ಮಕ್ಕಳು ಈ ಐದು ವರ್ತನೆ ತೋರುತ್ತಿದ್ದರೆ ನಿಮ್ಮ ಸಮಯ ಬಯಸುತ್ತಿದ್ದಾರೆ ಎಂದರ್ಥ

ಮಗು ತನ್ನ ಹೆತ್ತವರ ಜೊತೆ ಹೆಚ್ಚು ಹೆಚ್ಚು ಕಾಲ  ಕಳೆಯಲು ಬಯಸುತ್ತದೆ.   ಆದರೆ ಕೆಲಸದ ಕಾರಣದಿಂದಾಗಿ ಅನೇಕ ಬಾರಿ ಪೋಷಕರು ತಮ್ಮ ಮಗುವಿಗೆ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ನಿಮ್ಮ ಮಗುವಿನಲ್ಲಿ ಈ  ವರ್ತನೆಗಳನ್ನು ಗಮನಿಸಿದರೆ ಮಗು ನಿಮ್ಮ ಸಮಯವನ್ನು ಬಯಸುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. 

ಬೆಂಗಳೂರು : ಮಗುವಿಗೆ ಮೊದಲ ಸ್ನೇಹಿತರು ಅಂದರೆ ಅದರ ಪೋಷಕರು.  ತಂದೆ ತಾಯಿಯ ಜೊತೆ ಮಗುವಿಗೆ ಸದಾ ಸುರಕ್ಷಿತ ಭಾವ ಮೂಡುತ್ತದೆ.  ಅದಕ್ಕಾಗಿಯೇ ಮಗು ಬಾಲ್ಯದಿಂದಲೂ ತನ್ನ ಹೆತ್ತವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಪ್ರಾರಂಭಿಸುತ್ತದೆ. ಆದರೆ ಇಂದಿನ ದಿನಗಳಲ್ಲಿ ಈ ತಂದೆ ತಾಯಿಯರಿಬ್ಬರೂ ಉದ್ಯೋಗಕ್ಕಾಗಿ ಹೊರಗೆ ಹೋಗಬೇಕಾಗಿದ್ದು, ತಮ್ಮ ಮಗುವಿಗೆ ಪೂರ್ಣ ಸಮಯವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಮಗು ಒಂಟಿತನ ಅನುಭವಿಸುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಮಕ್ಕಳು ತಮ್ಮ ಹೆತ್ತವರ ಗಮನವನ್ನು ಸೆಳೆಯಲು ತಮ್ಮ ಒಡಹುಟ್ಟಿದವರ ಜೊತೆ ಜಗಳವಾಡುತ್ತಾರೆ. ಆಟ ಸಾಮಾನಿಗಾಗಿ ಒತ್ತಾಯಿಸುವುದು, ಬೇರೆ ಮಕ್ಕಳೊಂದಿಗೆ ಜಗಳವಾಡುವುದು, ಬೇರೆ ಮಕ್ಕಳ ಮೇಲೆ ಕೈ ಮಾಡುವುದು  ಇಂಥಹ ಕೆಲಸ ಶುರು ಮಾಡಿಕೊಳ್ಳುತ್ತಾರೆ. 

2 /5

ಮಗುವಿಗೆ ತನ್ನ ಹೆತ್ತವರ ಗಮನ ಬೇಕಾದಾಗ, ಅವರು ಪ್ರತ್ಯೇಕವಾಗಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಾರೆ.  ಹೀಗೆ ಮಾಡಿದಾಗ ಏನಾಯಿತು ಎಂದು ನೋಡಲು ತಂದೆ ತಾಯಿ ತನ್ನ ಬಳಿ ಬರುತ್ತಾರೆ ಎನ್ನುವ ಭಾವನೆ ಮಗುವಿನದ್ದಾಗಿರುತ್ತದೆ. ಅದಕ್ಕಾಗಿಯೇ ಅನೇಕ ಬಾರಿ ಮಕ್ಕಳು ಉದ್ದೇಶಪೂರ್ವಕವಾಗಿ ಮನೆಯ ಹೊರಗೆ ಕುಳಿತುಕೊಳ್ಳುತ್ತಾರೆ.

3 /5

ಮಗು ಚಿಕ್ಕದಾಗಿದ್ದರೆ, ಅವನು ನೇರವಾಗಿ ತೊಡೆಯ ಮೇಲೆ ಬಂದು ಕುಳಿತು ಕೊಳ್ಳಲು ಒತ್ತಾಯ ಮಾಡುತ್ತದೆ. ತೊಡೆಯಿಂದ ಕೆಳಗಿಳಿಸಿದ ತಕ್ಷಣ ಹಠ ಮಾಡಲು ಆರಂಭಿಸುತ್ತದೆ. ಅದು ಆ ಮಗುವಿಗೆ ನಿಮ್ಮ ಸಮಯ ಬೇಕಾಗಿದೆ  ಎಂಬುದರ ಸ್ಪಷ್ಟ ಸಂಕೇತವಾಗಿದೆ.  

4 /5

ಪೋಷಕರ ಗಮನ ಕೊರತೆಯಿಂದಾಗಿ, ಮಗು ಹಠ ಮಾಡಲು ಆರಂಭಿಸುತ್ತದೆ. ಮಕ್ಕಳೊಂದಿಗೆ ಆಟವಾಡುವಾಗ ಅಳುವುದು. ಪೋಷಕರ ಎದುರು ಬಂದಾಗ ಅಳುವುದು ಹೀಗೆ ಕುಳಿತರೂ ನಿಂತರೂ ಅಳಲು ಆರಂಭಿಸುತ್ತದೆ.

5 /5

ಕೆಲವು ಮಕ್ಕಳು ಶಾಂತವಾಗಿರುತ್ತಾರೆ. ಅವರು ತಮ್ಮತ್ತ ಪೋಷಕರ ಗಮನವನ್ನು ಸೆಳೆಯಲು ತಮ್ಮದೇ ದಾರಿಯನ್ನು ಕಂಡು ಕೊಳ್ಳುತ್ತಾರೆ. ಈ ಮಕ್ಕಳು   ಸಣ್ಣ ಪುಟ್ಟ ಕೆಲಸಗಳಿಗೂ ಪದೇ ಪದೇ ಪೋಷಕರ ಅನುಮತಿ ತೆಗೆದುಕೊಳ್ಳಲು ಆರಂಭಿಸುತ್ತಾರೆ.