ಡಿ. ರೂಪಾ ಅವರು ಕೇವಲ ಅಧಿಕಾರಿಯಲ್ಲ, ಸಿಂಗರ್ ಕೂಡ ಹೌದು. ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಬಯಲಾಟದ ಭೀಮಣ್ಣ’ ಎಂಬ ಕನ್ನಡ ಚಲನಚಿತ್ರದಲ್ಲಿ ಹಿನ್ನೆಲೆ ಗಾಯನ ಕೂಡ ಮಾಡಿದ್ದಾರೆ.
ಸದ್ಯ ಪತಿ ಮುನಿಶ್ ಮೌದ್ಗಿಲ್ ಜೊತೆ ಅಮೆರಿಕಾಗೆ ಪ್ರವಾಸ ಬೆಳಸಿದ ಡಿ. ರೂಪಾ, ಮೈಕ್ರೋಸಾಫ್ಟ್ ಕಂಪನಿಗೆ ಕೂಡ ಭೇಟಿ ನೀಡಿದ್ದಾರೆ.
ಈ ಬಳಿಕ ನದಿ ಕಿನಾರೆಯಲ್ಲಿ ಮುದ್ದಾದ ಫೋಟೋಗಳನ್ನು ದಂಪತಿ ಕ್ಲಿಕ್ಕಿಸಿಕೊಂಡಿದ್ದಾರೆ.
ಮುನಿಶ್ ಮೌದ್ಗಿಲ್ ಅವರನ್ನು 2003 ರಲ್ಲಿ ಡಿ. ರೂಪಾ ವಿವಾಹವಾದರು. ಮುನಿಶ್ ಮೌದ್ಗಿಲ್ ಅವರು IIT ಬಾಂಬೆಯ ಹಳೆಯ ವಿದ್ಯಾರ್ಥಿ. ಈ ದಂಪತಿಗೆ ಅನಘಾ ಮೌದ್ಗಿಲ್ ಮತ್ತು ರುಶಿಲ್ ಮೌದ್ಗಿಲ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಪದವಿ ಶಿಕ್ಷಣವನ್ನು ಕರ್ನಾಟಕ ಕುವೆಂಪು ವಿಶ್ವವಿದ್ಯಾನಿಲಯದಿಂದ ಚಿನ್ನದ ಪದಕದೊಂದಿಗೆ ಪೂರ್ಣಗೊಳಿಸಿದ ಡಿ. ರೂಪಾ, ಬಳಿಕ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ರೂಪಾ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪಾರಂಗತರಾಗಿದ್ದಾರೆ. ಅಷ್ಟೇ ಅಲ್ಲದೆ ಭರತನಾಟ್ಯ ನೃತ್ಯಗಾರ್ತಿಯೂ ಹೌದು.
2018 ರ ಅಂತರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರಿಗೆ ಸ್ಫೂರ್ತಿ ನೀಡಲು ಸಂಗೀತ ವೀಡಿಯೊವನ್ನು ಕೂಡ ಬಿಡುಗಡೆ ಮಾಡಿದ್ದರು.
ಕಡಲ ಕಿನಾರೆಯಲ್ಲಿ ಜೋಡಿ ತೆಗೆಸಿಕೊಂಡ ಫೋಟೋಗಳನ್ನು ನೀವು ನೋಡಿ.