ಹೊಸ ಕಾರು ಖರೀದಿಗೆ ಹೊರಟಿದ್ದೀರಾ..! ನಿಲ್ಲಿ..ಹೊಸ ನಿಯಮ ಏನಿದೆ ನೋಡಿಕೊಳ್ಳಿ..!

ಹೊಸ ಖರೀದಿಗೆ ಹೊರಟಿದ್ದೀರಾ..ಹಾಗಾದ್ರೆ, ಮೊದಲು ನೀವು ಅಂಶಗಳನ್ನು ಪರಿಗಣಿಸಲೇ ಬೇಕು. ಈಗ ಕಾರು ಖರೀದಿ ವೇಳೆ ಒಂದೇ ಚೆಕ್ ನಿಂದ ಪೇಮೆಂಟ್ ಮಾಡಲು ಸಾಧ್ಯವಿಲ್ಲ. 

New Car Policy: ಹೊಸ ಖರೀದಿಗೆ ಹೊರಟಿದ್ದೀರಾ..ಹಾಗಾದ್ರೆ, ಮೊದಲು ನೀವು ಅಂಶಗಳನ್ನು ಪರಿಗಣಿಸಲೇ ಬೇಕು. ಈಗ ಕಾರು ಖರೀದಿ ವೇಳೆ ಒಂದೇ ಚೆಕ್ ನಿಂದ ಪೇಮೆಂಟ್ ಮಾಡಲು ಸಾಧ್ಯವಿಲ್ಲ.  ಮೋಟಾರು ವಿಮೆ ಸೇವಾ ನೀಡಿಕೆದಾರರ (MISP) ಮಾರ್ಗದರ್ಶಿ ನಿಯಮಗಳನ್ನು ರಿವ್ಯೂ ಮಾಡುವ ಸಮಿತಿ ಹೊಸ ಸಲಹೆ ನೀಡಿದೆ. ಅದರ ಪ್ರಕಾರ ಹೊಸ ಗಾಡಿ ಖರೀದಿ ಮಾಡುವಾಗ ಗಾಡಿಯ ಪೇಮೆಂಟ್ ಗೆ ಒಂದು ಚೆಕ್ ಹಾಗೂ ಇನ್ಸೂರೆನ್ಸ್ ಪ್ರಿಮಿಯಂ (Insurance Premium)ಪಾವತಿ ಮಾಡಲು ಬೇರೆ ಚೆಕ್ ನೀಡಬೇಕಾಗುತ್ತದೆ. 

 

1 /5

IRDAI 2017ರಲ್ಲಿ MISP ಮಾರ್ಗದರ್ಶಿ ನಿಯಮಗಳನ್ನು ರೂಪಿಸಿತ್ತು. ಅದರ  ಉದ್ದೇಶ ಡೀಲರ್ ಮೂಲಕವೇ ವಾಹನಗಳಿಗೆ ವಿಮೆ ಮಾಡಿಸುವುದು. ಮತ್ತು ಅದನ್ನು ಸರಳಗೊಳಿಸುವುದು.  MISP ಎಂದರೆ ವಿಮಾ ಕಂಪನಿ ಅಥವಾ ವಿಮಾ ಮಧ್ಯಂತರ ಘಟಕದ ಪರವಾಗಿ ನೇಮಕಗೊಂಡ ವಾಹನ ವ್ಯಾಪಾರಿ, ತಾನು ಮಾರಾಟ ಮಾಡುವ ವಾಹನಗಳಿಗೆ ವಿಮಾ ಸೇವೆಗಳನ್ನು ಸಹ ಒದಗಿಸುವುದು.

2 /5

.ಜೂನ್ 2019 ರಲ್ಲಿ, IRDAI ಒಂದು ಸಮಿತಿಯನ್ನು ರಚಿಸಿ MISP ಮಾರ್ಗಸೂಚಿಗಳನ್ನು ಪರಿಶೀಲಿಸಲು ಸೂಚಿಸಿತು.. ಈಗ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ. ಇದರಲ್ಲಿ MISP ಮೂಲಕ ಮೋಟಾರು ವಿಮಾ ವ್ಯವಹಾರಕ್ಕೆ ಸಂಬಂಧಿಸಿದ ಹಲವು ಪ್ರಸ್ತಾಪಗಳಿವೆ. ಜೊತೆಗೆ ಅನೇಕ ಸಲಹೆಗಳನ್ನು ನೀಡಿದೆ.  

