Mohammed Shami farmhouse: ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಯುಪಿಯ ಅಮ್ರೋಹಾ ಜಿಲ್ಲೆಯ ಅಲಿನಗರ ಪ್ರದೇಶದಲ್ಲಿ ಮೊಹಮ್ಮದ್ ಶಮಿ ಬಹಳ ಸುಂದರವಾದ ಫಾರ್ಮ್ ಹೌಸ್ ಹೊಂದಿದ್ದು, ಇದು ಸುಮಾರು 150 ಬಿಘಾಸ್ ಪ್ರದೇಶದಲ್ಲಿ ಹರಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಯುಪಿಯ ಅಮ್ರೋಹಾ ಜಿಲ್ಲೆಯ ಅಲಿನಗರ ಪ್ರದೇಶದಲ್ಲಿ ಮೊಹಮ್ಮದ್ ಶಮಿ ಬಹಳ ಸುಂದರವಾದ ಫಾರ್ಮ್ ಹೌಸ್ ಹೊಂದಿದ್ದು, ಇದು ಸುಮಾರು 150 ಬಿಘಾಸ್ ಪ್ರದೇಶದಲ್ಲಿ ಹರಡಿದೆ.
ಅದ್ಭುತ ಬೌಲಿಂಗ್ʼನಿಂದ ಬ್ಯಾಟ್ಸ್‌ಮನ್ʼಗಳಿಗೆ ಸಿಂಹಸ್ವಪ್ನವಾಗಿ ಕಾಡುವ ಮೊಹಮ್ಮದ್ ಶಮಿ, 2023 ರ ವಿಶ್ವಕಪ್ʼನಿಂದ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದಾರೆ. ಮೊಹಮ್ಮದ್ ಶಮಿ ಇತ್ತೀಚೆಗೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದಾದ ನಂತರ ತಮ್ಮ ಫಿಟ್ನೆಸ್ ಮರಳಿ ಪಡೆಯಲು ಶ್ರಮಿಸುತ್ತಿದ್ದಾರೆ. ಇನ್ನು ಮೊಹಮ್ಮದ್ ಶಮಿ ಅವರ ಫಾರ್ಮ್ ಹೌಸ್ ಬೆಲೆ 20 ಕೋಟಿಗೂ ಹೆಚ್ಚು.
ಮೊಹಮ್ಮದ್ ಶಮಿ ಅವರ ಈ ಫಾರ್ಮ್ ಹೌಸ್ ಹೆಸರು 'ಹಸೀನ್'. ತನ್ನ ಹಳ್ಳಿಯಾದ ಸಹಸ್‌ಪುರ ಅಲಿನಗರದ ಹೆದ್ದಾರಿಯಲ್ಲಿ ಈ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನು ಹೊಂದಿದ್ದಾರೆ.
ಮೊಹಮ್ಮದ್ ಶಮಿ 2015ರಲ್ಲಿ ಗ್ರಾಮದ ಸಮೀಪ ಹೆದ್ದಾರಿಯಲ್ಲಿ ಈ ಭೂಮಿಯನ್ನು ಖರೀದಿಸಿದ್ದರು. ಅದನ್ನು ತಮ್ಮ ಹೆಸರಿಗೆ ನೋಂದಾಯಿಸಿ ಫಾರ್ಮ್ ಹೌಸ್ ಆಗಿ ಪರಿವರ್ತಿಸಿ ಪತ್ನಿ ಹಸೀನ್ ಜಹಾನ್ ಹೆಸರಲ್ಲಿ ‘ಹಸೀನ್ ಫಾರ್ಮ್ ಹೌಸ್’ ಎಂದು ಹೆಸರಿಟ್ಟಿದ್ದರು.
ಶಮಿ ಈ ಫಾರ್ಮ್ ಹೌಸ್ʼನಲ್ಲಿ ಅಭ್ಯಾಸ ನೆಟ್ ಮತ್ತು ಹಲವಾರು ಪಿಚ್ʼಗಳನ್ನು ಸಹ ಮಾಡಿದ್ದಾರೆ. ಉತ್ತರಪ್ರದೇಶದ ಹಲವು ದೊಡ್ಡ ಆಟಗಾರರಾದ ಸುರೇಶ್ ರೈನಾ ಮತ್ತು ಭುವನೇಶ್ವರ್ ಕುಮಾರ್ ಈ ಫಾರ್ಮ್ ಹೌಸ್ʼನಲ್ಲಿ ಅಭ್ಯಾಸ ನಡೆಸಿದ್ದಾರೆ.
ಇಂದಿನ ಮಾರುಕಟ್ಟೆ ಬೆಲೆ ಪ್ರಕಾರ ಈ ಫಾರ್ಮ್ ಹೌಸ್ ಬೆಲೆ 20 ಕೋಟಿ ರೂ.ಗೂ ಹೆಚ್ಚು. ಸೆಪ್ಟೆಂಬರ್ʼನಲ್ಲಿ ಬಾಂಗ್ಲಾದೇಶ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮೊಹಮ್ಮದ್ ಶಮಿ ಕಂಬ್ಯಾಕ್ ಮಾಡಲಿದ್ದಾರೆ. ಶಮಿ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಸಂಪೂರ್ಣ ಫಿಟ್‌ನೆಸ್ ಮರಳಿ ಪಡೆಯಲು ಶ್ರಮಿಸುತ್ತಿದ್ದಾರೆ.