close

News WrapGet Handpicked Stories from our editors directly to your mailbox

ಐಷಾರಾಮಿ ತೇಜಸ್‌ ಎಕ್ಸ್‌ಪ್ರೆಸ್‌ನಲ್ಲಿ ಸಿಗಲಿದೆ ವೆರೈಟಿ ಭೋಜನ, ಇಲ್ಲಿದೆ ಕಂಪ್ಲೀಟ್ ಮೆನು!

ತೇಜಸ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಯಾವುದೇ 5 ಸ್ಟಾರ್ ಹೋಟೆಲ್ ಗೆ ಕಡಿಮೆ ಇಲ್ಲದಂತೆ ಆಹಾರ ಸೌಲಭ್ಯವಿದೆ. ಪ್ರಯಾಣಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮೆನು ತಯಾರಿಸಲಾಗಿದೆ. 

Oct 4, 2019, 04:24 PM IST

ಲಕ್ನೋ: ದೇಶದ ಮೊಟ್ಟ ಮೊದಲ ಕಾರ್ಪೊರೇಟ್ ರೈಲಾದ ಭಾರತೀಯ ರೈಲ್ವೆಯ ತೇಜಸ್‌ ಎಕ್ಸ್‌ಪ್ರೆಸ್‌ ಗೆ ಇಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಸಿರು ನಿಶಾನೆ ತೋರಿದ್ದಾರೆ. ದೆಹಲಿ-ಲಕ್ನೋ ನಡುವೆ ಸಂಚರಿಸಲಿರುವ ಈ ಐಷಾರಾಮಿ ರೈಲು ಮಂಗಳವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ. ಲಕ್ನೋದಿಂದ ಬೆಳಿಗ್ಗೆ 6.10ಕ್ಕೆ ಹೊರಟು ಮಧ್ನಾಹ್ನ 12. 25ಕ್ಕೆ ನವದೆಹಲಿ ರೈಲು ನಿಲ್ದಾಣ ತಲುಪಲಿದೆ. ಅದೇ ರೀತಿ ಮಧ್ಯಾಹ್ನ 3.35ಕ್ಕೆ ದೆಹಲಿಯಿಂದ ಹೊರಟು ರಾತ್ರಿ 10.05ಕ್ಕೆ ಲಕ್ನೋ ತಲುಪಲಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ರೈಲಿನಲ್ಲಿ ಯಾವುದೇ 5 ಸ್ಟಾರ್ ಹೋಟೆಲ್ ಗೆ ಕಡಿಮೆ ಇಲ್ಲದಂತೆ ಆಹಾರ ಸೌಲಭ್ಯವಿದೆ. ಪ್ರಯಾಣಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮೆನು ತಯಾರಿಸಲಾಗಿದೆ. 

1/5

ಎರಡು ವರ್ಗಗಳಾಗಿ ಮೆನು ವಿಂಗಡಣೆ

ತೇಜಸ್ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ರುಚಿಕರವಾದ ಭೋಜನ ವುವಸ್ಥೆ ಮಾಡಲಾಗಿದೆ. ಆಸನ ಶೈಲಿಯಂತೆ, ಮೆನುವನ್ನೂ ಸಹ ಎರಡು ವಿಭಾಗಗಳಾಗಿ ವಿಂಗಡಿಸಿ ಎಕ್ಸಿಕ್ಯೂಟಿವ್ ಮತ್ತು ಚೇರ್ ಕಾರ್ ವಿಭಾಗಕ್ಕೆ ಪ್ರತ್ಯೇಕ ಮೆನು ಸಿದ್ಧಪಡಿಸಲಾಗಿದೆ.

2/5

ಮೆನುನಲ್ಲೇನಿದೆ?

