Dying Tulsi Plant: ಹಿಂದೂ ಧರ್ಮದಲ್ಲಿ ತುಳಸಿಯನ್ನು ಒಂದು ಪವಿತ್ರ ಗಿಡ ಎಂದು ಭಾವಿಸಲಾಗಿದೆ. ಮನೆಯಲ್ಲಿ ಸಕಾರಾತ್ಮಕ ಹಾಗೂ ಶುದ್ಧ ವಾತಾವರಣವನ್ನುಂಟು ಮಾಡುವ ಸಸ್ಯಗಳಲ್ಲಿ ತುಳಸಿ ಕೂಡ ಒಂದು. ತುಳಸಿಯನ್ನು ಹಣಕಾಸಿನ ಅಧಿದೇವತೆ ತಾಯಿ ಲಕ್ಷ್ಮಿಯ ಸ್ವರೂಪ ಎಂದು ಭಾವಿಸಲಾಗಿದೆ.
Dying Tulsi Plant: ಹಿಂದೂ ಧರ್ಮದಲ್ಲಿ ತುಳಸಿಯನ್ನು ಒಂದು ಪವಿತ್ರ ಗಿಡ ಎಂದು ಭಾವಿಸಲಾಗಿದೆ. ಮನೆಯಲ್ಲಿ ಸಕಾರಾತ್ಮಕ ಹಾಗೂ ಶುದ್ಧ ವಾತಾವರಣವನ್ನುಂಟು ಮಾಡುವ ಸಸ್ಯಗಳಲ್ಲಿ ತುಳಸಿ ಕೂಡ ಒಂದು. ತುಳಸಿಯನ್ನು ಹಣಕಾಸಿನ ಅಧಿದೇವತೆ ತಾಯಿ ಲಕ್ಷ್ಮಿಯ ಸ್ವರೂಪ ಎಂದು ಭಾವಿಸಲಾಗಿದೆ. ಶ್ರೀವಿಷ್ಣುವಿನ ಪೂಜೆಯ ಹೊರತುಪಡಿಸಿ ತುಳಸಿಯ ಪೂಜೆ ಅಪೂರ್ಣ ಎಂದು ಭಾವಿಸಲಾಗುತ್ತದೆ. ಈ ಸಸ್ಯ ಹಲವು ರೋಗಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಅಷ್ಟೇ ಅಲ್ಲ ಮನೆಯಲ್ಲಿರುವ ತುಳಸಿ ಸಸ್ಯ ಭವಿಷ್ಯದ ಹಲವು ಸಂಗತಿಗಳತ್ತ ಶುಭ ಹಾಗೂ ಅಶುಭ ಸಂಕೇತಗಳನ್ನು ನೀಡುತ್ತದೆ. ಬನ್ನಿ ಈ ಕುರಿತು ತಿಳಿದುಕೊಳ್ಳೋಣ.
ಇದನ್ನೂ ಓದಿ-New Year 2023: ಹೊಸ ವರ್ಷದ ಮೊದಲ ದಿನವೇ ನಿರ್ಮಾಣಗೊಳ್ಳುತ್ತಿದೆ ಈ ಅದ್ಭುತ ಯೋಗ, ಯಾರಿಗೆ ಲಾಭ?
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಹಿಂದೂ ಧರ್ಮದಲ್ಲಿ ತುಳಸಿ ಗಿಡದ ಪೂಜೆಯ ವಿಧಾನವನ್ನು ವಿಸ್ತೃತವಾಗಿ ಉಲ್ಲೇಖಿಸಲಾಗಿದೆ. ತುಳಸಿ ಪೂಜೆಯ ವೇಳೆ ಸಾಕಷ್ಟು ಕಾಳಜಿ ವಹಿಸಬೇಕು. ಭಾನುವಾರ, ಏಕಾದಶಿ ಮತ್ತು ಗ್ರಹಣ ಹೊರತುಪಡಿಸಿ ನಿಯಮಿತವಾಗಿ ತುಳಸಿ ಗಿಡಕ್ಕೆ ನೀರು ನೀಡಲಾಗುತ್ತದೆ. ನೀರಿನ ಕೊರತೆಯಿಂದ ತುಳಸಿ ಗಿಡ ಒಣಗುವುದು ಹಲವು ಬಾರಿ ಸಂಭವಿಸುತ್ತದೆ.
2. ಆದರೆ ಸರಿಯಾದ ಆರೈಕೆಯ ಹೊರತಾಗಿಯೂ ತುಳಸಿ ಸಸ್ಯವು ಒಣಗುತ್ತಿದ್ದರೆ, ನೀವು ಎಚ್ಚೆತ್ತುಕೊಳ್ಳಬೇಕು. ಇದು ಭವಿಷ್ಯದಲ್ಲಿ ದೊಡ್ಡ ತೊಂದರೆಗಳ ಸಂಕೇತವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಗ್ರಹವು ತುಳಸಿಗೆ ಸಂಬಂಧಿಸಿದೆ.ಬುಧ ಯಾರೊಬ್ಬರ ಮೇಲೆ ಮೇಲೆ ಕೆಟ್ಟ ಪರಿಣಾಮವನ್ನು ಬೀರಿದರೆ, ಮನೆಯಲ್ಲಿನ ತುಳಸಿ ಸಸ್ಯವು ಒಣಗಲು ಪ್ರಾರಂಭಿಸುತ್ತದೆ.
3. ತುಳಸಿ ಗಿಡ ಒಣಗಲು ಪಿತ್ರ ದೋಷವೂ ಒಂದು ಕಾರಣ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಸರಿಯಾದ ಆರೈಕೆಯ ಹೊರತಾಗಿಯೂ ನಿಮ್ಮ ಮನೆಯಲ್ಲಿ ತುಳಸಿ ಸಸ್ಯವು ಮತ್ತೆ ಮತ್ತೆ ಒಣಗುತ್ತಿದ್ದರೆ, ಅದು ಪಿತ್ರ ದೋಷವನ್ನು ಸೂಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದೆ ಜಗಳ ಹಾಗೂ ವ್ಯಾಜ್ಯಗಳು ಸಂಭವಿಸುತ್ತವೆ .
4. ತುಳಸಿ ಗಿಡವನ್ನು ಮನೆಯ ಛಾವಣಿಯ ಮೇಲೆ ಇಡಬೇಡಿ. ಹೀಗೆ ಮಾಡುವುದರಿಂದ ಜಾತಕದಲ್ಲಿ ಬುಧನ ಸ್ಥಾನ ದುರ್ಬಲವಾಗುತ್ತದೆ. ಬುಧನನ್ನು ಬುದ್ಧಿ, ಸಂಪತ್ತು ಮತ್ತು ವ್ಯವಹಾರದ ಗ್ರಹವೆಂದು ಪರಿಗಣಿಸಲಾಗಿದೆ.
5. ಹೊಸ ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಅದು ಕೆಲವೇ ದಿನಗಳಲ್ಲಿ ಒಣಗಿ ಉದುರಿದರೆ ಅದು ಪಿತೃದೋಷವನ್ನೂ ಸೂಚಿಸುತ್ತದೆ.