗೆ ಎಂಟ್ರಿ ನೀಡಿದ್ದರು. ಈ ಶೋ ಬಳಿಕ ಸನ್ನಿ ಲಿಯೋನ್ ಅವರನ್ನು ಹಲವಾರು ಚಿತ್ರಗಳಲ್ಲಿ ನೋಡಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಸನ್ನಿ ಸಾಕಷ್ಟು ಸಕ್ರೀಯವಾಗಿದ್ದಾಳೆ. ಅಷ್ಟೇ ಅಲ್ಲ ಸತತ ತನ್ನ ಮೋಹಕ ಭಾವಚಿತ್ರಗಳು ಹಾಗೂ ವಿಡಿಯೋಗಳನ್ನು ಹಂಚಿಕೊಂಡು ಸನ್ನಿ ತನ್ನ ಅಭಿಮಾನಿಗಳಿಗೆ ರಂಜಿಸುತ್ತಲೇ ಇರುತ್ತಾಳೆ.

ಓರ್ವ ಚಲನಚಿತ್ರ ನಟಿಯಾಗಿ ಸನ್ನಿ ಕುರಿತು ಹೇಳುವುದಾದರೆ, 2012 ರಲ್ಲಿ ಪೂಜಾ ಭಟ್ ಅವರ 'ಜಿಸ್ಮ್ -2' ಚಿತ್ರದ ಮೂಲಕ ಸನ್ನಿ ಬಾಲಿವುಡ್ ಅಂಗಳಕ್ಕೆ ಪದಾರ್ಪಣೆ ಮಾಡಿದ್ದಾಳೆ. ಇದರ ಜೊತೆಗೆ ಹಲವು ಐಟಂ ಸಾಂಗ್ ಗಳಲ್ಲಿಯೂ ಕೂಡ ಸನ್ನಿ ಕಾಣಿಸಿಕೊಂಡಿದ್ದಾಳೆ.

ಕೋಕಾ ಕೋಲಾ, ರಂಗೀಲಾ ಹಾಗೂ ವೀರಮ್ಮದೇವಿಗಳಂತಹ ಪ್ರಾಜೆಕ್ಟ್ ಗಳಲ್ಲಿಯೂ ಕೂಡ ಸನ್ನಿ ಲಿಯೋನ್ ಅವರನ್ನು ಗುರುತಿಸಲಾಗಿದೆ.

1/7

2/7

3/7

4/7

5/7

6/7

7/7