Health Benefits of Cucumber: ಸೌತೆಕಾಯಿ ಸೇವನೆಯ ಅದ್ಭುತ ಪ್ರಯೋಜನಗಳು

Amazing Health Benefits of Cucumber: ಸೌತೆಕಾಯಿ ರಸವನ್ನು ಸನ್‌ಬರ್ನ್ ಆಗಿರುವ ಜಾಗದಲ್ಲಿ ಹಚ್ಚಿದರೆ ಕಲೆ ಮಾಯವಾಗುತ್ತದೆ. ಇದರ ಜೊತೆಗೆ ನಿಮ್ಮ ಚರ್ಮದ ಮೈ ಬಣ್ಣ ಹೊಳೆಯುವಂತೆ ಮಾಡಲು ಸಹಕಾರಿಯಾಗಿದೆ.

ಸೌತೆಕಾಯಿ ತಿನ್ನುವುದರ ಪ್ರಯೋಜನಗಳು: ಬೇಸಿಗೆಯ ಬಿಸಿಲಿನ ಧಗೆಯ ಹೊಡೆತಕ್ಕೆ ದೇಶದ ಜನರು ತತ್ತರಿಸಿ ಹೋಗಿದ್ದಾರೆ. ಬೇಸಿಗೆಯಲ್ಲಿ ನಿರ್ಜಲೀಕರಣ, ಅತಿಯಾದ ಬೆವರು, ಹಸಿವಾಗದಿರುವುದು, ತ್ವಚೆಯ ಸಮಸ್ಯೆ, ಆಯಾಸ ಸೇರದಂತೆ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹೀಗಾಗಿ ಬಿಸಿಲಿನ ಹೊಡೆತ ತಪ್ಪಿಸಿಕೊಳ್ಳಲು ಜನರು ತಂಪು ಪಾನೀಯಗಳು, ತರಕಾರಿಗಳತ್ತ ಮೊರೆ ಹೋಗುತ್ತಿದ್ದಾರೆ. ಬೇಸಿಗೆಯ ಧಗೆಯಲ್ಲಿ ತಂಪು ಮಾಡಿಕೊಳ್ಳಲು ನಿಮಗೆ ಸೌತೆಕಾಯಿ ಉತ್ತಮ ಆಯ್ಕೆಯಾಗಿದೆ. ಸೌತೆಕಾಯಿಯ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಸೌತೆಕಾಯಿಯಲ್ಲಿ ಸುಮಾರು ಶೇ.95ರಷ್ಟು ನೀರು ಇರುತ್ತದೆ. ಸೌತೆಕಾಯಿಯಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ. ಫೈಬರ್​ಗಳು ಮಲಬದ್ಧತೆ ತಡೆಯಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ. ಸೌತೆಕಾಯಿಯು ಬೀಟಾ-ಕ್ಯಾರೋಟಿನ್‌ನಂತಹ ಆ್ಯಂಟಿ ಆಕ್ಸಿಡೆಂಟ್​ಗಳಲ್ಲಿ ಸಮೃದ್ಧವಾಗಿದೆ.

2 /5

ಸೌತೆಕಾಯಿ ನಿಮ್ಮ ದೇಹಕ್ಕೆ ನಿರ್ಜಲೀಕರಣ ಅಂದರೆ Dehydration ಆಗದಂತೆ ನೋಡಿಕೊಳ್ಳುತ್ತದೆ. ಸೌತೆಕಾಯಿಯಲ್ಲಿ ಶೇ.95 ರಷ್ಟುನೀರಿನಂಶವಿದ್ದು, ಇದು ನಿಮ್ಮ ದೇಹದಲ್ಲಿ ಹೆಚ್ಚು ನೀರಿನಂಶ ಇರುವಂತೆ ನೋಡಿಕೊಳ್ಳುತ್ತದೆ.

3 /5

ಸೌತೆಕಾಯಿಯಲ್ಲಿ ಪೌಷ್ಠಿಕಾಂಶಗಳು ಹೇರಳವಾಗಿವೆ. ಫೈಬರ್, ಪೊಟ್ಯಾಷಿಯಂ ಹಾಗೂ ಮೆಗ್ನೀಷಿಯಂ ಕೂಡ ಹೆಚ್ಚಾಗಿದೆ. ಈ ಎಲ್ಲಾ ಪೌಷ್ಠಿಕಾಂಶಗಳು ರಕ್ತದೊತ್ತಡ ಕಡಿಮೆ ಮಾಡುತ್ತದೆ ಮತ್ತು ಪೊಟ್ಯಾಷಿಯಂ ಹಾಗೂ ನೀರಿನಂಶ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

4 /5

ಸೌತೆಕಾಯಿ ನೈಸರ್ಗಿಕವಾಗಿ ನಿಮ್ಮ ಚರ್ಮವನ್ನು ಪುನಶ್ಚೇತನಗೊಳಿಸುತ್ತದೆ. ಒಣಗಿದ ಚರ್ಮವಿದ್ದರೆ ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚಿಕೊಂಡರೆ ಉತ್ತಮ ಹೊಳಪು ನಿಮ್ಮದಾಗುತ್ತದೆ.  

5 /5

ಕಪ್ಪು ಕಲೆ ನಿವಾರಿಸಲು ಹಾಗೂ ಕಣ್ಣುಗಳ ಬಳಿಯ ಪಫ್ಫಿನೆಸ್ ಕಡಿಮೆ ಮಾಡಲು ಸೌತೆಕಾಯಿಯ ರಸವನ್ನು ಕಣ್ಣು ಸುತ್ತ ಹಚ್ಚಿಕೊಳ್ಳಿ. ನೈಸರ್ಗಿಕ ಸೌಂದರ್ಯ ಚಿಕಿತ್ಸೆಗಾಗಿ ಸೌತೆಕಾಯಿ ಉತ್ತಮ ಆಯ್ಕೆಯಾಗಿದೆ.