ವಿವಾಹವಾದ ನಾಲ್ಕೇ ವರ್ಷಕ್ಕೆ ತನಗಿಂತ 12 ವರ್ಷ ಹಿರಿಯ ನಿರ್ದೇಶಕನ ಜೊತೆ ಓಡಿ ಹೋದ ಪ್ರಸಿದ್ಧ ನಟಿ ಇವರು...! ಈಕೆಯ ತಂದೆಗೂ ಆಗಿತ್ತು 7 ಮದುವೆ

ಒಂದರ ಹಿಂದೆ ಒಂದರಂತೆ ಮ್ಯೂಸಿಕಲ್ ಹಿಟ್ ನೀಡಿದ ನಟಿ... ಕೇವಲ 14ನೇ ವಯಸ್ಸಿನಲ್ಲಿ ಫಿಲ್ಮ್ ಫೇರ್ ಮ್ಯಾಗಜೀನ್ ಮುಖಪುಟದಲ್ಲಿ ಸ್ಥಾನ ಪಡೆದುಕೊಂಡ ತಾರೆ... ಆಕೆಯ ಸಾಂಪ್ರದಾಯಿಕ ಮುಗ್ಧ ಮುಖ ಮತ್ತು ಸುಂದರವಾದ ದೊಡ್ಡ ಕಣ್ಣುಗಳು ಎಲ್ಲರನ್ನೂ ಆಕರ್ಷಿಸಿದ್ದು ಸುಳ್ಳಲ್ಲ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /10

2 /10

ಆದರೆ ಆಕೆ ತನ್ನ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ತನ್ನ ವೈಯಕ್ತಿಕ ಜೀವನದಿಂದಲೇ ಮುಖ್ಯಾಂಶಗಳಲ್ಲಿ ಉಳಿದುಬಿಟ್ಟಳು! ಅಷ್ಟಕ್ಕೂ ನಾವಿಂದು ಮಾತನಾಡುತ್ತಿರುವುದು ವಿನೋದ್ ಮೆಹ್ರಾ ಅವರ ಎರಡನೇ ಪತ್ನಿ ಬಿಂದಿಯಾ ಗೋಸ್ವಾಮಿ ಬಗ್ಗೆ.    

3 /10

ಬಿಂದಿಯಾ ಗೋಸ್ವಾಮಿ ಅವರ ತಂದೆ ಕೂಡ 7 ಬಾರಿ ಮದುವೆಯಾಗಿದ್ದರು. ಇನ್ನೊಂದೆಡೆ ಅವರು ಕೂಡ ಮನೆಯಿಂದ ಓಡಿಹೋಗಿ ಎರಡು ಮದುವೆಯಾಗಿದ್ದರು. ಮೊದಲ ಮದುವೆ ನಟನ ಜೊತೆ... ಎರಡನೇ ಮದುವೆ ತನಗಿಂತ 12 ವರ್ಷ ದೊಡ್ಡ ಸಿನಿಮಾ ಡೈರೆಕ್ಟರ್ ಜೊತೆ.   

4 /10

ರಾಜಸ್ಥಾನದ ಭರತ್‌ಪುರದಲ್ಲಿ ಜನಿಸಿದ ಬಿಂದಿಯಾ ಗೋಸ್ವಾಮಿ ಅವರ ತಂದೆಯ ಹೆಸರು ವೇಣು ಗೋಪಾಲ್ ಗೋಸ್ವಾಮಿ ಮತ್ತು ತಾಯಿಯ ಹೆಸರು ಡಾಲಿ. ಕೆಲವು ವರದಿಗಳ ಪ್ರಕಾರ ಬಿಂದಿಯಾ ತಂದೆ ತನ್ನ ಇಡೀ ಜೀವನದಲ್ಲಿ 7 ಮದುವೆಯಾಗಿದ್ದಾರೆ.   

