Business Idea: ಕಡಿಮೆ ಬಜೆಟ್‌ನಲ್ಲಿಈ ಬ್ಯುಸಿನೆಸ್ ಪ್ರಾರಂಭಿಸಿ ಭರ್ಜರಿ ಲಾಭ ಗಳಿಸಿ

successful small business ideas: ಕೈತುಂಬಾ ಹಣ ಸಂಪಾದಿಸುವ ಬ್ಯುಸಿನೆಸ್ ಐಡಿಯಾಗಳನ್ನು ನಾವು ಇಲ್ಲಿ ತಿಳಿಸಿಕೊಡಲಿದ್ದೇವೆ. ಈ ವ್ಯಾಪಾರ ಮಾಡಿದ್ರೆ ನೀವು ಸೋಲೇ ಮಾತೇ ಇಲ್ಲ. ನೀವು ಅಂದುಕೊಂಡಷ್ಟು ಲಾಭ ಗಳಿಸಬಹುದು.

Business Idea: ‘ಹಣ ಅಂದ್ರೆ ಹೆಣವೂ ಬಾಯಿ ಬಿಡುತ್ತೆ’ ಅನ್ನೋ ಗಾದೆ ಮಾತೇ ಇದೆ. ಇಂದು ಹಣವಿಲ್ಲದೆ ಏನೂ ನಡೆಯಲ್ಲ. ಹಣದ ಮುಂದೆ ಸಂಬಂಧಗಳು ಕೂಡ ಮೌಲ್ಯ ಕಳೆದುಕೊಳ್ಳುತ್ತಿವೆ. ಪ್ರತಿಯೊಂದಕ್ಕೂ ಇಂದು ಹಣವೇ ತುಂಬಾ ಮುಖ್ಯ. ಖಾಸಗಿ ಮತ್ತು ಸರ್ಕಾರಿ ಕೆಲಸ ಮಾಡಿದ್ರೂ ಕೂಡ ಕೆಲವರಿಗೆ ತೃಪ್ತಿ ಇರುವುದಿಲ್ಲ. ಏನಾದರೂ ಸ್ವಂತ ಬ್ಯುಸಿನೆಸ್ ಮಾಡಬೇಕು ಅಂತಾ ತಲೆಕೆಡಿಸಿಕೊಂಡು ಕುಂತಿರುತ್ತಾರೆ. ಅಂತಹವರಿಗೆ ಕೈತುಂಬಾ ಹಣ ಸಂಪಾದಿಸುವ ಬ್ಯುಸಿನೆಸ್ ಐಡಿಯಾಗಳನ್ನು ನಾವು ಇಲ್ಲಿ ತಿಳಿಸಿಕೊಡಲಿದ್ದೇವೆ. ಈ ವ್ಯಾಪಾರ ಮಾಡಿದ್ರೆ ನೀವು ಸೋಲೇ ಮಾತೇ ಇಲ್ಲ. ನೀವು ಅಂದುಕೊಂಡಷ್ಟು ಲಾಭ ಗಳಿಸಬಹುದು. ಬನ್ನಿ ಆ ಬ್ಯುಸಿನೆಸ್ ಐಡಿಯಾಗಳು ಯಾವುವು ಅಂತಾ ತಿಳದುಕೊಳ್ಳೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕರ್ನಾಟಕವೂ ಸೇರಿದಂತೆ ಇಡೀ ಭಾರತದಲ್ಲಿ ಹಣ್ಣು ಮತ್ತು ತರಕಾರಿ ವ್ಯಾಪಾರ ತುಂಬಾ ಲಾಭದಾಯಕ. ಹಣ್ಣು ಮತ್ತು ತರಕಾರಿ ರಫ್ತು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯಮ. ಹಣ್ಣು ಮತ್ತು ತರಕಾರಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ನೀವು ಸಹ ತರಕಾರಿ, ಅಣಬೆ ಮತ್ತು ವಿವಿಧ ರೀತಿಯ ಹಣ್ಣುಗಳ ರಪ್ತು ಮಾಡುವ ವ್ಯವಹಾರ ಮಾಡಬಹುದು. ನೀವೇ ನಿಮ್ಮೂರಿನಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಬಹುದು.  

