ಗೋಲ್ಡನ್ ಗರ್ಲ್ ಅಮೂಲ್ಯ B'Day PHOTOS

ಸ್ಯಾಂಡಲ್ ವುಡ್ ನಟಿ, ಚೆಲುವಿನ ಚಿತ್ತಾರದ ಬೆಡಗಿ ಗೋಲ್ಡನ್ ಗರ್ಲ್ ಅಮೂಲ್ಯ ಜಗದೀಶ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 

Yashaswini V | Sep 14, 2018, 03:52 PM IST

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅವರ ನಿವಾಸದಲ್ಲಿ ಅಮೂಲ್ಯ, ಪತಿ, ಮನೆಯವರು ಹಾಗೂ ಅಭಿಮಾನಿಗಳ ನಡುವೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

1/7

ಅಮೂಲ್ಯ 1993 ಸೆಪ್ಟೆಂಬರ್ 14 ರಂದು ಬೆಂಗಳೂರಿನಲ್ಲಿ ಜನಿಸಿದರು. 2001ರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ಪರ್ವ' ಚಿತ್ರದಲ್ಲಿ ಅಮೂಲ್ಯ ಮೊದಲ ಬಾರಿಗೆ ಬಾಲನಟಿಯಾಗಿ ಅಭಿನಯಿಸಿದರು. 

2/7

ನಂತರ ಹಲವು ಚಿತ್ರಗಳಲ್ಲಿ ಬಾಲ ನಟಿಯಾಗಿಯೇ ಕಾಣಿಸಿಕೊಂಡಿದ್ದ ಅಮೂಲ್ಯ 2007ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಚಿತ್ರದಲ್ಲಿ ನಟಿಯಾಗಿ ಕಾಣಿಸಿಕೊಂಡರು.

3/7

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅವರ ನಿವಾಸದಲ್ಲಿ ಅಮೂಲ್ಯ, ಪತಿ, ಮನೆಯವರು ಹಾಗೂ ಅಭಿಮಾನಿಗಳ ನಡುವೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

4/7

ಪತಿ ಜಗದೀಶ್ ಅವರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಅಮೂಲ್ಯ

5/7

ಚಿಕನ್ ಎಂದರೆ ಬಾಯ್ ಚಪ್ಪರಿಸುವ ಮೌಲ್ಯ ಹುಟ್ಟು ಹಬ್ಬಕ್ಕಾಗಿ ಕೇಕ್ ಮಧ್ಯದಲ್ಲಿ ಚಿಕನ್ ಡಿಸೈನ್ ಇರುವಂತೆ ಕೇಕ್ ಮಾಡಿಸಲಾಗಿತ್ತು.

6/7

ಪರ್ವ, ಚಂದು, ಲಾಲಿ ಹಾಡು, ಮಹಾರಾಜ, ಮಂಡ್ಯ, ಕಲ್ಲರಳಿ ಹೂವಾಗಿ, ತನನಂ ತನನಂ, ನಮ್ಮ ಬಸವ ಮುಂತಾದ ಚಿತ್ರಗಳಲ್ಲಿ ಅಮೂಲ್ಯ ಬಾಲನಟಿಯಾಗಿ ಅಭಿನಯಿಸಿದ್ದಾರೆ.  

7/7

ಈ ಎಲ್ಲಾ ಫೋಟೋಗಳನ್ನೂ Facebook ನಿಂದ ತೆಗೆದುಕೊಳ್ಳಲಾಗಿದೆ