ಚಹಾದ ಜೊತೆಗೆ, ನಾಲ್ಕು ವಿಧದ ಉಪಹಾರಗಳು ದೊರೆಯಲಿದ್ದು, ನಿಮಗೆ ಅಗತ್ಯವಾದದ್ದನ್ನು ಆಯ್ಕೆ ಮಾಡಬಹುದು. ಸಸ್ಯಾಹಾರಿ ಕಟ್ಲೆಟ್‌ಗಳು, ಅವಲಕ್ಕಿ, ಉತ್ತಪಮ್, ಶ್ಯಾವಿಗೆ, ರವೆ ಉಪ್ಪಿಟ್ಟು, ಬ್ರೆಡ್ ಆಮ್ಲೆಟ್‌ನೊಂದಿಗೆ ಬ್ರೌನ್ ಬ್ರೆಡ್, ಮೊಸರು, ಹಣ್ಣಿನ ಜ್ಯೂಸ್, ಕಾರ್ನ್ ಫ್ಲೇಕ್ಸ್ ಮತ್ತು ಹಾಲಿನೊಂದಿಗೆ ಅನೇಕ ಇತರ ಆಹಾರ ಪದಾರ್ಥಗಳನ್ನು ಉಪಾಹಾರದಲ್ಲಿ ಸೇರಿಸಲಾಗಿದೆ.  

3/5

ಸಂಜೆ ವಿಶೇಷ ಚಹಾ ಲಭ್ಯ

ತೇಜಸ್ ಎಕ್ಸ್ ಪ್ರೆಸ್ ನಲ್ಲಿ ಮಧ್ಯಾಹ್ನ ಸಹ ಚಹಾ ಮತ್ತು ಕಾಫಿಯೊಂದಿಗೆ ಪ್ರೀಮಿಯಂ ಕುಕೀಗಳನ್ನು ಆನಂದಿಸಬಹುದು. ಅಂತೆಯೇ, ನೀವು ವಿಶೇಷ ಚಹಾ, ಸಮೋಸಾ, ಹುರಿದ ಗೋಡಂಬಿ, ಬಾದಾಮಿ ಮತ್ತು ಮಫಿನ್‌ಗಳನ್ನು ಸಂಜೆ ಸವಿಯಬಹುದು.

4/5

ರಾತ್ರಿ ಕೂಡ ವಿಶೇಷ ಭೋಜನ

ರಾತ್ರಿ ಭೋಜನದ ಸಮಯದಲ್ಲೂ ಉತ್ತಮ ಖಾದ್ಯಗಳು ಲಭ್ಯವಿದ್ದು, ಸಸ್ಯಾಹಾರಿ ಸೂಪ್, ಪನೀರ್ ಟಿಕ್ಕಾ ಮಸಾಲ, ದಾಲ್ ತಡ್ಕಾ, ಆಲೂ ಭಾಜಿ, ತವಾ ರೊಟ್ಟಿ, ಲಚ್ತಾ ಪರೋಟ, ರುಚಿಯಾದ ಮೊಸರು ಮತ್ತು ಐಸ್‌ಕ್ರೀಮ್‌ಗಳ ಜೊತೆಗೆ ನಾನ್-ವೆಜ್ ಇಷ್ಟಪಡುವವರಿಗೆ ಚಿಕನ್ ಟಿಕ್ಕಾ ಮಸಾಲಾ ಕೂಡ ದೊರೆಯಲಿದೆ. 

5/5

ಪ್ರಯಾಣ ಟಿಕೆಟ್ ದರ ಎಷ್ಟು?

ಲಕ್ನೋದಿಂದ ನವದೆಹಲಿಗೆ ಟಿಕೆಟ್ ದರ ಎಸಿ ಚೇರ್ ಕಾರ್‌ಗೆ 1,125 ರೂ. ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್‌ಗೆ 2,310 ರೂ. ನಿಗದಿಪಡಿಸಲಾಗಿದೆ. ಅಂತೆಯೇ, ದೆಹಲಿಯಿಂದ ಲಕ್ನೋಗೆ ಪ್ರಯಾಣಿಸಲು ಎಸಿ ಚೇರ್ ಕಾರ್ ಟಿಕೆಟ್ 1280 ರೂ. ಮತ್ತು ಕಾರ್ಯನಿರ್ವಾಹಕ ಕುರ್ಚಿ ಕಾರಿನ ಬೆಲೆ 2450 ರೂ. ನಿಗದಿಯಾಗಿದೆ.