ವಿಶ್ವ ಕ್ರಿಕೆಟ್‌ ಇತಿಹಾಸದಲ್ಲಿನ ಭಯಾನಕ ವೇಗದ ಬೌಲರ್‌ಗಳು ಯಾರು ಗೊತ್ತೆ..? ಇವರೇ ನೋಡಿ

World's Fastest bowler list : ವಿಶ್ವ ಕ್ರಿಕೆಟ್‌ನಲ್ಲಿ ಅಪಾಯಕಾರಿ ವೇಗದ ಬೌಲರ್‌ಗಳು ಇದ್ದಾರೆ. ಈ ಪೈಕಿ ಕೆಲವರು ವಿಶ್ವದ ವೇಗದ ಬೌಲರ್ ಎಂಬ ವಿಶ್ವದಾಖಲೆ ನಿರ್ಮಿಸಿದ್ದಾರೆ. ಶೋಯೆಬ್ ಅಖ್ತರ್, ಬ್ರೆಟ್ ಲೀ, ಶಾನ್ ಟೈಟ್, ಜೆಫ್ ಥಾಮ್ಸನ್ ಮತ್ತು ಮಿಚೆಲ್ ಸ್ಟಾರ್ಕ್ ಅಂತಹ ವೇಗದ ಬೌಲರ್‌ಗಳಲ್ಲಿ ಮೊದಲಿಗರು.

1 /5

ʼರಾವಲ್ಪಿಂಡಿ ಎಕ್ಸ್‌ಪ್ರೆಸ್ʼ ಶೋಯೆಬ್ ಅಖ್ತರ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲರ್. ಶೋಯೆಬ್ ಅಖ್ತರ್ 2003 ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ವೃತ್ತಿಜೀವನದ ಅತ್ಯಂತ ವೇಗದ ಬೌಲಿಂಗ್‌ ಮಾಡಿದರು. ಇದರ ವೇಗ ಗಂಟೆಗೆ 161.3 ಕಿಮೀ.

2 /5

ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಬ್ರೆಟ್ ಲೀ ಹೆಸರು 2ನೇ ಸ್ಥಾನದಲ್ಲಿದೆ. ಬ್ರೆಟ್ ಲೀ 2005 ರಲ್ಲಿ ಬ್ರಿಸ್ಬೇನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ವೃತ್ತಿಜೀವನದ ಅತ್ಯಂತ ವೇಗದ ಬೌಲಿಂಗ್‌ ಮಾಡಿದರು. ಇದರ ವೇಗ ಗಂಟೆಗೆ 161.1 ಕಿ.ಮೀ.

3 /5

ಆಸ್ಟ್ರೇಲಿಯಾದ ಶಾನ್ ಟೈಟ್ ವಿಶ್ವದ ಮೂರನೇ ವೇಗದ ಬೌಲರ್‌. ಟೈಟ್‌ ಇಂಗ್ಲೆಂಡ್ ವಿರುದ್ಧ ತಮ್ಮ ವೃತ್ತಿಜೀವನದ ಅತ್ಯಂತ ವೇಗದ ಬೌಲಿಂಗ್‌ ಮಾಡಿದ್ದಾರೆ. ಇದು ಗಂಟೆಗೆ 161.1 ಕಿ.ಮೀ. ಆದರೆ ಗಾಯದ ಕಾರಣದಿಂದಾಗಿ ಶಾನ್‌ ಟೈಟ್‌ ವೃತ್ತಿಜೀವನದಲ್ಲಿ ಹೆಚ್ಚು ಪ್ರಗತಿ ಸಾಧಿಸಲು ಸಾಧ್ಯವಾಗಲಿಲ್ಲ. 

4 /5

ವಿಶ್ವದ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ದಿಗ್ಗಜ ವೇಗದ ಬೌಲರ್ ಜೆಫ್ ಥಾಮ್ಸನ್ ಹೆಸರು ನಾಲ್ಕನೇ ಸ್ಥಾನದಲ್ಲಿದೆ. ಥಾಮ್ಸನ್ 1975 ರಲ್ಲಿ ಪರ್ತ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ವೃತ್ತಿಜೀವನದ ವೇಗದ ಬೌಲಿಂಗ್‌ ಮಾಡಿದರು. ಬೌಲಿಂಗ್ ವೇಗ ಗಂಟೆಗೆ 160.6 ಕಿ.ಮೀ ಇತ್ತು.  

5 /5

ಮಿಚೆಲ್ ಸ್ಟಾರ್ಕ್ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ವೇಗದ ಬೌಲರ್. ಮಿಚೆಲ್ ಸ್ಟಾರ್ಕ್ 2015 ರಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ವೃತ್ತಿಜೀವನದ ಅತ್ಯಂತ ವೇಗದ ಬೌಲಿಂಗ್‌ ಮಾಡಿದರು. 160.4 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡಿದರು.