ಡೊನಾಲ್ಡ್ ಟ್ರಂಪ್ ಉದ್ಘಾಟಿಸಲಿದ್ದಾರೆ ವಿಶ್ವದ ಈ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ

  • Feb 19, 2020, 19:53 PM IST

ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಗುಜರಾತ್ ನ ಅಹ್ಮದಾಬಾದ್ ನ ಮೋಟೆರಾ ಬಳಿ ಬಹುತೇಕ ತಲೆ ಎತ್ತಿದೆ. ಫೆಬ್ರುವರಿ 24ರಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಸ್ಟೇಡಿಯಂ ಅನ್ನು ಉದ್ಘಾಟಿಸಲಿದ್ದಾರೆ. ಬರುವ ಫೆಬ್ರವರಿ 24 ಮತ್ತು 25 ರಂದು ಡೊನಾಲ್ಡ್ ಟ್ರಂಪ್ ತಮ್ಮ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಲಿದ್ದಾರೆ.

1 /8

ಈ ಸ್ಟೇಡಿಯಂನ ಪಾರ್ಕಿಂಗ್ ವ್ಯವಸ್ಥೆ ಕೂಡ ತುಂಬಾ ವಿಶಾಲವಾಗಿದೆ. ಇದರಲ್ಲಿ ನೀವು 3000 ಕಾರ್ ಹಾಗೂ ಸುಮಾರು 10,000 ದ್ವಿಚಕ್ರ ವಾಹನಗಳನ್ನು ಪಾರ್ಕ್ ಮಾಡಬಹುದಾಗಿದೆ. ಇಲ್ಲಿ ಸ್ಕೈವಾಕ್ ಕೂಡ ನಿರ್ಮಿಸಲಾಗಿದ್ದು, ಅದನ್ನು ಬಳಸಿ ಪ್ರೇಕ್ಷಕರು ಮೆಟ್ರೋ ಸ್ಟೇಷನ್ ನಿಂದ ನೇರವಾಗಿ ಸ್ಟೇಡಿಯಂಗೆ  ಪ್ರವೇಶಿಸಬಹುದು.

2 /8

ಸರ್ದಾರ್ ಪಟೇಲ್ ಸ್ಟೇಡಿಯಂನ ವಿಶೇಷತೆ ಏನೆಂದರೆ, ಆಟದ ವೇಳೆ ಬೀಳುವ ಆಕಸ್ಮಿಕ ಮಳೆಯ ಬಳಿಕ ಕೇವಲ ಅರ್ಧ ಗಂಟೆಯಲ್ಲಿಯೇ ಈ ಮೈದಾನವನ್ನು ಪುನಃ ಆಟಕ್ಕೆ ಸಿದ್ಧಪಡಿಸಬಹುದು.

3 /8

ಈ ಸ್ಟೇಡಿಯಂನಲ್ಲಿ ಎರಡು ಪ್ರ್ಯಾಕ್ಟಿಸ್  ಗ್ರೌಂಡ್, ಇನ್ಡೋರ್ ಪ್ರ್ಯಾಕ್ಟಿಸ್ ಪಿಚ್, ಬ್ಯಾಡ್ಮಿಂಟನ್-ಟೆನಿಸ್ ಕೋರ್ಟ್, ಸ್ಕಾಸ್ ಎರೆನಾ, ಟೇಬಲ್ ಟೆನ್ನಿಸ್ ಎರೆನಾ, 3D ಪ್ರಾಜೆಕ್ಟರ್ ಥಿಯೇಟರ್ ಹಾಗೂ 53 ಕ್ಯಾಮೇರಾಗಲಿರುವ ಒಂದು ಕ್ಲಬ್ ಹೌಸ್ ಕೂಡ ನಿರ್ಮಿಸಲಾಗಿದೆ.

4 /8

ಈ ಕ್ರೀಡಾಂಗಣ ಒಟ್ಟು 63 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಈ ಸ್ಟೇಡಿಯಂಗೆ ಒಟ್ಟು ಮೂರು ಪ್ರವೇಶ ದ್ವಾರಗಳಿದ್ದು, 75 ಕಾರ್ಪೋರೆಟ್ ಬಾಕ್ಸ್, 1 ಸ್ವಿಮ್ಮಿಂಗ್ ಪೂಲ್, 4 ಡ್ರೆಸ್ಸಿಂಗ್ ರೂಮ್ ಗಳಿವೆ. ಈ ಸ್ಟೇಡಿಯಂನಲ್ಲಿ ಫ್ಲಡ್ ಲೈಟ್ ಗಳ ಬದಲಾಗಿ LED ದೀಪಗಳನ್ನು ಬಳಸಲಾಗಿದೆ. ಈ LED ಲೈಟ್ ಗಳು ಆಂಟಿ-ಬ್ಯಾಕ್ಟೀರಿಯಲ್ ದೀಪಗಳಾಗಿವೆ. ಅಷ್ಟೇ ಅಲ್ಲ ಇಲ್ಲಿ ಫೈರ್ ಪ್ರೂಫ್ ಕೆನೋಪಿಗಳನ್ನೂ ಸಹ ಅಳವಡಿಸಲಾಗಿದೆ.

