Ganesh Chaturthi 2022: ಗಣೇಶನ ವಿಗ್ರಹ ಖರೀದಿಸುವಾಗ ಈ ಸಂಗತಿಗಳನ್ನು ನೆನಪಿನಲ್ಲಿಡಿ... ಇಲ್ದಿದ್ರೆ?

Ganesh Idol for Sthapana 2022: ಗಣೇಶ ಚತುರ್ಥಿಯ ಅಂಗವಾಗಿ ನೀವೂ ಕೂಡ ನಿಮ್ಮ ಮನೆಯಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಿದ್ದರೆ, ಈ ಸಂಗತಿಗಳನ್ನು ನೆನಪಿನಲ್ಲಿಡುವುದು ತುಂಬಾ ಮುಖ್ಯ. ಮನೆಯಲ್ಲಿ ಗಣಪತಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಹಿಂದೂ ಧರ್ಮ, ಶಾಸ್ತ್ರ, ವಾಸ್ತು ಶಾಸ್ತ್ರಗಳಲ್ಲಿ ಕೆಲ ಮಹತ್ವದ ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳನ್ನು ಪಾಲಿಸದೆ ಹೋದಲ್ಲಿ ಶುಭ ಫಲಗಳ ಬದಲಿಗೆ ಅಶುಭ ಫಲಗಳು ಪ್ರಾಪ್ತಿಯಾಗುತ್ತವೆ. 

Ganesh Idol for Sthapana 2022: ಗಣೇಶ ಚತುರ್ಥಿಯ ಅಂಗವಾಗಿ ನೀವೂ ಕೂಡ ನಿಮ್ಮ ಮನೆಯಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಿದ್ದರೆ, ಈ ಸಂಗತಿಗಳನ್ನು ನೆನಪಿನಲ್ಲಿಡುವುದು ತುಂಬಾ ಮುಖ್ಯ. ಮನೆಯಲ್ಲಿ ಗಣಪತಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಹಿಂದೂ ಧರ್ಮ, ಶಾಸ್ತ್ರ, ವಾಸ್ತು ಶಾಸ್ತ್ರಗಳಲ್ಲಿ ಕೆಲ ಮಹತ್ವದ ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳನ್ನು ಪಾಲಿಸದೆ ಹೋದಲ್ಲಿ ಶುಭ ಫಲಗಳ ಬದಲಿಗೆ ಅಶುಭ ಫಲಗಳು ಪ್ರಾಪ್ತಿಯಾಗುತ್ತವೆ. ಈ ವರ್ಷ ಆಗಸ್ಟ್ 31 ರಂದು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನ ಶುಭ ಮುಹೂರ್ತದಲ್ಲಿ ಮನೆ-ಮನೆಗಳಲ್ಲಿ ಗಣೇಶ ಚತುರ್ಥಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. 

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ಓದಿ-ಗಣೇಶ ಚತುರ್ಥಿ ನಂತರ ಈ ರಾಶಿಯವರ ಮೇಲೆ ವಿಶೇಷ ಕೃಪೆ ಹರಿಸಲಿದ್ದಾಳೆ ಮಹಾ ಲಕ್ಷ್ಮೀ

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1. ನೃತ್ಯ ಮಾಡುತ್ತಿರುವ ಗಣೇಶನ ವಿಗ್ರಹವನ್ನು ತರಬೇಡಿ - ಮನೆಗೆ ಎಂದಿಗೂ ಕೂಡ ನೃತ್ಯ ಮಾಡುತ್ತಿರುವ ಗಣೇಶನ ವಿಗ್ರಹವನ್ನು ತರಬೇಡಿ. ಇಂತಹ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಥಾಪಿಸುವುದರಿಂದ ಮನೆಯಲ್ಲಿ ಕ್ಲೇಶ-ಕಲಹಗಳು ಉಂಟಾಗುತ್ತವೆ. ಅಷ್ಟೇ ಅಲ್ಲ ಇಂತಹ ಮೂರ್ತಿಯನ್ನು ಯಾರಿಗೂ ಕೂಡ ಉಡುಗೊರೆಯ ರೂಪದಲ್ಲಿ ಕೊಡಬೇಡಿ.  

2 /6

2. ಎಡಭಾಗದಲ್ಲಿ ಗಣೇಶನ ಸೊಂಡಿಲು - ಮನೆಗೆ ಗಣೇಶನ ವಿಗ್ರಹವನ್ನು ಖರೀದಿಸಿ ತರುವಾಗ ಗಣೇಶನ ಸೊಂಡಿ ಎಡಭಾಗಕ್ಕೆ ಇರಬೇಕು ಎಂಬುದನ್ನು ನೆನಪಿನಲ್ಲಿಡಿ. ಬಲಭಾಗದಲ್ಲಿ ಸೊಂಡಿಲು ಇರುವ   ಗಣೇಶನ ವಿಗ್ರಹವನ್ನು ಪೂಜಿಸುವಲ್ಲಿ ವಿಶೇಷ ನಿಯಮಗಳನ್ನು ಅನುಸರಿಸಬೇಕು. ಹೀಗಾಗಿ ಅಂತಹ ವಿಗ್ರಹವನ್ನು ಮನೆಯಲ್ಲಿ ಪ್ರತಿಷ್ಠಾಪಿಸುವುದನ್ನು ತಪ್ಪಿಸಿ.  

