ಮಹಾಮಾರಿ CoronaVirus ಕುರಿತ 14 ಭ್ರಮೆಗಳಿಗೆ ತಿಲಾಂಜಲಿ ಹಾಡಿದ WHO

  • Mar 27, 2020, 22:19 PM IST

ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ಇದುವರೆಗೆ ವಿಶ್ವಾದ್ಯಂತದ ಸುಮಾರು 200 ದೇಶಗಳಲ್ಲಿ  ಸುಮಾರು 25 ಸಾವಿರಕ್ಕೂ ಅಧಿಕ ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೊಂದೆಡೆ ಸುಮಾರು 5 ಲಕ್ಷಕ್ಕೂ ಅಧಿಕ ಜನರು ಈ ಮಹಾಮಾರಿಯ ಸೋಂಕಿಗೆ ಗುರಿಯಾಗಿದ್ದಾರೆ. ಆದರೆ, ಈ ಕಾಯಿಲೆಗೆ ಇದುವರೆಗೂ ಯಾವುದೇ ನಿಶ್ಚಿತ ಚಿಕಿತ್ಸೆ ಇಲ್ಲ. ಈ ಕಾಯಿಲೆಗೆ ಇದುವರೆಗೆ ಲಸಿಕೆ ಕೂಡ ಸಿದ್ಧವಾಗಿಲ್ಲ. ಹಾಗಿದ್ದರೆ ಈ ಸೋಂಕಿನಿಂದ ಪಾರಾಗುವ ಉಪಾಯವಾದರೂ ಏನು? ಈ ಕಾಯಿಲೆಯಿಂದ ಪಾರಾಗುವ ಕುರಿತು ವಿವಿಧ ರೀತಿಯ ಹೇಳಿಕೆಗಳು ಕೇಳಿಬರುತ್ತಿದ್ದು, ವಿವಿಧ ವಿಧಾನಗಳೂ ಕೂಡ ನಿರ್ಮಾಣಗೊಂಡಿವೆ. ಆದರೆ, ಇದೀಗ ವಿಶ್ವ ಆರೋಗ್ಯ ಸಂಸ್ಥೆ ಈ ಕಾಯಿಲೆಯ ಕುರಿತಾದ ಎಲ್ಲ ಭ್ರಮೆಗಳನ್ನೂ ದೂರಗೊಳಿಸಿದೆ. ಇದುವರೆಗೆ ಚಳಿಗಾಲದ ಕಾರಣ ಈ ವೈರಸ್ ತುಂಬಾ ವೇಗವಾಗಿ ಪಸರಿಸುತ್ತಿದೆ ಎಂದು ಹೇಳಲಾಗಿತ್ತು. ಉಷ್ಣಾಂಶದ ವಾತಾವರಣದಲ್ಲಿ ಈ ಸೋಂಕು ಪಸರಿಸುವುದು ನಿಲ್ಲಲಿದೆ ಎನ್ನಲಾಗಿತ್ತು. ಆದರೆ, ಈ ಕುರಿತಾದ ಎಲ್ಲ ಭ್ರಮೆಗಳನ್ನು ದೂರಗೊಳಿಸಲು WHO ಗ್ರಾಫಿಕಲ್ ಪ್ರೊಜೆಕ್ಷನ್ ವೊಂದನ್ನು ಸಿದ್ಧಪಡಿಸಿದೆ.

1 /14

ಇದುವರೆಗೂ ಕೊರೊನಾ ವೈರಸ್ ಗೆ ಯಾವುದೇ ಔಷಧಿಯಾಗಲಿ ಅಥವಾ ಲಸಿಕೆಯಾಗಲಿ ಸಿದ್ಧವಾಗಿಲ್ಲ.

2 /14

ಇಲ್ಲ ...ಮತ್ತು ಇಲ್ಲವೇ ಇಲ್ಲ ಎಂದು WHO ಹೇಳಿದೆ. ಆಂಟಿ ಬಯೋಟಿಕ್ ಕೊರೊನಾ ವೈರಸ್ ತಡೆಗಟ್ಟುವಲ್ಲಿ ಪರಿಣಾಮಕಾರಿ ಇಲ್ಲ. ಆಂಟಿ ಬಯೋಟಿಕ್ ಕೇವಲ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಅನ್ನು ಗುಣಪಡಿಸುತ್ತದೆ.

3 /14

ಯಾವುದೇ ವಯಸ್ಸಿನ ಜನರು ಕೊರೊನಾ ವೈರಸ್ ನ ಸೋಂಕಿಗೆ ಗುರಿಯಾಗಬಹುದು. ಹಿರಿಯ ನಾಗರಿಕರು ಸೇರಿದಂತೆ ಯುವಕರಲ್ಲಿಯೂ ಕೂಡ ಇದು ಸಂವೇದನಶೀಲವಾಗಿದೆ.

4 /14

ಬೆಳ್ಳುಳ್ಳಿ ಒಂದು ಪೌಷ್ಟಿಕ ಆಹಾವಾಗಿದೆ. ಇದರಲ್ಲಿ ಹಲವು ರೀತಿಯ ಆಂಟಿ ಮೈಕ್ರೋಬಿಯಲ್ ಗುಣಧರ್ಮಗಳಿವೆ. ಆದ್ರೆ, ಇದನ್ನು ಸೇವಿಸಿ ಕೊರೊನಾ ವೈರಸ್ ನಿಂದ ಪಾರಾಗಬಹುದು ಎಂಬುದರ ಯಾವುದೇ ಖಚಿತ ಪ್ರಮಾಣಗಳಿಲ್ಲ ಎಂದು WHO ಹೇಳಿದೆ.