5 /8

ಸರ್ದಾರ್ ವಲ್ಲಭೈ ಪಟೇಲ್ ಹೆಸರಿನ ಈ ಕ್ರೀಡಾಂಗಣದ ಭಾವಚಿತ್ರಗಳನ್ನು ICC ಹಂಚಿಕೊಂಡಿದ್ದು, "ಮೊಟೆರಾ ಕ್ರೀಡಾಂಗಣ ಬಹುತೇಕ ನವನಿರ್ಮಾಣಗೊಂಡಿದ್ದು, ಈ ಕ್ರೀಡಾಂಗಣದ ಹೊಚ್ಚ ಹೊಸ ಫೋಟೋಗಳು ಮತ್ತು ಒಟ್ಟು 1.10ಲಕ್ಷ ಕ್ರೀಡಾಭಿಮಾನಿಗಳು ಏಕಕಾಲಕ್ಕೆ ಕೂರುವ ಕ್ಷಮತೆ ಇದು ಹೊಂದಿದೆ" ಎಂದು ಬರೆದುಕೊಂಡಿದೆ.

6 /8

ಡಿಸೆಂಬರ್ 2016ರಲ್ಲಿ ಲಾರ್ಸೆನ್ ಅಂಡ್ ಟರ್ಬೋ ಕಂಪನಿ ಈ ಕ್ರೀಡಾಂಗಣದ ಪುನರ್ನಿರ್ಮಾಣದ ಕೆಲಸ ಆರಂಭಿಸಿತ್ತು. ಅಂದು ಈ ಕ್ರೀಡಾಂಗಣದ ನಿರ್ಮಾಣಕ್ಕಾಗಿ 7 ಬಿಲಿಯನ್ ಬಜೆಟ್ ನಿರ್ಧರಿಸಲಾಗಿತ್ತು.

7 /8

ವರ್ಷ 2015ರಲ್ಲಿ ಈ ಸ್ಟೇಡಿಯಂನ ಪುನರ್ನಿರ್ಮಾಣದ ಕಾರ್ಯ ಆರಂಭಗೊಂಡಿತ್ತು. ಇದೇ ಸಂದರ್ಭದಲ್ಲಿ ಈ ಕ್ರೀಡಾಂಗಣದ ಹೆಸರನ್ನು ಸರ್ದಾರ್ ಪಟೇಲ್ ಸ್ಟೇಡಿಯಂ ಎಂದು ಪುನರ್ನಾಮಕರಣ ಮಾಡಲಾಗಿದೆ. ಈ ಸ್ಟೇಡಿಯಂ ಅನ್ನು ಧ್ವಂಸಗೊಳಿಸಿ, ಮತ್ತೊಮ್ಮೆ ಕಟ್ಟಡ ಕಾಮಗಾರಿ ಆರಂಭಿಸಲಾಯಿತು. ಕಳೆದ ವರ್ಷವೇ ಈ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡಿದೆ, ಆದರೆ, ತನ್ನ ನಿರ್ಧಾರಿತ ಒಂದು ವರ್ಷದ ಬಳಿಕ ಇದು ಸಿದ್ಧಗೊಂಡಿದೆ.

8 /8

ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಿರ್ಮಾಣಗೊಂಡ ಈ ಕ್ರೀಡಾಂಗಣಕ್ಕೆ ಸರ್ದಾರ್ ಪಟೇಲ್ ಸ್ಟೇಡಿಯಂ ಎಂದು ಹೆಸರಿಸಲಾಗಿದೆ. ಮೊದಲು ಇದು ಮೊಟೆರಾ ಸ್ಟೇಡಿಯಂ ಹೆಸರಿನಿಂದ ಕರೆಯಲ್ಪಡುತ್ತಿತ್ತು ಹಾಗೂ ಇದು ಸುಮಾರು 49 ಸಾವಿರ ಪ್ರೇಕ್ಷಕರ ಕ್ಷಮತೆ ಹೊಂದಿತ್ತು. 1982ರಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿತ್ತು. ಸಾಬರಮತಿ ನದಿಯ ಕಡಲು ತೀರದಲ್ಲಿ ನಿರ್ಮಾಣಗೊಂಡಿದ್ದ ಈ ಕ್ರೀಡಾಂಗಣದ ನಿರ್ಮಾಣಕ್ಕಾಗಿ ಅಂದಿನ ಗುಜರಾತ್ ಸರ್ಕಾರ ಸುಮಾರು 50ಕೋಟಿ ರೂ.ಹಣ ವೆಚ್ಚ ಮಾಡಿತ್ತು.