2 /5

ವರ್ಷದ 365 ದಿನವೂ ಕೃಷಿ ಚಟುವಟಿಕೆ ನಡೆಯುತ್ತಲೇ ಇರುತ್ತದೆ. ಹೀಗಾಗಿ ರೈತರಿಗೆ ರಸಗೊಬ್ಬರ, ಬೀಜಗಳು ಮತ್ತು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಉತ್ಪನ್ನಗಳಿಗೆ ಬೇಡಿಕೆ ಇರುತ್ತದೆ. ನೀವು ಕೃಷಿಗೆ ಕಡಿಮೆ ಹೂಡಿಕೆಯ ಮೂಲಕ ವ್ಯವಹಾರ ಶುರು ಮಾಡಬಹುದು. ರಸಗೊಬ್ಬರ ವಿತರಣೆಯ ಬ್ಯುಸಿನೆಸ್ ಅನ್ನು  ಭಾರತದಲ್ಲಿ ಸರ್ಕಾರ ನಿಯಂತ್ರಿಸುವುದರಿಂದ ನಿಮಗೆ ಪರವಾನಗಿಯ ಅಗತ್ಯವಿರುತ್ತದೆ. ಹೀಗಾಗಿ ಈ ವ್ಯವಹಾರ ಪ್ರಾರಂಭಿಸಿ ಉತ್ತಮ ಲಾಭ ಗಳಿಸಬಹುದು.

3 /5

ನೀವು ಉತ್ತಮ ವ್ಯವಹಾರ ಮಾಡಿ ಕೈತುಂಬಾ ಹಣ ಗಳಿಸಬೇಕು ಅಂದರೆ ಕೋಳಿ ಸಾಕಾಣಿಕೆ ಉತ್ತಮ ಆಯ್ಕೆ. ಈ ವ್ಯಾಪಾರದಲ್ಲಿ ನೀವು ಮೊಟ್ಟೆ ಮತ್ತು ಮಾಂಸದ ಮೂಲಕ ಲಾಭ ಮಾಡಬಹುದು. ಕೋಳಿ ಜೊತೆಗೆ ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುವುದರಿಂದ ನಿಮಗೆ ಹೆಚ್ಚುವರಿ ಆದಾಯ ಸಿಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಈ ಬ್ಯುಸಿನೆಸ್ ಪ್ರಾರಂಭಿಸಿದರೆ ಉತ್ತಮ ಲಾಭ ಮಾಡಬಹುದು.   

4 /5

ಹಿಟ್ಟಿನ ಗಿರಣಿ ಸ್ಥಾಪಿಸುವುದು ಕೂಡ ಲಾಭದಾಯಕ ವ್ಯವಹಾರವಾಗಿದೆ. ದೇಶದಲ್ಲಿ ರೊಟ್ಟಿ,  ಬೇಕರಿ ವಸ್ತು ತಯಾರಿಸಲು ಹಿಟ್ಟು ಬೇಕೇ ಬೇಕು. ಹೀಗಾಗಿ ನೀವು ಕಡಿಮೆ ವೆಚ್ಚದಲ್ಲಿ ಈ ವ್ಯವಹಾರ ಪ್ರಾರಂಭಿಸಿದರೆ ಉತ್ತಮ ಲಾಭ ಮಾಡಬಹುದು.

5 /5

ಇಂದು ಭಾರತದಲ್ಲಿ ಹೋಟೆಲ್ ಉದ್ಯಮಕ್ಕೆ ತುಂಬಾ ಬೇಡಿಕೆಯಿದೆ. ದೇಶದಲ್ಲಿ ಲಕ್ಷಾಂತರ ಹೋಟೆಲ್‍ಗಳಿವೆ. ನೀವು ಸಹ ಹೋಟೆಲ್ ಬ್ಯುಸಿನೆಸ್ ಮಾಡಬೇಕಾದರೆ ಪಕ್ಕಾ ಪ್ಲಾನ್ ಮಾಡಿ ಈ ವ್ಯವಹಾರ ಮಾಡಬಹುದು. ಉತ್ತಮ ಆದಾಯ ಗಳಿಸಲು ಹೋಟೆಲ್ ಬ್ಯುಸಿನೆಸ್ ಉತ್ತಮ ಆಯ್ಕೆಯಾಗಿದೆ.