ಪ್ರತಿದಿನ ವೀಳ್ಯದೆಲೆ ತಿಂತೀರಾ..? ಹಾಗಿದ್ರೆ ಈ ಮಾರಕ ರೋಗಗಳಿಂದ ನೀವು ಸೇಫ್‌

Betel leaf health benefits : ವೀಳ್ಯದೆಲೆಯನ್ನು ಜಗಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ಹಿರಿಯರು ಹೇಳ್ತಾರೆ. ಏಕೆಂದರೆ ಇದು ಮಲಬದ್ಧತೆಯಿಂದ ಹಿಡಿದು ಮಧುಮೇಹದವರೆಗಿನ ಎಲ್ಲಾ ಕಾಯಿಲೆಗಳಿಗೂ ಈ ಪುಟ್ಟ ಎಲೆ ರಾಮಬಾಣ. ಹಾಗಾದರೆ ವೀಳ್ಯದೆಲೆ ತಿನ್ನುವುದರಿಂದ ಆಗುವ ಲಾಭಗಳೇನು..? ತಿಳಿಯೋಣ ಬನ್ನಿ...

Betel leaf : ಆಯುರ್ವೇದದಲ್ಲಿ ವೀಳ್ಯದೆಲೆಗೆ ವಿಶೇಷ ಮಹತ್ವವಿದೆ. ಈ ಎಲೆಯು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಇದು ಅನೇಕ ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗಾದರೆ ನಿತ್ಯವೂ ವೀಳ್ಯದೆಲೆ ತಿನ್ನುವುದರಿಂದ ಆಗುವ ಲಾಭಗಳೇನು ಎಂಬುದನ್ನು ಅರಿತುಕೊಳ್ಳೋಣ...
 

1 /6

ವೀಳ್ಯದೆಲೆಯು ಗ್ಯಾಸ್ಟ್ರೋಪ್ರೊಟೆಕ್ಟಿವ್ ಗುಣಗಳನ್ನು ಹೊಂದಿದ್ದು, ಇದು ಗ್ಯಾಸ್ಟ್ರಿಕ್ ಅಲ್ಸರ್ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಅಲ್ಸರ್ ರೋಗಿಗಳಿಗೆ ಪ್ರಯೋಜನಕಾರಿ.  

2 /6

ವೀಳ್ಯದೆಲೆಯನ್ನು ಪ್ರತಿದಿನ ತಿನ್ನುವುದರಿಂದ ಶಿಲೀಂಧ್ರಗಳ ಸೋಂಕಿನಿಂದ ಪರಿಹಾರವನ್ನು ಪಡೆಯಬಹುದು. ಇದಕ್ಕೆ ಕಾರಣ ವೀಳ್ಯದೆಲೆಯಲ್ಲಿ ಹೈಡ್ರಾಕ್ಸಿಕಾವಿಕೋಲ್ ಎಂಬ ಜೈವಿಕ ಸಂಯುಕ್ತವಿದೆ.    

3 /6

ಪ್ರತಿದಿನ ವೀಳ್ಯದೆಲೆಯನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಧಿಕ ರಕ್ತದ ಸಕ್ಕರೆ ಹೊಂದಿದ್ದರೆ ವೀಳ್ಯದೆಲೆಯನ್ನು ನಿಯಮಿತವಾಗಿ ಅಗಿಯಿರಿ.    

4 /6

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದವರು ವೀಳ್ಯದೆಲೆಯನ್ನು ಸೇವಿಸಬಹುದು. ವೀಳ್ಯದೆಲೆಯಲ್ಲಿರುವ ಔಷಧೀಯ ಗುಣಗಳು ಮಲಬದ್ಧತೆಗೆ ಪರಿಹಾರ ನೀಡುತ್ತದೆ.    

5 /6

ವೀಳ್ಯದೆಲೆ ತಿಂದರೆ ತಲೆನೋವಿನಿಂದ ಉಪಶಮನ ಪಡೆಯಬಹುದು. ವೀಳ್ಯದೆಲೆಯು ನೋವು ನಿವಾರಕ ಗುಣಗಳನ್ನು ಹೊಂದಿದ್ದು ನೋವಿನಿಂದ ಉಪಶಮನವನ್ನು ನೀಡುತ್ತದೆ.    

6 /6

ಇಲ್ಲಿ ನೀಡಿರುವ ಮಾಹಿತಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯುವುದು ಒಳ್ಳೆಯದರು. ಈ ಮಾಹಿತಿಯನ್ನು ಜೀ ಕನ್ನಡ ನ್ಯೂಸ್‌ ಖಚಿತಪಡಿಸಿಲ್ಲ.