3 /6

3. ಸೇಡಿ ಮಣ್ಣಿನ ಮೂರ್ತಿಯನ್ನು ಮಾತ್ರ ಪ್ರತಿಷ್ಠಾಪಿಸಿ - ಗಣೇಶನ ವಿಗ್ರಹ ಖರೀದಿಸುವಾಗ ಆ ವಿಗ್ರಹ ಸೇಡಿ ಮಣ್ಣಿನಿಂದ ತಯಾರಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಏಕೆಂದರೆ, ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಅಶುದ್ಧ ಸಾಮಗ್ರಿಗಳಿಂದ ತಯಾರಿಸಲಾಗಿರುವ ಮನೆಯಲ್ಲಿ ಪ್ರತಿಸ್ಥಾಪಿಸುವುದು ಅಶುಭ. ಇಕೋ ಫ್ರೆಂಡ್ಲಿ ವಿಗ್ರಹ ಪ್ರತಿಷ್ಠಾಪಿಸುವುದು ಇನ್ನೂ ಉತ್ತಮ. ಸ್ಥಳೀಯ ಮಾರುಕಟ್ಟೆ ಅಥವಾ ಆನ್ಲೈನ್ ಮಾರುಕಟ್ಟೆಯಿಂದಲೂ ಕೂಡ ನೀವು ಪರಿಸರ ಸ್ನೇಹಿ ಗಣೇಶ ವಿಗ್ರಹವನ್ನು ಖರೀದಿಸಬಹುದು.

4 /6

4. ವಿರಾಜಮಾನನಾಗಿರುವ ಗಣೇಶನ ವಿಗ್ರಹವಿರಲಿ - ಯಾವಾಗಲು ವಿರಾಜಮಾನ ಸ್ಥಿತಿಯಲ್ಲಿರುವ ಗಣೇಶನ ಮೂರ್ತಿಯನ್ನು ಮನೆಗೆ ತಂದು ಪ್ರತಿಷ್ಠಾಪಿಸುವುದು ಉತ್ತಮ. ಕಚೇರಿಗಳಲ್ಲಿ ನಿಂತಿರುವ ಗಣೇಶನ ವಿಗ್ರಹ ಪ್ರತಿಷ್ಠಾಪಿಸುವುದು ಉತ್ತಮ. 

5 /6

5. ಈ ಜಾಗಗಳಲ್ಲಿ ಮೂರ್ತಿ ಪ್ರತಿಷ್ಠಾಪಾನೇ ಬೇಡ - ಗಣೇಶನ ವಿಗ್ರಹವನ್ನು ಮನೆಯಲ್ಲಿ ಸಿಕ್ಕ ಸಿಕ್ಕ ಜಾಗದಲ್ಲಿ ಪ್ರತಿಷ್ಠಾಪಿಸಬೇಡಿ. ಸ್ನಾನಗೃಹದ ಬಳಿ ಅಥವಾ ಬೆಡ್ ರೂಮ್ ನಲ್ಲಿ ಗಣೇಶನ ವಿಗ್ರಹವನ್ನು ಮರೆತೂ ಕೂಡ ಪ್ರತಿಷ್ಠಾಪಿಸಬೇಡಿ. ಇದು ಜೀವನದಲ್ಲಿ ಸಾಕಷ್ಟು ಸಂಕಷ್ಟಗಳಿಗೆ ಕಾರಣವಾಗುತ್ತದೆ.  

6 /6

6. ಸಂತಾನ ಪ್ರಾಪ್ತಿಗಾಗಿ ಬಾಲಗಣೇಶನ ವಿಗ್ರಹವನ್ನು ಮನೆಗೆ ತನ್ನಿ - ಸಂತಾನ ಸುಖ ಪಡೆಯಲು ಬಯಸುವ ಜಾತಕದವರು ಗಣೇಶನ ಬಾಲ ಸ್ವರೂಪಿ ವಿಗ್ರಹವನ್ನು ಮನೆಗೆ ತರಬೇಕು. ಹೀಗೆ ಮಾಡುವುದರಿಂದ ಸಂತಾನ ಪ್ರಾಪ್ತಿಯ ನಿಮ್ಮ ಬಯಗೆ ಶೀಘ್ರದಲ್ಲಿಯೇ ಈಡೇರಲಿದೆ.