3 /5

 ಇದರ ಜೊತೆಗೆ, ಮೋಟಾರು ವಿಮಾ ಪಾಲಿಸಿಯನ್ನು ನೀಡುವಾಗ ಗ್ರಾಹಕರಿಂದ ಪ್ರೀಮಿಯಂ ಪೇಮೆಂಟ್ (Premium Payment) ಸಂಗ್ರಹಿಸುವ ಪ್ರಸ್ತುತ ವ್ಯವಸ್ಥೆಯನ್ನು ಸಹ ಸಮಿತಿ ಪರಿಶೀಲನೆ ಮಾಡಿದೆ.  ಗ್ರಾಹಕರು (Customer) ಹೊಸ ಕಾರನ್ನು ಖರೀದಿಸಿದಾಗ ಪೂರ್ಣ ಪಾವತಿ ಒಂದೇ ಚೆಕ್ ನಲ್ಲಿ ಮಾಡ್ತಾರೆ. ಇದರಿಂದ ಪ್ರೀಮಿಯಂ ಬೆಲೆ ಎಷ್ಟು ಎಂದು ಗೊತ್ತಾಗಲ್ಲ. ಅಲ್ಲಿ ಪಾರದರ್ಶಕತೆಯ ಕೊರತೆ ಕಾಣುತ್ತದೆ ಎಂದು ಸಮಿತಿ ಹೇಳಿದೆ.   

4 /5

ಈ ಸಿಸ್ಟಮ್ ಪಾರದರ್ಶಕವಾಗಿಲ್ಲ ಯಾಕೆಂದರೆ, ಎಂಐಎಸ್ ಪಿ  ತನ್ನ ಖಾತೆಯಿಂದ ವಿಮಾ ಕಂಪನಿಗೆ ಪೇಮೆಂಟ್ ಮಾಡುತ್ತದೆ.  ಇದರಿಂದ ಎಷ್ಟು ಪ್ರೀಮಿಯಂ ಪಾವತಿ ಮಾಡಲಾಗಿದೆ ಎಂಬ ಮಾಹಿತಿ ಗ್ರಾಹಕರಿಗೆ ಲಭ್ಯವಾಗುವುದಿಲ್ಲ. ಯಾಕೆಂದರೆ, ಗ್ರಾಹಕರು ಗಾಡಿಯ ಸಂಪೂರ್ಣ ಬೆಲೆ ಪಾವತಿ ಮಾಡಿರುತ್ತಾರೆ. ಅದರಲ್ಲಿ ವಿಮೆ ಎಷ್ಟರದ್ದು, ಅದರಲ್ಲಿ ರಿಯಾಯಿತಿ ಎಷ್ಟು..ಕವರೇಜ್ ಏನಿದೆ. ಅಪ್ಶನ್ ಏನು ಈ ಯಾವ ಮಾಹಿತಿಯೂ ಗ್ರಾಹಕರಿಗೆ ಸಿಗಲ್ಲ  

5 /5

MISP ಮೂಲಕ ಲಭ್ಯವಾಗಲಿರುವ ವಿಮಾ ಕಂಪನಿಗೆ ಗ್ರಾಹಕರೇ ನೇರ ಪಾವತಿ ಮಾಡಬೇಕು ಎಂಬ ಸಲಹೆಯನ್ನು ಕಮಿಟಿ  ನೀಡಿದೆ. ಕಾರಿನ ಮೌಲ್ಯದ ಜೊತೆ  ವಿಮೆಯ ಮೌಲ್ಯವನ್ನೂ ಸೇರಿಸಬಾರದು. ವಿಮೆಯ ಮೊತ್ತವನ್ನು ನಂತರ ವಿಮಾ ಕಂಪನಿ ಖಾತೆಗೆ ವರ್ಗಾಯಿಸಬೇಕು.  ಇದರಿಂದ ವ್ಯವಸ್ಥೆಯಲ್ಲಿ ಪಾರದರ್ಶಕತೆ ಸಿಗಲಿದೆ.  MISP ಮೂಲಕ ವಿಮಾ ಕಂಪನಿಗಳಿಗೆ ಮೋಟಾರು ವಿಮೆಯ ರೂಪಾಯಿದಲ್ಲಿ  ಸಾಕಷ್ಟು ವ್ಯವಹಾರವಾಗುತ್ತದೆ.  ಇದಕ್ಕೊಂದು ಬಲವಾದ ಪ್ರೇಮ್ ವರ್ಕ್ ಅಗತ್ಯವಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.  MISP ಗೆ ವಿಮಾ ಕಂಪನಿ ಮತ್ತು ವಿಮಾ ಪ್ರತಿನಿಧಿಗಳಿಂದ ಸಿಗುವ ಪುರಸ್ಕಾರಗಳ ಬಗ್ಗೆಯೂ ಸಮಿತಿ ದೃಷ್ಟಿ ಹಾಯಿಸಿದೆ.  ಸಿಗುವ ಬಹುಮಾನಗಳ ಬಗ್ಗೆಯೂ ಹೇಳಬೇಕು ಎಂದು ಹೇಳಿದೆ.