ಬಾಲಿವುಡ್ ಸ್ಟಾರ್ ಅಮೀರ್ ಖಾನ್ ತಮ್ಮ 53ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಹೀಗೆ..

  

Mar 14, 2018, 06:45 PM IST
1/7

ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಇಂದು ತಮ್ಮ 53ನೇ ವರ್ಷದ ಹುಟ್ಟುಹಬ್ಬವನ್ನು ಪತ್ನಿ ಕಿರಣ್ ರಾವ್ ಜೊತೆ ಮುಂಬೈನಲ್ಲಿ ಆಚರಿಸಿಕೊಂಡರು. ತಮ್ಮ ಪತ್ನಿಯೊಂದಿಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು. (Pic: PTI)

2/7

ಮಾರ್ಚ್ 14, 1965 ರಂದು ಮುಂಬೈನಲ್ಲಿ ಜನಿಸಿದ ಅಮೀರ್ ಖಾನ್ ಅವರ ಪೂರ್ಣ ಹೆಸರು ಮೊಹಮ್ಮದ್ ಅಮೀರ್ ಹುಸೇನ್ ಖಾನ್.

3/7

'ಠಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ಶೂಟಿಂಗ್'ಗಾಗಿ ಜೋಧ್ಪುರದಲ್ಲಿದ್ದ ಅಮೀರ್ ಖಾನ್, ಈ ವಿಶೇಷ ದಿನದಂದು ಪತ್ನಿಯೊಂದಿಗೆ ಹುಟ್ಟುಹಬ್ಬದ ಆಚರಿಸಿ ಪ್ರೀತಿ ತೋರಿಸಿದ್ದು ಹೀಗೆ...

4/7

 'ಠಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ ಅಮೀರ್ ಮತ್ತು ಅಮಿತಾಬ್ ಬಚ್ಚನ್ ಒಟ್ಟಾಗಿ ಇದೇ ಮೊದಲ ಬಾರಿಗೆ ಅಭಿನಯಿಸುತ್ತಿದ್ದಾರೆ. 

 

5/7

ಕಳೆದ ವರ್ಷ ಬಿಡುಗಡೆಯಾದ ಅಮೀರ್ ಖಾನ್ ಅವರ 'ಸೀಕ್ರೆಟ್ ಸೂಪರ್ಸ್ಟಾರ್' ಚಿತ್ರವು ದಾಖಲೆಯ ಮೊತ್ತವನ್ನು ಗಳಿಸಿತ್ತು. ಅಮೀರ್ ಅವರ ಈ ಚಿತ್ರ ವಿಶ್ವದ ಐದು ಪ್ರಮುಖ ಚಲನಚಿತ್ರಗಳಲ್ಲಿ ಒಂದಾಗಿದೆ. 

6/7

ಟಾಪ್ 5 ಪಟ್ಟಿಯಲ್ಲಿ 'ಸೀಕ್ರೆಟ್ ಸೂಪರ್ಸ್ಟಾರ್'ನ ಪ್ರವೇಶದೊಂದಿಗೆ ಅಮೀರ್ ಖಾನ್ ಅವರ 3 ಚಿತ್ರಗಳು ಈ ಪಟ್ಟಿಯಲ್ಲಿದ್ದವು (Pics:IANS)

 

7/7

ಒಟ್ಟಾರೆಯಾಗಿ, ಅಮೀರ್ ಖಾನ್ ಚಿತ್ರರಂಗಕ್ಕೆ ಬಂದಾಗಿನಿಂದಲೂ ವಿಭಿನ್ನ ಪಾತ್ರಗಳೊಂದಿಗೆ ಒಂದಲ್ಲಾ ಒಂದು ಸಾಧನೆ ಮಾಡುತ್ತಾ, ಅಗಾಧ ಅಭಿಮಾನಿಗಳನ್ನು ಗಳಿಸಿದ್ದಾರೆ.