5 /10

ಸಂಗೀತ ನಿರ್ದೇಶಕ ಪ್ಯಾರೆ ಲಾಲ್ ಜಿ ಅವರ ಮನೆ ಬಿಂದಿಯಾ ಅವರ ನೆರೆಯಲ್ಲಿತ್ತು. ಕುಟುಂಬ ಸಮೇತ ಅಲ್ಲಿ ಪಾರ್ಟಿಗೆ ಹೋದಾಗ, ನಟಿ ಹೇಮಾ ಮಾಲಿನಿ ಅವರ ತಾಯಿ ಜಯ ಚಕ್ರವರ್ತಿ ಅವರನ್ನು ಗಮನಿಸಿದರು. ಬಿಂದಿಯಾಳನ್ನು ನೋಡಿದಾಗ ತನ್ನ ಮಗಳು ಹೇಮಾಳಂತೆ ಕಾಣುತ್ತಾಳೆ ಎಂದು ಅವರಿಗೆ ಅನಿಸಿತು. ಇದೇ ಕಾರಣದಿಂದ ಕೇವಲ 14 ವರ್ಷ ವಯಸ್ಸಿನವರಾಗಿದ್ದಾಗ ಬಿಂದಿಯಾರನ್ನು ಕೆಲವು ಹೆಸರಾಂತ ನಿರ್ಮಾಪಕರಿಗೆ ಶಿಫಾರಸು ಮಾಡಿದರು.  

6 /10

ಕೇವಲ 14 ನೇ ವಯಸ್ಸಿನಲ್ಲಿ, ಕೆಲವು ನಿರ್ಮಾಪಕರು ಬಿಂದಿಯಾರನ್ನು ಸಂಪರ್ಕಿಸಿದರು. 1976 ರಲ್ಲಿ, ಅವರ ಮೊದಲ ಚಿತ್ರ 'ಜೀವನ್ ಜ್ಯೋತಿ' ಬಿಡುಗಡೆಯಾಯಿತು, ಅದರಲ್ಲಿ ವಿಜಯ್ ಅರೋರಾ ಜೊತೆಗೆ ನಟಿಸಿದರು. ಈ ಚಿತ್ರವು ಹಿಟ್‌ ಆಗದಿದ್ದರೂ ವಿಮರ್ಶಕರ ಮನಗೆದ್ದಿತ್ತು. ಇದರ ನಂತರ, 1978 ರಲ್ಲಿ  'ಖಟ್ಟಾ ಮೀಠಾ' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಹಿಟ್ ಆಯಿತು.  

7 /10

ಬಿಂದಿಯಾ ವಿನೋದ್ ಮೆಹ್ರಾ ಅವರೊಂದಿಗೆ ಅನೇಕ ಚಲನಚಿತ್ರಗಳನ್ನು ಮಾಡಿದ್ದಾರೆ.  ಅಂದಹಾಗೆ ಇವರ ಸ್ನೇಹ ಯಾವಾಗ ಪ್ರೀತಿಗೆ ತಿರುಗಿತು ಎಂಬುದು ಸಹ ತಿಳಿದಿರಲಿಲ್ಲ. ವಿನೋದ್ ತನ್ನ ಮೊದಲ ಪತ್ನಿಗೆ ಮೋಸ ಮಾಡಿ ಬಿಂದಿಯಾ ಜೊತೆ ಡೇಟಿಂಗ್ ಆರಂಭಿಸಿದ್ದ. ವಿನೋದ್ ಈಗಾಗಲೇ ಮದುವೆಯಾಗಿದ್ದರೂ ಸಹ  ತಲೆ ಕೆಡಿಸಿಕೊಳ್ಳದ ಬಿಂದಿಯಾ ಪ್ರೀತಿ ಮಾಡಿದ್ದರು, ಆದರೆ ಈ ಸುದ್ದಿ ಎಲ್ಲೆಡೆ ಹರಡಿ ವಿನೋದ್ ಪತ್ನಿಗೂ ತಲುಪಿತು.  