5 /14

ಇಂತಹ ಯಾವುದೇ ರೀತಿಯ ಪ್ರಮಾಣಗಳು ಇದುವರೆಗೆ ಲಭಿಸಿಲ್ಲ. ಉಪ್ಪಿನ ನೀರಿನಿಂದ ಮೂಗು ಶುಚಿಗೊಳಿಸುವುದರಿಂದ ಕೊರೊನಾ ವೈರಸ್ ನಿಂದ ಪಾರಾಗಬಹುದು ಎಂಬುದರ ಯಾವುದೇ ಪ್ರಮಾಣಗಳು ಇದುವರೆಗೆ ಲಭಿಸಿಲ್ಲ ಎಂದು WHO ಹೇಳಿದೆ.

6 /14

ನಿಮೋನಿಯಾಗೆ ಬಳಸಲಾಗುವ ಔಷಧಿಗಳಾದ ನ್ಯುಮೊಕೊಕಲ್ ವ್ಯಾಕ್ಸಿನ್ ಅಥವಾ ಹ್ಯೂಮೋಫಿಲಿಸ್ ಇನ್ಫ್ಳುಯೆನ್ಜಾ ವ್ಯಾಕ್ಸಿನ್ ಯಾವುದೇ ರೀತಿಯ ಪರಿಣಾಮ ಕೊರೊನಾ ವೈರಸ್ ಮೇಲೆ ಬೀರುವುದಿಲ್ಲ.

7 /14

ಅಲ್ಕೋಹಾಲ್ ಅಥವಾ ಕ್ಲೋರಿನ್ ಅನ್ನು ಶರೀರದ ಮೇಲೆ ಸಿಂಪಡಿಸುವುದರಿಂದ ಕೊರೊನಾ ವೈರಸ್ ಸಾವನ್ನಪ್ಪುವುದಿಲ್ಲ ಎಂದು WHO ಹೇಳಿದೆ.

8 /14

ಶರೀರದ ತಾಪಮಾನ ಅಳೆಯಲು ಥರ್ಮಲ್ ಸ್ಕ್ಯಾನರ್ ಒಂದು ಉತ್ತಮ ಆಯ್ಕೆಯಾಗಿದೆ. ಇದರಿಂದ ಕೊರೊನಾ ವೈರಸ್ ನಿಂದ ಹೆಚ್ಚಾಗುವ ಶರೀರದ ತಾಪಮಾನವನ್ನು ಪತ್ತೆಹಚ್ಚಬಹುದಾಗಿದೆ.

9 /14

ನಮ್ಮ ಕೈ ಹಾಗೂ ಶರೀರದ ಯಾವುದೇ ಭಾಗವನ್ನು ಒಣಗಿಸಲು UV ಲೆನ್ಸ್ ಬಳಕೆ ಉಚಿತವಲ್ಲ ಎಂದು WHO ಹೇಳಿದೆ. UV ರೇಡಿಯೇಶನ್ ನಿಮ್ಮ ಚರ್ಮಕ್ಕೆ ಹಾನಿಯುಂಟುಮಾಡುತ್ತದೆ.

10 /14

ಇಲ್ಲ. WHO ಪ್ರಕಾರ ಯಾವುದೇ ಹ್ಯಾಂಡ್ ಡ್ರೈಯರ್ COVID-19 ವೈರಸ್ ಅನ್ನು ಸಾಯಿಸುವಲ್ಲಿ ಪರಿಣಾಮಕಾರಿಯಾಗಿಲ್ಲ.

11 /14

ಸೊಳ್ಳೆಗಳಿಂದ ಈ ವೈರಸ್ ಪಸರಿಸುತ್ತದೆ ಎಂಬುದಕ್ಕೆ ಇದುವರೆಗೆ ಯಾವುದೇ ನಿಶ್ಚಿತ ದಾಖಲೆಗಳಿಲ್ಲ ಎಂಬುದನ್ನು WHO ಹೇಳಿದೆ.

12 /14

ದಿನನಿತ್ಯ ಬಿಸಿ ನೀರಿನ ಸ್ನಾನ ಮಾಡುವುದರಿಂದಲೂ ಕೂಡ ಕೊರೊನಾ ವೈರಸ್ ಸೋಂಕನ್ನು ತಡೆಯುವುದು ಅಸಾಧ್ಯ. ಈ ಸೋಂಕಿನ ಮೇಲೆ ತಾಪಮಾನದ ಯಾವುದೇ ಪರಿಣಾಮ ಉಂಟಾಗುವುದಿಲ್ಲ.

13 /14

ಚಳಿಗಾಲ ಹೊಸ ಕೊರೊನಾ ವೈರಸ್ ಅನ್ನು ಮಟ್ಟ ಹಾಕುತ್ತದೆ ಎಂಬುದರ ಪ್ರಮಾಣಗಳು ಇದುವರೆಗೆ ಲಭಿಸಿಲ್ಲ ಎಂದು WHO ಹೇಳಿದೆ.

14 /14

ಇದುವರೆಗೆ ಲಭಿಸಿರುವ ತಥ್ಯಗಳ ಆಧಾರದ ಮೇಲೆ COVID-19 ವೈರಸ್ ಯಾವುದೇ ಪ್ರದೇಶದಲ್ಲಿ ಹರಡುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ.ಉಷ್ಣಾಂಶ ಹಾಗೂ ತೇವಾಂಶ ಹೆಚ್ಚಾಗಿರುವ ಪ್ರದೇಶದಲ್ಲಿ ಇದು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಎಂದು WHO ಹೇಳಿದೆ.