Guru Chandal Yoga: ವಿನಾಶಕಾರಿ ಗುರು ಚಂಡಾಲ ಯೋಗದಿಂದ ಪಾರಾಗಲು ಇಲ್ಲಿವೆ ಸುಲಭ ಪರಿಹಾರ

Guru Chandal Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸಂಯೋಜನೆಯಿಂದ ಕೆಲವು ಶುಭ-ಅಶುಭ ಯೋಗಗಳು ನಿರ್ಮಾಣವಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಗುರು ಚಂಡಾಲ ಯೋಗವನ್ನು ಅಮಂಗಳಕರ ಯೋಗವೆಂದು ಪರಿಗಣಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /8

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ಗ್ರಹಗಳ ಸಂಯೋಜನೆಯಿಂದ ಗ್ರಹದೋಷಗಳು ಅಥವಾ ಅಶುಭ ಯೋಗಗಳು ಉಂಟಾಗುತ್ತವೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಯಾವುದೇ ಗ್ರಹ ದೋಷವಿದ್ದರೂ ಸಹ ಅದು ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. 

2 /8

ಗುರು ಮತ್ತು ಪಾಪ ಗ್ರಹ ರಾಹು ಒಟ್ಟಿಗೆ ಕೂಡಿದಾಗ ವಿನಾಶಕಾರಿ ಗುರು ಚಂಡಾಲ ಯೋಗ ನಿರ್ಮಾಣವಾಗುತ್ತದೆ.   

3 /8

ಗುರು ಚಂಡಾಲ ಯೋಗದಿಂದಾಗಿ, ವ್ಯಕ್ತಿಯು ದೈಹಿಕವಾಗಿ, ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಎಲ್ಲಾ ರೀತಿಯಲ್ಲೂ ತೊಂದರೆಗೊಳಗಾಗುತ್ತಾನೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಚಂಡಾಲ ಯೋಗ ಉಂಟಾದಾಗ ಅದು ಆ ವ್ಯಕ್ತಿಯ ಜೀವನದಲ್ಲಿ ಅನೇಕ ಏರಿಳಿತಗಳನ್ನು ತರುತ್ತದೆ. 

4 /8

ಸದ್ಯ ಮೇಷ ರಾಶಿಯಲ್ಲಿ ವಿನಾಶಕಾರಿ ಗುರು ಚಂಡಾಲ ಯೋಗ ನಿರ್ಮಾಣವಾಗಿದ್ದು, ಅಕ್ಟೋಬರ್ 30 ರಂದು ರಾಹು ಮೇಷ ರಾಶಿಯಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸಿದಾಗ ಈ ಯೋಗವು ಕೊನೆಗೊಳ್ಳುತ್ತದೆ. 

5 /8

ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಚಂಡಾಲ ಯೋಗವು ಆ ವ್ಯಕ್ತಿಯ ಜೀವನದಲ್ಲಿ ಚಾರಿತ್ರ್ಯ ದೋಷವನ್ನು ಉಂಟು ಮಾಡಬಹುದು. ಈ ಯೋಗದಿಂದಾಗಿ ಸಾಕಷ್ಟು ದೈಹಿಕ ನೋವನ್ನು ಅನುಭವಿಸಬೇಕಾಗುತ್ತದೆ. ಈ ಯೋಗವು ವೈವಾಹಿಕ ಜೀವನದಲ್ಲಿ ವೈಷಮ್ಯವನ್ನು ಹೆಚ್ಚಿಸುತ್ತದೆ ಮತ್ತು ಪ್ರತಿ ಕೆಲಸದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ.

6 /8

ಗುರು ಚಂಡಾಲ ಯೋಗದ ಪ್ರಭಾವವನ್ನು ಕಡಿಮೆ ಮಾಡಲು ಸುಲಭ ಪರಿಹಾರವೆಂದರೆ ಮನೆಯ ಪೂಜಾ ಸ್ಥಳವನ್ನು ಶುಚಿಯಾಗಿಡುವುದು. ಜೊತೆಗೆ ನಿಯಮಿತವಾಗಿ ದೇವಸ್ಥಾನಕ್ಕೆ ಭೇಟಿ ನೀಡುವುದು. ಹಿರಿಯರನ್ನು ಗೌರವಿಸುವುದು. ನಮ್ಮ ಸುತ್ತಮುತ್ತಲಿನವರಿಗೆ, ಅಗತ್ಯವಿರುವವರಿಗೆ ನಮ್ಮ ಕೈಲಾದಷ್ಟೂ ಸಹಾಯ ಮಾಡುವುದು. 

7 /8

ಗುರು ಚಂಡಾಲ ದೋಷವಿದ್ದರೆ ಜಾತಕದಲ್ಲಿ ಗುರುವನ್ನು ಬಲಗೊಳಿಸಲು ಗುರುವಿನ ಮಂತ್ರವನ್ನು ಪಠಿಸಬೇಕು. 

8 /8

ಇನ್ನೂ ಜಾತಕದಲ್ಲಿ ರಾಹುವಿನ ಕೆಟ್ಟ ಪ್ರಭಾವವನ್ನು ಕಡಿಮೆ ಮಾಡಲು ಕಪ್ಪು, ನೀಲಿ ಮತ್ತು ಕಂದು ಬಣ್ಣದ ಪದಾರ್ಥಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸುವುದು. ಜೊತೆಗೆ ದುರ್ಗಾ ಚಾಲೀಸಾವನ್ನು ಪಠಿಸುವುದು ಒಳ್ಳೆಯದು. ಇದಲ್ಲದೆ, ಗುರುವಾರ ಉಪವಾಸ ವ್ರತವನ್ನು ಆಚರಿಸಿ ಮತ್ತು ಭಗವಾನ್ ವಿಷ್ಣುವನ್ನು ಪೂಜಿಸಬೇಕು.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.