ನಿಮ್ಮ ದೇಹದ ಈ 4 ಭಾಗಗಳಲ್ಲಿ ನೋವಿದ್ದರೆ.. ಅದು ಖಂಡಿತ ಹೃದಯಾಘಾತದ.. ಸೂಚನೆ.. ಎಚ್ಚರ..!

Heart Attack symptoms : ಇತ್ತೀಚಿಗೆ ಹೃದ್ರೋಗ ಸಮಸ್ಯೆಗಳು ಹೆಚ್ಚುತ್ತಿವೆ. ಅಸಮರ್ಪಕ ಜೀವನಶೈಲಿಯಿಂದಾಗಿ ಜನರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ಕರೋನಾ ಲಸಿಕೆ ತೆಗೆದುಕೊಂಡನಂತರ ಭಾರತದಲ್ಲಿ ಹೃದ್ರೋಗ ಸಮಸ್ಯೆಯೂ ಹೆಚ್ಚಾಗಿ ಕಾಡುತ್ತಿದೆ. ಆದರೆ ಕೆಲವು ರೀತಿಯ ಆಹಾರ ಮತ್ತು ವ್ಯಾಯಾಮವನ್ನು ಅನುಸರಿಸಿ ಹೃದ್ರೋಗವನ್ನು ಕಡಿಮೆ ಮಾಡಬಹುದು.
 

1 /7

ಹೃದಯಾಘಾತಕ್ಕೆ ಒಳಗಾಗುವ ಮೊದಲು ಕೆಲವೊಂದಿಷ್ಟು ನೋವನ್ನು ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ಇವುಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಪ್ರಾಣಪಾಯ ಹೆಚ್ಚು. ಈ ರೋಗಲಕ್ಷಣಗಳನ್ನು ನೀವು ಮೊದಲೇ ಪತ್ತೆ ಹಚ್ಚಿದರೆ ಸಾವಿನ ದವಡೆಯಿಂದ ಪಾರಾಗಬಹುದು.. ದೇಹದ ಈ ನಾಲ್ಕು ಭಾಗಗಳಲ್ಲಿ ನೋವು ಕಾಣಿಸಿಕೊಂಡರೆ, ನೀವು ಶೀಘ್ರದಲ್ಲೇ ಹೃದಯಾಘಾತಕ್ಕೆ ಒಳಗಾಗುವಿರಿ ಎಂದು ಅರ್ಥ..  

2 /7

ದೇಹದಲ್ಲಿ ಈ ಕೆಳಗೆ ನೀಡಿರುವ ನೋವುಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇದರಿಂದ ಜೀವ ಉಳಿಯುತ್ತದೆ. ಹೃದ್ರೋಗ ಬರುವ ಭಾವನೆ ಎದೆನೋವು ಮಾತ್ರವಲ್ಲದೆ ನಮ್ಮ ದೇಹದ ಕೆಲವು ಭಾಗಗಳಲ್ಲಿ ಆರಂಭಿಕ ನೋವು ಕಾಣಿಸಿಕೊಳ್ಳುತ್ತದೆ. ಇದು ನಿಮ್ಮ ಹೃದ್ರೋಗದ ಅಪಾಯವನ್ನು ಮೊದಲೇ ಊಹಿಸುತ್ತದೆ.  

3 /7

ಹೊಟ್ಟೆ ನೋವು : ಕೆಲವರಿಗೆ ಹೃದ್ರೋಗಕ್ಕೆ ತುತ್ತಾಗುವ ಮೊದಲು ಹೊಟ್ಟೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರರ್ಥ ನೀವು ಶೀಘ್ರದಲ್ಲೇ ಹೃದಯಾಘಾತದಿಂದ ಬಳಲುತ್ತಿರುವ ಸಾಧ್ಯತೆಯಿದೆ ಅದು ಮಾರಣಾಂತಿಕವಾಗಬಹುದು. ಈ ಭಾವನೆಯು ಆಗಾಗ್ಗೆ ಸಂಭವಿಸಿದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ..   

4 /7

ಎಡಗೈಯಲ್ಲಿ ನೋವು : ಕೆಲವರಲ್ಲಿ ಬಲ ಅಥವಾ ಎಡಗೈಯಲ್ಲಿ ಎರಡೂ ತೋಳುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಯಾವುದೇ ಕೆಲಸ ಮಾಡದಿದ್ದರೂ ನೋವಾಗುತ್ತದೆ. ಕೆಲವರಿಗೆ ಎದೆಯ ಎಡಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದು ಹೃದ್ರೋಗದ ಲಕ್ಷಣವೂ ಹೌದು.. ಈ ರೋಗಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.  

5 /7

ಎದೆನೋವು : ಹೆಚ್ಚಿನವರಲ್ಲಿ ಕಂಡುಬರುವ ಈ ನೋವು ರಕ್ತದೊತ್ತಡದ ತೀವ್ರ ಹೆಚ್ಚಳದಿಂದಲೂ ಉಂಟಾಗುತ್ತದೆ. ಆದರೆ ಕೆಲವರಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದಲೂ ನೋವು ಉಂಟಾಗುತ್ತದೆ. ಆದರೂ, ನೀವು ಎದೆ ನೋವು ಅನುಭವಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.   

6 /7

ಈ ನೋವು ಮಾತ್ರವಲ್ಲದೆ ಕೆಲವರಲ್ಲಿ ಗಂಟಲು ನೋವು ಮತ್ತು ದವಡೆ ನೋವು ಕೂಡ ಕಾಣಿಸಿಕೊಳ್ಳುತ್ತವೆ.. ಇವು ಸಹ ಹೃದಯಾಘಾತದ ಲಕ್ಷಣಗಳಾಗಿವೆ. ಇವುಗಳನ್ನು ತಕ್ಷಣ ಅರಿತು, ವೈದ್ಯರನ್ನು ಸಂಪರ್ಕಿಸಿ. ಆದರೆ ಕೆಲವರಿಗೆ ಈ ಯಾವ ಲಕ್ಷಣಗಳೂ ಕಾಣಿಸದಿದ್ದರೂ ಹೃದ್ರೋಗಕ್ಕೆ ಒಳಗಾಗುತ್ತಾರೆ.. ಮಧುಮೇಹದಿಂದ ಬಳಲುತ್ತಿರುವವರು ಹೃದ್ರೋಗದಿಂದ ಬಳಲುವ ಸಾಧ್ಯತೆ ಹೆಚ್ಚು.  

7 /7

ಕೆಲವು ಜನರಲ್ಲಿ, ಯಾವುದೇ ಲಕ್ಷಣಗಳನ್ನು ತೋರಿಸದೆ ಇದ್ದಕ್ಕಿದ್ದಂತೆ ಬರುತ್ತದೆ. ಹೆಚ್ಚಿನ ಒತ್ತಡ ಮತ್ತು ಆತಂಕವು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ಇದಕ್ಕಾಗಿ ವೈದ್ಯರು ಉತ್ತಮ ಪರೀಕ್ಷೆಗಳನ್ನು ನಡೆಸುತ್ತಾರೆ. ಇದರಲ್ಲಿ ಹೃದಯಾಘಾತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಿಳಿದುಕೊಳ್ಳಬಹುದು. ಈ ರೀತಿಯಾಗಿ ನೀವು ಹೃದಯ ಸ್ತಂಭನದಿಂದ ಪಾರಾಗಬಹುದು..