8 /10

ವಿಷಯಗಳು ಹದಗೆಡುತ್ತಿದ್ದಂತೆ, ಇಬ್ಬರೂ 1980 ರಲ್ಲಿ ರಹಸ್ಯವಾಗಿ ಮದುವೆಯಾಗಿ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಅವರ ಹತ್ತಿರದ ಸಂಬಂಧಿಯೊಬ್ಬರು ಬಹಿರಂಗಪಡಿಸಿದರು. ಶೂಟಿಂಗ್ ನೆಪದಲ್ಲಿ ಕೆಲವೊಮ್ಮೆ ಹೋಟೆಲ್‌ʼನಲ್ಲಿ ಮತ್ತು ಕೆಲವೊಮ್ಮೆ ಬೇರೆ ಸ್ಥಳದಲ್ಲಿ ರಹಸ್ಯವಾಗಿ ವಾಸಿಸುತ್ತಿದ್ದರು. ಆದರೆ, ಇದಾದ ಬಳಿಕ ವಿನೋದ್ ಮೆಹ್ರಾ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು.  

9 /10

ಈ ಅವಧಿಯಲ್ಲಿ ಬಿಂದಿಯಾ ಅವರಿಗೆ ವಿನೋದ್ ಮೆಹ್ರಾ ಅವರ ಮೊದಲ ಪತ್ನಿಯ ಸಹೋದರರು ಬೆದರಿಕೆ ಹಾಕಿದ್ದರು ಎಂದು ಹೇಳಲಾಗಿದೆ, ಇದರಿಂದಾಗಿ ಅವರು ಶೂಟಿಂಗ್‌ಗೆ ಹೋಗಲು ಸಹ ಸಾಧ್ಯವಾಗಲಿಲ್ಲ. ಆಗ ಅವರಿಗೆ ಆಸರೆಯಾಗಿ ಖ್ಯಾತ ನಿರ್ದೇಶಕ ಜೆ.ಪಿ.ದತ್ತಾ ಬಂದರು. ಬಿಂದಿಯಾ ತನ್ನ ವೈಯಕ್ತಿಕ ಸಮಸ್ಯೆಗಳಿಂದ ತೊಂದರೆಗೊಳಗಾದಾಗ, ಜೆಪಿ ದತ್ತಾ ಅವರ ಸಹವಾಸವನ್ನು ಆನಂದಿಸಲು ಪ್ರಾರಂಭಿಸಿದರು. ಕ್ರಮೇಣ ಬಿಂದಿಯಾ ಜೆಪಿ ದತ್ತಾ ಅವರೊಂದಿಗಿನ ಸಂಬಂಧದ ಸುದ್ದಿ ಸಾರ್ವಜನಿಕವಾಯಿತು. ವಿನೋದ್ ಮೆಹ್ರಾ ತನ್ನ ಮೊದಲ ಹೆಂಡತಿಗೆ ಹೇಗೆ ದ್ರೋಹ ಮಾಡಿದ್ದಾನೋ ಅದೇ ರೀತಿ ಬಿಂದಿಯಾ ವಿನೋದ್‌ಗೆ ದ್ರೋಹ ಬಗೆದಿದ್ದಳು ಎನ್ನಬಹುದು.  

10 /10

ವಿನೋದ್ ಮೆಹ್ರಾ ಅವರ ವಿವಾಹದ 4 ವರ್ಷಗಳ ನಂತರ, ಅಂದರೆ 1984 ರಲ್ಲಿ, ಇಬ್ಬರೂ ವಿಚ್ಛೇದನ ಪಡೆದರು. ವಿನೋದ್‌ʼನಿಂದ ಬೇರ್ಪಟ್ಟ ನಂತರ, 1985 ರಲ್ಲಿ ಜೆಪಿ ದತ್ತಾ ಅವರನ್ನು ಎರಡನೇ ಬಾರಿಗೆ ವಿವಾಹವಾದರು. ಆದರೆ ಈ ಮದುವೆಗೆ ಕುಟುಂಬ ಸದಸ್ಯರು ಸಿದ್ಧರಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಜೆಪಿ ದತ್ತಾ ಅವರ ವಯಸ್ಸು. ಬಿಂದಿಯಾ ಎರಡನೇ ಬಾರಿಗೆ ತನ್ನ ಕುಟುಂಬದ ವಿರುದ್ಧ ಹೆಜ್ಜೆಯಿಟ್ಟು ರಹಸ್ಯವಾಗಿ ಮದುವೆಯಾದರು.